ಹಾಸನ : ನಗರದ ಸಿಟಿ ಬಸ್ ನಿಲ್ದಾಣ ರಸ್ತೆ ಬಳಿ ಇರುವ ಪೆಂಡಲ್ ಗಣಪತಿ ಆವರಣದಲ್ಲಿ ಬೆಂಗಾಲಿ ವಿಶ್ವಕರ್ಮ ಸಮಾಜದವತಿಯಿಂದ ೧೦ನೇ ವರ್ಷದ ದುರ್ಗಾ ಪೂಜೆ ಮತ್ತು ದಸರಾ ಹಬ್ಬದ ಕಾರ್ಯಕ್ರಮಗಳು ಅಕ್ಟೋಬರ್ ೨೦ ರಿಂದ ೨೪ರ ವರೆಗೂ ಪ್ರತಿನಿತ್ಯ ವಿಶೇಷ ಪೂಜೆ ಮತ್ತು ಪ್ರಸಾದ್ ವಿನಿಯೋಗ ಏರ್ಪಡಿಸಲಾಗಿದೆ. ಈ ಹಿಂದೆ ದೇವಿಗೆರೆ ಆವರಣದಲ್ಲಿ ಕಾರ್ಯಕ್ರಮ ನಡೆಸಲಾಗುತಿತ್ತು..

ಈಗ ಪೆಂಡಲ್ ಗಣಪತಿ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲು ಜಾಗ ನೀಡಿದ್ದಾರೆ ಎಂದರು. ಅಕ್ಟೋಬರ್ ೨೦ರಂದು ಶುಕ್ರವಾರದಂದು ಮಹಾ ಷಷ್ಠಿ ಪ್ರಯುಕ್ತ ಬೆಳಗಿನಿಂದ ಕಳಸ ಸ್ಥಾಪನೆ ಪ್ರಾರಂಭವಾಗಿ ರಾತ್ರಿವರೆಗೂ ನಡೆದು, ವಿಶೇಷ ಪೂಜೆಗಳು ಮಾಡಿ ತೀರ್ಥ ಪ್ರಸಾದ ವಿನಿಯೋಗ ನಡೆದಿದೆ. ಅಕ್ಟೋಬರ್ ೨೧ರ ಶನಿವಾರದಂದು ಮಹಾ ಸಪ್ತಮಿ ಅಂಗವಾಗಿ ಬೆಳಿಗ್ಗೆಯಿಂದ ಸಂಜೆವರೆಗೂ ವಿವಿಧ ಪೂಜಾ ಕಾರ್ಯಗಳು ಜರುಗಿದೆ. ಅಕ್ಟೋಬರ್ ೨೨ರ ಭಾನುವಾರದಂದು ಮಹಾಷ್ಟಮಿ ಪ್ರಯುಕ್ತ ಬೆಳಿಗ್ಗೆಯಿಂದ ಸಂಜೆವರೆಗೂ ವಿಶೇಷ ಪೂಜಾ ಕಾರ್ಯಗಳು ನಡೆದು ಪ್ರಸಾದ ವಿತರಿಸಲಾಗುವುದು.

ಇನ್ನು ಸೋಮವಾರದಂದು ಎಂದಿನಂತೆ ಪೂಜೆ ನಡೆದ ಕೊನೆಯ ದಿವಸ ಮಂಗಳವಾರದಂದು ಬೆಳಗಿನಿಂದಲೇ ವಿಶೇಷ ಪೂಜೆ ನಡೆದು ಮದ್ಯಾಹ್ನ ೧೨:೩೦ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

ಸಂಜೆ ೪ಕ್ಕೆ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ ಸಂಚರಿಸಿ ದೇವಿಯನ್ನು ವಿಸರ್ಜಿಸಲಾಗುವುದು ಎಂದು ಕಾರ್ಯಕ್ರಮದ ಬಗ್ಗೆ ಸಮಾಜದ ಉಪಾಧ್ಯಕ್ಷ ಜಗದೀಶ್ ಮಾಹಿತಿ ನೀಡಿದರು. ಇದೆ ವೇಳೆ ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಬೆಂಗಾಲಿ ವಿಶ್ವಕರ್ಮ ಸಮಾಜದ ಪ್ರತಾಪ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *