ಕೊಟ್ಟ ಮಾತನ್ನು ಉಳಿಸಿಕೊಂಡ ಕರ್ಣ! ನಾರ್ವೆ ಸೋಮಶೇಖರ್. : ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಕೆಲವೇ ಮತಗಳಿಂದ ಪರಾಜಿತರಾಗಿ ಗೆಲುವಿನಿಂದ ವಂಚಿತರಾದ ಬಿಜೆಪಿಯಿಂದ ಸ್ಪರ್ಧಿಸಿದ್ದ ನಾರ್ವೆ ಸೋಮಶೇಖರ್ ಇಂದು ಕೊಟ್ಟ ಮಾತಿನಂತೆ ಜೆಡಿಎಸ್ ಪಕ್ಷಕ್ಕೆ ಸೇರಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ರಾಜಕೀಯ ಜೀವನದಿಂದ ಹಿಂದೆ ಸರಿದಿದ್ದ ನಾರ್ವೆ ಸೋಮಶೇಖರ್ ಪುನಃ ತಮ್ಮ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದು ಜೆಡಿಎಸ್ ಹಿರಿಯ ವರಿಷ್ಠರ ಮಾತುಕತೆ ಮತ್ತು ಜೆಡಿಎಸ್ ಮುಖಂಡರು ನಾರ್ವೆ ಸೋಮಶೇಖರ್ ಅವರ ಮನವರಿಸುವಲ್ಲಿ ಯಶಸ್ವಿಯಾಗಿದ್ದು ನಾರ್ವೆ ಸೋಮಶೇಖರ್ ಅವರು ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸುವುದಾಗಿ ಮಾತು ನೀಡಿದ್ದರು . ಮಾತಿನಂತೆ ನಡೆದುಕೊಂಡ ಕಾರಣ ಮಣ್ಣಿನ ಮಗ ಜೆಡಿಎಸ್ ನ ನೇತರ ಹೆಚ್ ಡಿ ದೇವೇಗೌಡ ರವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆ ಯಾಗಿದ್ದಾರೆ ಈ ಸಂದರ್ಭದಲ್ಲಿ ಮತದಾರರನ್ನು ಕುರಿತು ಮಾತನಾಡಿದ ನಾರ್ವೆ ಸೋಮಶೇಖರ್ ಯಾರು ನನ್ನನ್ನು ರಾಜಕೀಯ ಜೀವನದಲ್ಲಿ ಮಟ್ಟ ಹಾಕಲು ಪ್ರಯತ್ನಿಸಿದರು ಅವರಿಗೆ ಉತ್ತರ ನೀಡುವ ಸಂದರ್ಭ, ಸಮಯ ಎರಡು ಬಂದಿದ್ದು ಇಂದು ಹೆಚ್ ಕೆ ಕುಮಾರಸ್ವಾಮಿ ಅವರನ್ನು ಅತ್ಯಂತ ಅಧಿಕ ಮತದಾನಗಳಿಂದ ಜಯಶೀಲರನ್ನಾಗಿ ಮಾಡುವ ಮೂಲಕ ಉತ್ತರ ನೀಡಬೇಕಾಗಿದೆ ಒಂದು ಲಕ್ಷ ಮತಗಳ ಅಂತರದಿಂದ ಕುಮಾರಸ್ವಾಮಿ ರನ್ನು ಗೆಲ್ಲಿಸಿ ಕ್ಷೇತ್ರದ ಜನತೆ ಈ ಬಾರಿ ನನ್ನನ್ನು ಪರೋಕ್ಷವಾಗಿ ಗೆಲ್ಲಿಸಬೇಕಾಗಿದೆ ಎಂದು ಮತದಾರರಲ್ಲಿ ಕೇಳಿಕೊಂಡರು.

*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *