
ಸಕಲೇಶಪುರ : ಪಟ್ಟಣದಲ್ಲಿ ಇಂದು ಸಂಜೆ 4 ಗಂಟೆಗೆ ವಿಜಯದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಪಥಸಂಚಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಪಥಸಂಚಲದಲ್ಲಿ ನೂರಾರು ಸ್ವಯಂಸೇವಕರು ಗಣವೇಶ ಸಹಿತ ಪಾಲ್ಗೊಂಡಿದ್ದರು.
ಈ ಪಥಸಂಚಲನವು ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟು ಆಜಾದ್ ರಸ್ತೆ , ಹಳೇಸಂತವೇರಿ ಸರ್ಕಲ್, ಬಸವೇಶ್ವರ ರಸ್ತೆ , ಬಿಎಂ ರಸ್ತೆ ಮುಖಾಂತರ ಸಂಚರಿಸಿ ನಂತರ ಪಟ್ಟಣದ ಓಂ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು .
ವಿಜಯಕುಮಾರ್ ವಕೀಲರು ಹಾಸನ ವಿಭಾಗ ಕಾರ್ಯವಾ ಬೌದ್ಧಿಕ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು ,
ವೇದಿಕೆಯಲ್ಲಿ ನವೀನ್ ಹಾಸನ ಜಿಲ್ಲಾ ಕಾರ್ಯವಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.







