*ಅಜಾತಶತೃವಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ* ವೃತ್ತಿಯಲ್ಲಿ ಶಿಕ್ಷಕ, ಪ್ರವೃತ್ತಿಯಲ್ಲಿ ಕಲಾವಿದ, ಹವ್ಯಾಸೀ ನಿರೂಪಕ, ನಿರರ್ಗಳ ಮಾತುಗಾರ, ಸಮಾಜಸೇವಕ, ಅತ್ಯುತ್ತಮ ವಿದ್ಯಾರ್ಥಿ… ಇದೆಲ್ಲಾ ಯಾರಪ್ಪಾ.. ಅಪರೂಪದ ವ್ಯಕ್ತಿತ್ವ ಎಂದಿರಾ..?

ನಮ್ಮ ನಡುವೆಯೇ ಇದ್ದು, ಬೆಳೆದು, ಹಲವರನ್ನು ಬೆಳೆಸಿ, ತನ್ನ ಗುರುವಿಗೇ ಗುರುವಾದ ಅಪ್ರತಿಮ ಸಾಧಕ * ಹೆಚ್ ಡಿ ಸೋಮೇಶ್* ಇವರಿಗೆ ಈ ವರ್ಷದ *ಹಾಸನ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ* ಜಾನಪದ ವಿಭಾಗದಲ್ಲಿ ಬಂದಿರುವುದು ನಮಗೆಲ್ಲಾ ಅತ್ಯಂತ ಸಂತಸ ತಂದ ವಿಚಾರವಾಗಿದೆ.

ಶ್ರೀಯುತರಿಗೆ ಶುಭಾಶಯಗಳು ಹಾಗೂ ಅಭಿನಂದನೆಗಳು. ಹಾಸನ ಜಿಲ್ಲೆ ಆಲೂರು ತಾಲೂಕಿನ ಹರಿಹಳ್ಳಿಯಲ್ಲಿ ಸ ಹಿ ಪ್ರಾ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಜಾನಪದ ಕಲಾವಿದರಾಗಿ ಪ್ರದರ್ಶನ ನೀಡಿ ಬೆನ್ನು ತಟ್ಟಿಸಿಕೊಂಡವರು; ಹಾಡುಗಾರ, ಜಾನಪದನೃತ್ಯದಲ್ಲಿ ವಿಶೇಷ ಪರಿಣತಿ, ಹಲವಾರು ಪ್ರಶಸ್ತಿ, ಗೌರವಗಳಿಗೆ ಈಗಾಗಲೇ ರಾಜ್ಯಮಟ್ಟದಲ್ಲಿ ಭಾಜನರಾಗಿದ್ದಾರೆ. ಇಂತಹವರು ಪ್ರಶಸ್ತಿಗೆ ನಿಜವಾಗಿಯೂ ಅರ್ಹರೆಂಬುದರಲ್ಲಿ ಎರಡು ಮಾತಿಲ್ಲ. ಪ್ರಶಸ್ತಿಗೆ ಆಯ್ಕೆ ಮಾಡಿರುವ ಜಿಲ್ಲಾಡಳಿತ ಕೂಡ ಅಭಿನಂದನಾರ್ಹ..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *