
ಆಲೂರು : ಬನ್ನಿ ಮರಕ್ಕೆ ಗುಂಡು ಹಾರಿಸುವ ಮೂಲಕ ವಿಜಯದಶಮಿ ಆಚರಣೆ ತಾಲ್ಲೂಕಿನ ನಾಕಲಗೂಡು ಗ್ರಾಮದಲ್ಲಿ ನವರಾತ್ರಿ ಅಂಗವಾಗಿ ಗ್ರಾಮ ದೇವತೆ ಶ್ರೀ ದೇವಿಯವರ 9 ದಿನಗಳ ಕಾಲ ಪಟ್ಟದಲ್ಲಿ ಕುಳ್ಳಿರಿಸಿ, ಪ್ರತಿ ದಿನ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಲಾಸಿತು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜು ನಾಕಲುಗೋಡು ಬನ್ನಿ ಮರಕ್ಕೆ ಬಂದೂಕಿನಿಂದ ಗುಂಡು ಹಾರಿಸಿ ಬನ್ನಿ ತುಂಡು ಹರಿಸುವ ಮೂಲಕ ಗ್ರಾಮದಲ್ಲಿ ವಿಜಯದಶಮಿ ಹಬ್ಬವನ್ನು ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರುಗಳು, ಗ್ರಾಮಸ್ಥರುಗಳು ಉಪಸ್ಥಿತರಿದ್ದರು.

