ಹಾಸನ : ನಗರದ ಹೊರವಲಯ ಹೊಳೆನರಸೀಪುರ ರಸ್ತೆ ಬಳಿ ಇರುವ ನಂದಗೋಕುಲ ಕನ್ವೇನ್ಷನ್ ಹಾಲ್ ನಲ್ಲಿ ಭಾನುವಾರದಂದು ೨೦೨೪ರ ಲೋಕಸಭಾ ಚುನಾವಣೆ ಹಿನ್ನಲೆ ಆಯೋಜನೆಗೊಂಡಿದ್ದ ಕಾಂಗ್ರೆಸ್ ಸಭೆಯಲ್ಲಿ ಶುರುವಾಗುವ ಮೊದಲೆ ಗದ್ದಲ, ಗೊಂದಲ ಮಾತಿನ ಚಕಾಮುಕಿ ನಡೆದು ಸಭೆಗೆ ಆಗಮಿಸಿದ್ದ ಕೃಷಿ ಸಚಿವ ಚೆಲುವರಾಯಸ್ವಾಮಿ ಅಸಮಧಾನ ಹೊರ ಹಾಕಿದ ಪ್ರಸಂಗ ನಡೆಯಿತು.

ಕಾಂಗ್ರೆಸ್ಮು ಮುಖಂಡ ಹೆಚ್ ಕೆ ಮಹೇಶ್ ಅವ್ರಿಗೆ ವೇದಿಕೆ ಮೇಲೆ ಆಸನ ಸಿಕ್ಕಿಲ್ಲ, ಇನ್ನು ಪ್ಲೆಕ್ಸ್ ನಲ್ಲಿ ಶಾಸಕರ ಪೋಟೊ ಹಾಕಿಲ್ಲ ಸೇರಿದಂತೆ ಇತರೆ ಕಾರಣಕ್ಕೆ ಗದ್ದಲ ಮಾಡಿದ ಕೈ ಕಾರ್ಯಕರ್ತರ. ಕೂಗಾಟ ನಡೆಸಿದರು. ವೇದಿಕೆ ಮೇಲೆ ಕಾರ್ಯಕರ್ತರ ನಡೆಗೆ ಬೇಸರ ಹೊರಹಾಕಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು, ನೀವು ಈ ರೀತಿ ಗಲಾಟೆ ಮಾಡಿದ್ರೆ ನಾನು ವಾಪಸ್ ಹೊರಟು ಹೋಗ್ತಿನಿ. ನನ್ನ ೪೦ ವರ್ಷದಲ್ಲಿ ಈ ರೀತಿ ಸಭೆ ನಾನು ನೋಡಿಲ್ಲ. ನೀವು ಈ ರೀತಿ ಮಾಡಿದ್ರೆ ಕಷ್ಟ, ಎಲ್ಲವನ್ನ ಸರಿ ಮಾಡೋಣ, ಸಣ್ಣ ಪುಟ್ಟ ವ್ಯತ್ಯಾಸಗಳನ್ನ ಸರಿ ಮಾಡಿಕೊಂಡು ಹೋರಾಡೋಣ ಎಂದು ಕಾರ್ಯಕರ್ತರನ್ನ ಸಮದಾನಪಡಿಸಿ ಸಭೆ ಹತೋಟಿಗೆ ತಂದ ಸಚಿವ ಚೆಲುವರಾಯಸ್ವಾಮಿ.

ಲೋಕಾಸಭೆ ಚುನಾವಣೆಯು ಇನ್ನು ನಾಲ್ಕೈದು ತಿಂಗಳಿದ್ದು, ಮುಂಚಿತವಾಗಿಯೇ ಸಭೆ ಮಾಡಲು ಬಂದಿದ್ದೇವೆ. ಇಲ್ಲಿ ಒಬ್ಬರ ನಿರ್ಣಯ ತೆಗೆದುಕೊಳ್ಳುವುದಿಲ್ಲ. ಎಲ್ಲಾರೂ ಸೇರಿ ಒಂದು ಉತ್ತಮವಾದ ನಿರ್ಧಾರ ತೆಗೆದುಕೊಳ್ಳುತ್ತೇವೆ.

ಹಾಸನದಲ್ಲಿ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಆಗಲೇಬೇಕು ಎಂಬುದು ನಮ್ಮ ನಿರ್ಣಯವಾಗಲಿ. ಯಾರೆ ಅಭ್ಯರ್ಥಿ ಆದರೂ ಇದರಲ್ಲಿ ನಮ್ಮ ವಯಕ್ತಿಕ ಹಿತಾಸಕ್ತಿ ಬೇಡ. ನಾನು ಇಲ್ಲಿನ ಎಲ್ಲಾರನ್ನು ದೂರದಲ್ಲೆ ನೋಡುತ್ತಿದ್ದು, ಹಿಂದೆ ಮಧು ಮಾದೇಗೌಡ ಅವರನ್ನು ಅಭ್ಯರ್ಥಿ ಮಾಡಿದಾಗ ಎಷ್ಟು ಒಗ್ಗಟ್ಟಾಗಿ ಕೆಲಸ ಮಾಡಿದ್ದೀರಿ, ಆ ಸಮಯದಲ್ಲಿ ಸಿದ್ದರಾಮಯ್ಯ ಅವರು ನೀವು ನೂರಕ್ಕೆ ನೂರರಷ್ಟು ಗೆಲ್ಲುವುದಕ್ಕೆ ಆಗುವುದಿಲ್ಲ ಎಂದಿದ್ದರು.

