ಚನ್ನರಾಯಪಟ್ಟಣ : ಅರಕಲಗೂಡು ತಾಲ್ಲೂಕು ಬಸವಪಟ್ಟಣದಲ್ಲಿ ಕುರುಹಿನ ಶೆಟ್ಟಿ ಸಮಾಜದ ವತಿಯಿಂದ ಅಷ್ಟಲಕ್ಷ್ಮಿ ದೇವಾಲಯದಲ್ಲಿ 16 ವರ್ಷದ ನಂತರ ನಡೆಯುತ್ತಿರುವ ಅಷ್ಟಲಕ್ಷ್ಮಿ ದೇವರ ನವರಾತ್ರಿ ದೊಡ್ಡ ಹಬ್ಬದ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ ಕಾರ್ಯದರ್ಶಿ ಡಾ. ಸ್ವಾತಿ ರವರ ನೇತೃತ್ವದಲ್ಲಿ 40 ಕಲಾವಿದರ ತಂಡ ದಿಂದ ನವಶಕ್ತಿ ವೈಭವ ಹಾಗೂ ದಶಾವತಾರ ರೂಪಕ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ ವಿದುಷಿ ಡಾ. ಸ್ವಾತಿ ಪಿ ಭಾರದ್ವಾಜ್ ತಮ್ಮ 1121 ನೇ ಏಕ ವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಸಾವಿರಾರು ಭಕ್ತಾದಿಗಳು ನೃತ್ಯ ಕಾರ್ಯಕ್ರಮವನ್ನು ಕಣ್ಣು ತುಂಬಿಕೊಂಡರು ಅರಕಲಗೂಡು ಶಾಸಕರಾದ ಎ ಮಂಜುರವರು ಬಂದಂತಹ ಎಲ್ಲಾ ಕಲಾವಿದರನ್ನು ಅಭಿನಂದಿಸಿ ಗೌರವಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *