
ಹಾಸನ: ಆಯುಧ ಪೂಜೆಯ ಹಬ್ಬದ ಹಿನ್ನಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರದ ಮಹಾವೀರವೃತ್ತ ಹಾಗೂ ಸುತ್ತಮುತ್ತ ವ್ಯಾಪಾರ ಜೋರಾಗಿಯೇ ನಡೆದರೂ ಪ್ರಮುಖವಾಗಿ ಖರೀದಿ ಮಾಡುವ ಬೂದಕುಂಬಳ ಬೆಳೆಯಲ್ಲಿ ತೀವ್ರ ಕುಸಿತ ಕಂಡು ಬಂದಿತು.
ಇನ್ನು ಉಳಿದಂತೆ ಸೇವಂತಿಗೆ ಮಾರಿಗೆ 8೦ ರಿಂದ 1೦೦ ರೂಗಳಿದ್ದರೇ, ನಿಂಬೆ ಹಣ್ಣು ಎರಡಕ್ಕೆ 1೦ ರೂಗಳಿತ್ತು. ಮಾವಿನಕಟ್ಟು ಒಂದಕ್ಕೆ 2೦ ರಿಂದ 1೦ ರೂಗಳಿತ್ತು. ಸೇಬು 2೦೦ ರೂಗಳಿತ್ತು. ಆದರೇ ಈ ಬಾರಿ ಬೂದಕುಂಬಳಕಾಯಿ ಕೆಜಿಗೆ 2೦ , 1೦ ಇದ್ದರೇ ಇನ್ನು ಕೆಲ ವ್ಯಾಪಾರಸ್ತರು ಇಪ್ಪತ್ತು, ಮೂವತ್ತು ರೂಗಳಿಗೆ ಮಾರಾಟ ಮಾಡುತ್ತಿದ್ದರು. ಕುಂಬಳಕಾಯಿಗಳು ಹೆಚ್ಚಾಗಿ ಮಾರುಕಟ್ಟೆಗೆ ಬಂದು ಈ ಬೆಲೆ ಕುಸಿತ ಕಂಡು ಬೆಳೆಗಾರರು ಆತಂಕದಲ್ಲಿದ್ದರು.



