
ಬೇಲೂರು : ತಾಲ್ಲೂಕಿನ ಅಂಕಿಹಳ್ಳಿಯ ಗಜೇಂದ್ರಪುರದಲ್ಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಇಂದು ನೆಡೆದಿದೆ.
ಪಶ್ಚಿಮ ಬಂಗಾಳ ಮೂಲದ ದೀಪಕ ರಾಯ್ ಗಾಯಗೊಂಡಿರುವ ಕಾರ್ಮಿಕನಾಗಿದ್ದು, ಗಾರೆ ಕೆಲಸ ಮುಗಿಸಿಕೊಂಡು ಸ್ನೇಹಿತನ ಜೊತೆ ಬೈಕಿನಲ್ಲಿ ಬೆಳಗೋಡು ಮಾರ್ಗವಾಗಿ ಮನೆಗೆ ಹಿಂದಿರುಗುತ್ತಿರುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ಕಾಡಾನೆಯು ತನ್ನ ಸೊಂಡಲಿನಿಂದ ತಳ್ಳಿ ಗಾಯಗೊಳಿಸಿದೆ.
ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ .

