
ಹಾಸನ : ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಪ್ತ, ಗುತ್ತಿಗೆದಾರನ ಮೇಲೆ ಅಟ್ಯಾಕ್ ಪ್ರಕರಣ ತನಿಖೆ ವೇಳೆ ಬೆಂಗಳೂರು ಮೂಲದ ಐವರು ಮತ್ತು ಕೋಲಾರದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧಿಕಾರಿ ಸೇರಿ ಒಟ್ಟು ಆರು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾಮದ್ ಸುಜೀತಾ ಅವರು ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಅಕ್ಟೋಬರ್ ೧೦ ರಂದು ರೇವಣ್ಣ ಮನೆಯಿಂದ ವಾಪಸ್ಸು ಹೋಗುವಾಗ ಕಾರಿನ ಮೇಲೆ ಅಟ್ಯಾಕ್ ಮಾಡಿ ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿದ ಅಶ್ವಥ್ ರನ್ನ ಕಿಡ್ನಾಪ್ ಮಾಡೋ ಪ್ಲಾನ್ ಹೊಂದಿದ್ದ ಖದೀಮರ ಗ್ಯಾಂಗ್.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಡೋ ಸ್ಕೆಚ್ ಹಾಕಿದ್ದ ಖದೀಮರು. ಅಶ್ವತ್ ತಪ್ಪಿಸಿಕೊಂಡು ತಗಲಾಕಿಕೊಂಡ ಖದೀಮರ ಗ್ಯಾಂಗ್ ವಿಚಾರಣೆಲ್ಲಿ ಕೋಲಾರ ಐಎಸ್ ಡಿ ಇನ್ಸ್‌ಪೆಕ್ಟರ್ ಅಶೋಕ್ ಭಾಗಿ ಆಗಿರುವ ಶಂಕೆಯಲ್ಲಿ ನಿನ್ನೆ ರಾತ್ರಿಯೇ ಇನ್ಸ್ ಪೆಕ್ಟರ್ ಸೇರಿ ಒಟ್ಟು ಆರು ಜನ ಆರೋಪಿಗಳನ್ನ ಬೆಂಗಳೂರಿನಲ್ಲಿ ಬಂಧನ ಮಾಡಿರೋ ಪೊಲೀಸರು. ಉಳಿದ ಇಬ್ಬರ ಶೋಧ ಕಾರ್ಯ ಮುಂದುವರೆದಿದೆ.
ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸೂಕ್ತ ತನಿಖೆಗೆ ಒತ್ತಾಯ ಮಾಡಿದ್ದು, ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳ ರಚನೆ ಮಾಡಿದ್ದ ಎಸ್ಪಿ ಮೊಹಮ್ಮದ್ ಸುಜೀತಾ. ಶ್ರೀಮಂತರನ್ನು ಟಾರ್ಗೆಟ್ ಮಾಡಿ ಕಿಡ್ನಾಪ್ ಮಾಡಿ ಹಣಕ್ಕಾಗಿ ಡಿಮ್ಯಾಂಡ್ ಮಾಡೋ ಕತರ್ನಾಕ್ ಗ್ಯಾಂಗ್.
೮ ಜನ ಆರೋಪಿಗಳಲ್ಲಿ ಇಬ್ಬರ ಶೋಧ ಕಾರ್ಯ ಮುಂದುವರೆದಿದ್ದು, ಬಂಧಿಸಿದವರಲ್ಲಿ ಬೆಂಗಳೂರು ಮೂಲದ ಆರ್. ಸತೀಶ್ ೩೮ ವರ್ಷ, ಚನ್ನರಾಯಪಟ್ಟಣದ ಬಿ.ಎಸ್. ತೇಜಸ್ವಿ ೩೭ ವರ್ಷ, ಅರವಿಂದ್ ೪೦ ವರ್ಷ, ಬೆಂಗಳೂರು ಮೂಲದ ಸಿ. ಮುರುಗನ್, ಆರ್. ಮಧುಸೂದನ್ ೩೮ ವರ್ಷ, ಜೆ. ಅಶೋಕ್ ಆಗಿದ್ದಾರೆ. ಈ ಹಿಂದೆ ಕೂಡ ಇಂತಹುದೆ ಪ್ರಕರಣಗಳಲ್ಲಿ ಬಾಗಿಯಾಗಿರೊ ಬಗ್ಗೆ ಮಾಹಿತಿ ಇದ್ದು, ಆರೋಪಿಗಳನ್ನು ಬಂದಿಸಿ ಒಂದು ಇನ್ನೋವಾ, ಒಂದು ಐ ೧೦, ಒಂದು ಫೋರ್ಡ್ ಕಾರು ಎಂಟು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಕೋಲಾರದ ವರ್ತೂರ್ ಪ್ರಕಾಶ್ ಕಿಡ್ನಾಪ್ ಕೇಸ್ ನಲ್ಲಿ ಭಾಗಿಯಾಗಿದ್ದ ಲೋಹಿತ್ ಹಾಗು ಪ್ರವೀಣ್ ಕೂಡ ಈ ಪ್ರಕರಣ ಭಾಗಿಯಾಗಿರೊ ಬಗ್ಗೆ ಮಾಹಿತಿ ದೊರಕಿದೆ ಎಂದರು. ಇದೆ ವೇಳೆ ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ತಮ್ಮಯ್ಯ, ಡಿವೈಎಸ್ಪಿ ಡಿ. ಅಶೋಕ್, ಉಪವಿಭಾಗದ ಪಿ. ರವಿಪ್ರಸಾದ್ ಇತರರು ಉಪಸ್ಥಿತರಿದ್ದರು.
