
ಹಾಸನ : -ಕಳೆದ ವಿದಾನಸಭೆ ಚುನಾವಣೆ ಫಲಿತಾಂಶ ನೋಡಿದ್ರೆ ಹಾಸನದಲ್ಲಿ ಪಕ್ಷ ಚನ್ನಾಗಿದೆ. ಬಿಜೆಪಿಗೆ ಮತ್ತು ಜೆಡಿಎಸ್ ಗೆ ಪರಿಸ್ಥಿತಿ ಕೆಟ್ಟಿದೆ.
ಇನ್ನು ರಾಜ್ಯದ ಬರವನ್ನು ಸಮರ್ಪಖವಾಗಿ ನಿಬಾಯಿಸುತ್ತೇವೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನನಗೆ ವೀಕ್ಷನಾಗಿ ಪಕ್ಷ ನೇಮಕಮಾಡಿದೆ.
ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈಬಾರಿ ಸಂಸತ್ ಸದಸ್ಯರನ್ನು ಗೆಲ್ಲಿಸಬೇಕೆಂದು ಪ್ರಯತ್ನ ಇದೆ. ಆಕಾಂಕ್ಷಿಗಳ ಬಗ್ಗೆ ಮಾಹಿತಿ ಪಡೆಯುತ್ತೇವೆ.
ಅಂತಿಮವಾಗಿ ಪಕ್ಷ ಕೈಗೊಳ್ಳೊ ತೀರ್ಮಾನಕ್ಕೆ ಎಲ್ಲರು ಬದ್ದವಾಗಿ ಇರುತ್ತಾರೆ. ಕಳೆದ ವಿದಾನಸಭೆ ಚುನಾವಣೆ ಫಲಿತಾಂಶ ನೋಡಿದ್ರೆ ಹಾಸನದಲ್ಲಿ ಪಕ್ಷ ಚನ್ನಾಗಿದೆ. ಬಿಜೆಪಿಗೆ ಮತ್ತು ಜೆಡಿಎಸ್ ಗೆ ಪರಿಸ್ಥಿತಿ ಕೆಟ್ಟಿದೆ. ಬೆಳಗಾವಿಯಲ್ಲಿ ಏನೂ ಸಮಸ್ಯೆ ಇಲ್ಲ.
ಬಿಜೆಪಿಯಲ್ಲಿ ಹಿಂದೆ ಸರ್ಕಾರ ಇದ್ದಾಗ ಇದೆಲ್ಲ ಇರಲಿಲ್ಲವಾ! ನಮ್ಮ ಪಕ್ಷದಲ್ಲಿ ಏನೂ ಗೊಂದಲವು ಇಲ್ಲ. ಸಮಸ್ಯೆಯು ಇಲ್ಲಾ. ಚುನಾವಣೆಗು ಮುನ್ನ ಎಲ್ಲ ಹೇಳಿದ್ರು ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಒಂದಾಗಲ್ಲ ಅಂತಾ. ಸೀಟು ಹಂಚಿಕೆಯಲ್ಲಿ ಗೊಂದಲ ಆಗುತ್ತೆ ಅಂತಾ, ಅದರೆ ಸೀಟು ಹಂಚಿಕೆಯು ಆಯ್ತು.
ಈಗ ನಮ್ಮ ಸರ್ಕಾರವು ಬಂತು. ಸರ್ಕಾರ ಬಂದ ಬಳಿಕ ಸಿಎಂ ಆಯ್ಕೆ ಗೊಂದಲ ಅಂತಾ ಅಂದ್ರು. ಸಿಎಂ ಆಯ್ಕೆಯು ಚನ್ನಾಗಿಯೇ ಅಯ್ತು. ನಾಲ್ಕು ಗ್ಯಾರಂಟಿ ಯೋಜನೆಯು ಜಾರಿಯಾಗಿ ಚನ್ನಾಗಿ ನಡೆಯುತ್ತಿದೆ.
ಈಗ ಬರ ಬಂದಿದೆ ಇದನ್ನು ಸರಿಯಾಗಿ ಎದುರಿಸುತ್ತೇವೆ. ಸರ್ಕಾರಲ್ಲಿ ಕಮಿಷನ್ ಬಗ್ಗೆ ಕುಮಾರಸ್ವಾಮಿ ಆರೋಪ ಪ್ರಕರಣವಾಗಿ ಮಾತನಾಡಿ, ಕೈಮುಗಿಯುವೇ ಅವರು ದೊಡ್ಡ ನಾಯಕರು ಎಂದು ಹೇಳೀಕೆ ನೀಡುವ ಮೂಲಕ ಚಲುವರಾಯಸ್ವಾಮಿ ಕಾಲೆಳೆದಂತಿತ್ತು.
ಸಕಾಲಕ್ಕೆ ಬಾರದೆ ಕೈಕೊಟ್ಟ ಮಳೆಯಿಂದ ರಾಜ್ಯದಲ್ಲಿ ಬರ ಆವರಿಸಿದ್ದು, ಮೊದಲ ಹಂತದಲ್ಲಿ ೧೯೫ ತಾಲೂಕು ಹಾಗೂ ಎರಡನೇ ಹಂತದಲ್ಲಿ ೨೧ ತಾಲೂಕುಗಳನ್ನು ಬರಪೀಡಿತ ತಾಲೂಕಾಗಿ ಸರ್ಕಾರ ಘೋಟಣೆ ಮಾಡದಿದೆ.
ಕೇಂದ್ರ ಬರ ಅಧ್ಯಯನ ತಂಡವೂ ಭೇಟಿ ನೀಡಿ ಹೋಗಿದೆ. ಬರಪರಿಹಾರವಾಗಿ ೫ ಸಾವಿರದ ೨೧ ಕೋಟಿ ರೂ ನೀಡುವಂತೆ ಕೇಂದ್ರಕ್ಕೆ ವರದಿ ನೀಡಿದ್ದೇವೆ. ಕೇಂದ್ರ ಸರ್ಕಾರದ ಸಚಿವರನ್ನು, ಕಾರ್ಯದರ್ಶಿಗಳನ್ನು ಬೇಟಿ ಮಾಡಲು ನಾನು ಮತ್ತು ಸಚಿವ ಕೃಷ್ಣೆಬೈರೈಗೌಡರು ಸಮಯ ಕೇಳಿದ್ದೇವೆ. ಆದರೆ ಕೇಂದ್ರ ಸಚಿವರ ಸಮಯ ನೀಡುತ್ತಿಲ್ಲ. ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಇಡೀ ರಾಜ್ಯದಲ್ಲಿ ರಾಜ್ಯದಲ್ಲಿ ೫ ಸಾವಿರದ ೨೧ ಕೋಟಿ ರೂ ಬೆಳೆಹಾನಿ ವರದಿಯಾಗಿದ್ದರೆ, ಹಾಸನ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ೧೩೧. ೬೨ ಕೋಟಿ ರೂ ಬೆಳೆ ನಷ್ಟದ ವರದಿ ನೀಡಲಾಗಿದೆ, ಹಾಸನ ಜಿಲ್ಲೆಯ ಏಳು ತಾಲ್ಲೂಕು ಗಳನ್ನು ಬರ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.
ಸಕಲೇಶಪುರ ಸಾಧರಣ ಎಂದು ಘೋಷಣೆ ಮಾಡಲಾಗಿದೆ. ಅದನ್ನು ಸಹ ಪೂರ್ಣ ಬರವೆಂದು ಘೋಷಣೆ ಮಾಡಲಾಗುವುದು.
ಕಾಂಗ್ರೆಸ್ ಸರ್ಕಾರ ಪರ್ಸೆಂಟೇಜ್ ಆಡಳಿತ ನಡೆಸುತ್ತಿದೆ, ಆದರಿಂದ ವಿದ್ಯುತ್ ಅಭಾವ ಸೃಷ್ಠಿಯಾಗಿದೆ ಮಾಜಿ ಸಿಎಂ ಕುಮಾರಸ್ವಾಮಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು, ಕುಮಾರಸ್ವಾಮಿಯವರು ಮಾತನಾಡಿ, ಅತ್ಯಂತ ಪ್ರಭಾವಿ ವ್ಯಕ್ತಿಗಳು, ಅವರು ಸಹ ಎರಡು ಭಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ್ದಾರೆ. ಅವರ ಆಡಳಿತವನ್ನು ಒಂದು ಬಾರಿ ಜೊತೆಯಲಿದ್ದು ನೋಡಿದ್ದೇನೆ, ಇನ್ನೊಂದು ಭಾರಿ ದೂರದಿಂದಲೆ ನೋಡಿದ್ದೇನೆ.
ಕುಮಾರಸ್ವಾಮಿಯವರು ಏನಾದರು ಇದ್ದರೆ ಸಲಹೆ ನೀಡಲಿ, ಅವರು ಗಣ್ಯರಿದ್ದರೆ, ಸಾರ್ವಜನಿಕರಿಗೆ ಅನುಕೂಲವಾಗುವಾದರೆ ಅವರ ಸಲಹೆಗಳನ್ನು ಈಡೇರಿಸೋಣ. ಕೈಮುಗಿಯುವೇ ಅವರು ದೊಡ್ಡ ನಾಯಕರು ಎಂದು ಹೇಳೀಕೆ ನೀಡುವ ಕಾಲೇಳೆದಂತಿತ್ತು. ಡಿಸಿಎಂ ಗೆ ವಿದಸನಸೌದದಲ್ಲಿ ಪ್ರತ್ಯೇಕ ವೀಟಿಂಗ್ ಹಾಲ್ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಇದು ಸಿಎಂ ಡಿಸಿಎಂ ಅವರ ವಿವೇಚನ ಅದಿಕಾರ.
ಒಂದು ಕೊಠಡಿ ತಗೊಂಡ್ರೆ ತಪ್ಪೇನು? ಸಚಿವರು, ಅದಿಕಾರಿಗಳ ಸಭೆ ಮಾಡಬೇಕಾಗುತ್ತೆ ಅದರಲ್ಲಿ ಏನಿದೆ, ಇದರಿಂದ ಎರಡು ಶಕ್ತಿ ಕೇಂದ್ರ ಆಗಲ್ಲ ಎಂದ ಚಲುವರಾಯಸ್ವಾಮಿ ಹೇಳಿದರು. ಇದೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಪದವಿದರ ಕ್ಷೇತ್ರದ ಶಾಸಕ ಮಾದೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಬನವಾಸೆ ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.
