
ಚನ್ನರಾಯಪಟ್ಟಣ :- ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲಿರುವ ಶ್ರೀ ಮಹಾಲಕ್ಷ್ಮಿ ಹಾಗೂ ಮದ್ಧರ ಲಕ್ಷ್ಮಮ್ಮ ದೇವಾಲಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಶರನ್ನನವರಾತ್ರಿ ಮಹೋತ್ಸವ ಮತ್ತು ವರ್ಧಂತಿ ಮಹೋತ್ಸವ ಹಾಗೂ ಸರ್ವೇಶ್ವರಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಖ್ಯಾತ ಭರತನಾಟ್ಯ ಕಲಾವಿದೆ ವಿದೂಷಿ ಡಾ. ಸ್ವಾತಿ ಪಿ ಭಾರದ್ವಾಜ್ ರವರ ಸಾಧನೆಯನ್ನು ಗುರುತಿಸಿ ಸರ್ವೇಶ್ವರಿ ಸೇವಾ ರತ್ನ ಪ್ರಶಸ್ತಿಗೆ ನೀಡಿ ಗೌರವಿಸಲಾಯಿತು,
ಇದೇ ಸಂದರ್ಭದಲ್ಲಿ ಪರಮಪೂಜ್ಯ ಜಪಾನಂದ ಜೀ ಮಹಾರಾಜ್, ಶಿಕ್ಷಣ ತಜ್ಞ ರಘು ಕೌಟಿಲ್ಯ, ಮಾಜಿ ಕೌಶಲ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಮುರಳಿದರ ಹಾಲಪ್ಪ, ರಂಗಸ್ವಾಮಿ, ಧರ್ಮಾಧಿಕಾರಿಗಳಾದ ಶ್ರೀ ಲಕ್ಷ್ಮೀಶ್, ಪುರುಷೋತ್ತಮ್ ಸೇರಿದಂತೆ ಇತರ ಹಾಜರಿದ್ದರು.