ಗೆಲ್ಲಿಸುವುದಾಗಿ ಹೇಳಿ ಗೆಲ್ಲಿಸಿದಾಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಆಶ್ಚರ್ಯವಾಯಿತು ಎಂದರು.

ಪಕ್ಷದಲ್ಲಿ ಒಗ್ಗಟ್ಟು ಇದ್ದರೇ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಅನೇಕ ಸಂದರ್ಭದಲ್ಲಿ ನಿದರ್ಶನ ನೋಡಿದ್ದೇವೆ. ಕೆ.ಆರ್.ಪೇಟೆಯಲ್ಲಿ ಆಕಾಸ್ಮಿತವಾಗಿ ಸೋತಿದ್ದು, ಹಾಸನ ಜಿಲ್ಲೆಯಲ್ಲಿ ಅನೇಕ ಬಾರಿ ಹಿನ್ನಡೆಯಾಗಿದೆ. ಆದರೇ ನಾವು ಈ ಸಭೆಗೆ ಬಂದಾಗ ಈ ರೀತಿ ನಡೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಸಣ್ಣಪುಟ್ಟ ವ್ಯತ್ಯಾಸ ಇದ್ದೆ ಇರುತ್ತದೆ. ಇದಕ್ಕೆ ಒಂದು ದಾರಿ ಹುಡುಕೋಣ. ಎಲ್ಲಾರು ಒಪ್ಪಿಕೊಳ್ಳುವ ಸೂಕ್ತವಾದ ಅಭ್ಯರ್ಥಿಯನ್ನು ನಿಮ್ಮ ಎದುರೇ ಆಯ್ಕೆ ಮಾಡೋಣ. ಯಾರು ದುಡಕ ಬೇಡಿ ಎಲ್ಲಾರು ತಾಳ್ಮೆ ತೆಗೆದುಕೊಳ್ಳಿ. ಕಳೆದುಕೊಳ್ಳಭೇಡಿ ಎಂದು ಮನವಿ ಮಾಡಿದರು. ಇದರಲ್ಲಿ ವಯಕ್ತಿಕವಾಗಿ ಯಾರು ಸಂಬಂಧವಿಲ್ಲ. ಯಾರಾರು ಅಭ್ಯರ್ಥಿ ಆಕಂಕ್ಷಿಗಳಿದ್ದಾರೆ ಹೆಸರಿನ ಪಟ್ಟಿ ನೀಡಿ ಎಲ್ಲಾವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನೀಡಲಾಗುವುದು.

ನಿಮ್ಮ ಶ್ರಮದ ದುಡಿಮೆಗೊಸ್ಕರ ಹೊಸ ಅಧ್ಯಾಯನ ಬರೆಯಲು ನಾನು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜೊತೆಗೆ ಇರುತ್ತೇವೆ. ಇವತ್ತಿನಿಂದಲೇ ಪಕ್ಷದ ಕಾರ್ಯಕರ್ತರು ತಾಳ್ಮೆಯಿಂದ ಯಾವ ತರಹದ ಸಭೆ ಸಮಾರಂಭವನ್ನು ಗೊಂದಲ ಮಾಡದೇ ಒನ್ಲೈನ್ ಆಗಿರಲಿ ಎಂದು ಸಲಹೆ ನೀಡಿದರು. ಹೈಕಾಮಂಡ್ ಯಾರನ್ನೆ ಅಭ್ಯರ್ಥಿಯಾಗಿ ನಿಲ್ಲಿಸಿದರೂ ಅವರನ್ನು ಗೆಲ್ಲಿಸಿಕೊಂಡು ಬರುವ ಕೆಲಸವನ್ನು ನಾವುಗಳು ಮಾಡೋಣ ಎಂದು ಕರೆ ನೀಡಿದರು.

ಶಾಸಕ ಆನಂದ್ ಮಾತನಾಡಿ, ಹಾಸನ ಜಿಲ್ಲೆಯ ಶಾಸಕರು ಸೋಮಾರಿಯಾಗಿದ್ದು, ಎಲ್ಲೊ ಕಾಣಿಸುವುದೇ ಇಲ್ಲ. ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಶಾಸಕ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ಬಿ. ಶಿವರಾಂ, ಮಾಜಿ ಶಾಸಕ ಗೋಪಾಲಸ್ವಾಮಿ, ಮುರುಳಿ ಮೋಹನ್, ಮಧು ಮಾದೇಗೌಡ, ಹೆಚ್.ಕೆ. ಮಹೇಶ್, ಲಕ್ಣ್ಮಣ್, ತಾರ ಚಂದನ್, ವಿನಯ್ ಗಾಂದಿ, ಬನವಾಸೆ ರಂಗಸ್ವಾಮಿ, ಸಿ.ಎಸ್. ಪುಟ್ಟೇಗೌಡ, ಶ್ರೇಯಸ್ ಪಟೇಲ್, ಬಿ.ಪಿ. ಮಂಜೇಗೌಡ, ಹೆಚ್.ಕೆ. ಜವರೇಗೌಡ, ದಿನೇಶ್, ರಘು, ಬಾಲಶಂಕರ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *