ಹಾಸನ ಸಿಗೆಗುಡ್ಡ ಕಾವಲಿನ ಜಮೀನಿಗೆ ಹೋಗಲು ಹಾಗೂ ಅಲ್ಲಿ ಧನ ಎಮ್ಮೆ ಕರುಗಳನ್ನು ಮೇಸಲು ಗೋಮಾಲ ಜಾಗ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ನಂತರ ಮಾಧ್ಯಮದೊಂದಿಗೆ ಫರೀದ್ ಮಾತನಾಡಿ, ಜಿಲ್ಲೆ ಹಾಸನ ತಾಲೂಕು ಸಾಲಗಾಮೆ ಹೋಬಳಿ ಗುಳೇನಹಳ್ಳಿ ಹಾಗೂ ಕಡದರವಳ್ಳಿಯ ರೈತರು ತಮಗೆ ಸಂಬಂಧಪಟ್ಟ ಸಿಗೆಗುಡ್ಡ ಕಾವಲಿನ ಜಮೀನಿಗೆ ಹೋಗಲು ಹಾಗೂ ಅಲ್ಲಿ ಧನ ಎಮ್ಮೆ ಕರುಗಳನ್ನು ಮೇಸಲು ಹಾಗೂ ನೂರಾರು ವರ್ಷಗಳಿಂದ ಆ ದಾರಿಯಲ್ಲಿ ತಿರುಗಾಡಿಕೊಂಡು ಇರುತ್ತಾರೆ. ಬೆಳೆದ ಬೆಳೆಗಳನ್ನು ಎತ್ತಿನ ಗಾಡಿಯ ಮುಖಾಂತರ ಸಾಗಿಸಿ ಕೊಂಡಿರುತ್ತಾರೆ ಈ ಸರ್ವೇ ನಂಬರ್ ಗಳಲ್ಲಿ ಎಲ್ಲಾ ರೈತರ ಜಮೀನಿದ್ದು. ವ್ಯವಸಾಯ ಮಾಡುತ್ತಿರುತ್ತಾರೆ.

ಅಲ್ಲಿ ಇಕ್ಬಾಲ್ ಖುರೇಷಿ ಎಂಬಾತ ದಬ್ಬಾಳಿಕೆಯಿಂದ ಗೋಮಾಳ ಜಾಗವನ್ನು ಒತ್ತುವರಿ ಮಾಡಿಕೊಂಡು ಆ ಜಾಗದಲ್ಲಿ ತಂತಿ ಬೇಲಿಯನ್ನು ಹಾಕಿಕೊಂಡು ಇಲ್ಲಿ ಯಾರು ಓಡಾಡಬಾರದು ಎಂದಿರುತ್ತಾನೆ ಏನಾದರೂ ನಮ್ಮ ಜಾಗಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಬಡ ರೈತರಿಗೆ ತನ್ನ ಹಣ ಬಲ ಮತ್ತು ತೋಳ್ಬಲದಿಂದ ಬೆದರಿಕೆ ಹಾಕಿರುತ್ತಾನೆ. ಆದುದರಿಂದ ಗ್ರಾಮಸ್ಥರು ಎಲ್ಲರೂ ಸೇರಿ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಸರ್ಕಾರಿ ಗೋಮಾಳ ಜಾಗದಲ್ಲಿ ನಮಗೆ ಸವಲತ್ತು ಆಗುವಂತೆ ದಾರಿಯನ್ನು ಬಿಡಿಸಿ ಕೊಡಿ ಎಂದು ಕೇಳಿಕೊಂಡಿರುತ್ತೇವೆ.

ಇಲ್ಲವಾದಲ್ಲಿ ಎರಡು ಹಳ್ಳಿಗಳ ಗ್ರಾಮಸ್ಥರು ಸೇರಿ ಜಿಲ್ಲಾ ಕಚೇರಿ ಎದುರು ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಮನವಿ ಮಾಡಿದಾಗ ಮಾನ್ಯ ತಹಶೀಲ್ದಾರ್ ರವರೇ ಖುದ್ದು ಬಂದು ಸರ್ವೆ ಮಾಡಿಸುವ ಭರವಸೆ ನೀಡಿದ್ದಾರೆ .

ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷರು ಅಬ್ದುಲ್ ಸತ್ತಾರ್ ಸಾಬ್ ಗುಳ್ಳೆನಹಳ್ಳಿ ಕಾರ್ಯದರ್ಶಿ ಸಹೀದ್. ಫರೀದ್. ತಾಬರಕ್. ಬಾಬು. ಫಾರೂಖ್. ತಬ್ರೆಝ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *