
ಬೇಲೂರು : ಬೇಲೂರು ಪಟ್ಟಣದ ನೆಹರು ನಗರದ ಭಾರತ್ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಜ್ವಲ್(25) ಎಂಬ ಕೂಲಿ ಕಾರ್ಮಿಕನ ಮೇಲೆ.
ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬೇಲೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಕೇರಳ ಮೂಲದ ಸಿದ್ದೇಶ್,ರಹೀಜ್ ಹಾಗೂ ಮತ್ತೋರ್ವ ವ್ಯಕ್ತಿ ಕಳೆದ ರಾತ್ರಿ 8.30 ರ ಸಮಯದಲ್ಲಿ ಗಾಡಿಗೆ ಪೆಟ್ರೋಲ್ ತುಂಬಿಸಲು ಬಂಕ್ ಬಳಿ ಬಂದಿದ್ದಾರೆ.
ಪೆಟ್ರೋಲ್ ಹಾಕುತ್ತಿದ್ದ ಪ್ರಜ್ವಲ್ ಬಳಿ ಕೇವಲ 50 ರೂ ಗಾಗಿ ಇಬ್ಬರ ನಡುವೆ ಜಗಳ ಪ್ರಾರಂಭವಾಗಿ,ಸ್ಥಳಿಯರು ಜಗಳ ಬಿಡಿಸಿ ಇಬ್ಬರನ್ನು ಸಮಾದಾನ ಪಡಿಸಿದ್ದಾರೆ. ನಂತರ ಮೂವರು ಬಂಕ್ ಬಿಟ್ಟು ತೆರಳಿದ್ದಾರೆ.
ಸುಮಾರು 11 ಗಂಟೆ ಸುಮಾರಿಗೆ ಬಂಕ್ ಬಳಿ ಬಂದು ಪ್ರಜ್ವಲ್ ಮೇಲೆ ಮಚ್ಚಿನಿಂದ ಕೊಚ್ಚಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.
ಅತಿ ರಕ್ತಸ್ರಾವ ದಿಂದ ನರಳುತ್ತಿದ್ದ ಪ್ರಜ್ವಲ್ ನನ್ನುಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಕರಣ ಬೇಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು. ಸಿದ್ದೇಶ್, ರಹೀಂ ಎಂಬ ಇಬ್ಬರು ಆರೋಪಿಗಳು ಪೋಲಿಸರಿಗೆ ಸೆರೆ ಸಿಕ್ಕಿದ್ದು ತಪ್ಪಿಸಿಕೊಂಡ ಮತ್ತೋರ್ವ ವ್ಯಕ್ತಿಗೆ ಬಲೆ ಬೀಸಿದ್ದಾರೆ.


