
ಅರಸೀಕೆರೆ : ತಾಲ್ಲೂಕಿನ ಹಿರಿಸಮುದ್ರ ಗ್ರಾಮದಲ್ಲಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮದ ರೈತರಿಗೆ ಜೈವಿಕ ಇಂಧನ ಎಂದರೇನು ಹಾಗೂ ಹೊಂಗೆ, ಹಿಪ್ಪೆ, ಬೇವು, ಸುರಹೊನ್ನೆ , ಸಿಮರುಬ, ಅಮುರ ಮುಂತಾದ ಮರಗಳಿಂದ ಜೈವಿಕ ಇಂಧನ ಪಡೆಯುವುದು ಹೇಗೆ ಹಾಗೂ ಜೈವಿಕ ಇಂಧನ ಮರಗಳಿಂದಾಗುವ ಉಪಯೋಗಗಳನ್ನು ತಿಳಿಸಿಕೊಟ್ಟರು.
ಇತ್ತೀಚಿನ ಪರಿಸ್ಥಿತಿಯಲ್ಲಿ ಪೆಟ್ರೋಲ್, ಡೀಸೆಲ್ ಬಳಕೆ ಹೆಚ್ಚಾಗಿರುವುದರಿಂದ ಪರಿಸರ ಮಾಲಿನ್ಯವು ಹೆಚ್ಚಾಗುತ್ತಿದೆ ಅದರಿಂದ ಜೈವಿಕ ಇಂಧನವನ್ನು ಬಳಸುವುದೆ ಭವಿಷ್ಯಕ್ಕೆ ಉಳಿದಿರುವ ಮಾರ್ಗವೆಂದು ತಿಳಿಸಿಕೊಟ್ಟರು.
ಜೈವಿಕ ಇಂಧನ ಬಳಕೆ ಮತ್ತು ಸಸ್ಯಗಳನ್ನು ಬಳಸುವ ಬಗ್ಗೆ ರೈತರಿಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಗಿರೀಶ್ ಎ. ಸಿ ಸಹಸಂಯೋಜಕ ಜೈವಿಕ ಇಂಧನ ಉಧ್ಯಾನವನ ಮಡೆನೂರು, ಇವರು ಆಗಮಿಸಿದ್ದರು.
ಇವರು ಜೈವಿಕ ಇಂಧನ ಮರಗಳ ಬಗ್ಗೆ ಮಾಹಿತಿ ನೀಡಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
