ಸಕಲೇಶಪುರ : ಹಲವಾರು ಕನ್ನಡ ಪರ ಸಂಘಟನೆಗಳು ಕನ್ನಡದ ನಾಮಫಲಕದ ಬಗ್ಗೆ ಹಲವಾರು ಹೋರಾಟಗಳನ್ನು ಮಾಡಿದ್ದರು ಸಹ ಜನ ಎಚ್ಚತ್ತು ಕೊಳ್ಳದೆ ಇರುವುದು ವಿಷಾದನೀಯ, ಪರವಾನಿಗೆ ನೀಡುವ ಸಮಯದಲ್ಲಿ ಕನ್ನಡ ಭಾಷೆ ನಾಮ ಫಲಕ ಅಳವಡಿಕೆಗೆ ಮೊದಲ ಆದ್ಯತೆ ನೀಡಬೇಕು.

ಬೇರೆ ಭಾಷೆಯನ್ನು ದೊಡ್ಡ ಗಾತ್ರದಲ್ಲಿ ಬರೆಸಿ ಕನ್ನಡ ಭಾಷೆಯನ್ನು ಚಿಕ್ಕ ಗಾತ್ರದಲ್ಲಿ ಬರೆಸಿ ಕನ್ನಡ ಭಾಷೆಗೆ ಮಾಡಿದ ದೊಡ್ಡ ಅವಮಾನವಾಗಿದೆ.

ತಾಲ್ಲೂಕಿನದ್ಯಾಂತ ಇರುವ ಎಲ್ಲಾ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು, ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಮೊದಲು ದೊಡ್ಡ ಗಾತ್ರದಲ್ಲಿ ಕನ್ನಡ ಭಾಷೆಯನ್ನು ಬರೆಸಿ ನಂತರ ಬೇರೆ ಭಾಷೆಯನ್ನು ಬಳಸಲು ಈ ಮೂಲಕ ತಹಸೀಲ್ದಾರ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ ) ಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ರಮೇಶ್ ಪೂಜಾರಿ, ಕಾರ್ಯದರ್ಶಿ ರವಿ ಅಗ್ನಿ, ಉಪಾಧ್ಯಕ್ಷರು ನವೀನ್ ಮಾರ್ನಳ್ಳಿ, ರಾಜೇಶ್ ಸಹ ಕಾರ್ಯದರ್ಶಿ, ಬಸವರಾಜ್ ಬೆಳಗೋಡು, ಬೆಳಗೋಡು ಅಧ್ಯಕ್ಷ ರಮೇಶ್ ಅಚಂಗಿ ಇಬ್ರಾಹಿಂ, ಲಕ್ಷ್ಮಣ, ಲೋಹಿತ್ ಧರ್ಮರಾಜ್,ಉಮಾರ್, ನಾಗೇಶ್ ಸ್ಟುಡಿಯೋ ಜನಾರ್ಧನ್,ಆಚಾರಿ ಯುವ ಘಟಕದ ಅಧ್ಯಕ್ಷ ಕಿರಣ್, ಶಶಿಧರ್, ಸುರೇಶ್ ಮುಂತಾದವರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *