ಹಾಸನ: ಜಾತಿ ಗಣತಿಯಲ್ಲಿ ಲೋಪವಾಗಿದೆ ಎಂಬ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆಗೆ ನನ್ನ ಬೆಂಬಲವಿದ್ದು, ಜಾತಿಜನಗಣತಿ ಮಂಡಿಸುವುದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಇನ್ನು ಡಿಸೆಂಬರ್ ೪ರ ಒಳಗೆ ಬಿಜೆಪಿ ರಾಜ್ಯಾಧ್ಯಕ್ಷರ ಮತ್ತು ವಿರೋಧ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.

ನಗರದ ಅದಿ ದೇವತೆ ಹಾಸನಾಂಬೆ ದೇವಿಯ ದರ್ಶನವನ್ನು ಕುಟುಂಬ ಸಮೇತವಾಗಿ ಬಂದು ನಂತರ ಹಾಸನಾಂಬೆ ದೇವಾಲಯದ ಹೊರಗೆ ಮಾಧ್ಯಮದೊಂದಿಗೆ ಮಾತನಾಡಿ, ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆಯನ್ನು ಬೆಂಬಲಿಸುತ್ತೇವೆ. ಯಾವುದೇ ಕಾರಣಕ್ಕೂ ಆ ರೀತಿ ಆಗುವುದಕ್ಕೆ ನಾವು ಬಿಡುವುದಿಲ್ಲ.

ಈ ಬಗ್ಗೆ ನಾನು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ. ತಾವೇನು ಜಾತಿಗಣತಿ ಮಂಡಿಸಿಬೇಕು ಎಂದುಕೊಂಡಿದ್ದೀರಾ ಅದನ್ನು ವಾಪಾಸ್ ಪಡೆಯಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಬಾರದು. ನಮ್ಮ ಒಕ್ಕಲಿಗರಿಗೆ ಅನ್ಯಾಯ ಆಗುತ್ತೆ ಎಂದು ನಿನ್ನೆ ಶ್ರೀಗಳು ಹೇಳಿದ್ದಾರೆ ಅದನ್ನು ನಾವೆಲ್ಲರೂ ಬೆಂಬಲಿಸುತ್ತೇವೆ. ಜಾತಿಗಣತಿ ಸಮರ್ಪಕವಾಗಿ ಆಗಿಲ್ಲ. ಎಲ್ಲೋ ಒಂದು ಒಕ್ಕಲಿಗರಿಗೆ ದೊಡ್ಡ ನಷ್ಟ ಆಗಿದೆ ಎಂದರು.

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡುತ್ತಾ, ಕೇಂದ್ರ ವರಿಷ್ಠ ಮಂಡಳಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದು,ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರದ ಪ್ರಶ್ನೆಯೊಂದಕ್ಕೆ ಉತ್ತರಿಸಿ ಆ ವಿಚಾರವಾಗಿ ನನಗೆ ಏನು ಗೊತ್ತಿಲ್ಲ. ನಾವೆಲ್ಲರೂ ಬಿಜೆಪಿಯಿಂದ ಆಯ್ಕೆಯಾಗಿದ್ದೇವೆ. ಎಸ್.ಟಿ. ಸೋಮಶೇಖರ್ ಕಾಂಗ್ರೆಸ್‌ನಿಂದ ಬಂದಿರುವವರು. ಅನುದಾನ ಕೊಟ್ಟಿದ್ದಾರೆ ಅಂದ ಮಾತ್ರಕ್ಕೆ ಕಾಂಗ್ರೆಸ್ ಸೇರ್ತಾರೆ ಅಂತ ಅಲ್ಲಾ. ಬಹುಶಃ ಅವರು ಭಾರತೀಯ ಜನತಾ ಪಕ್ಷದಲ್ಲೇ ಇರುತ್ತಾರೆ. ನಮ್ಮಲ್ಲಿ ಕಾಂಗ್ರೆಸ್ ಹೋಗುವವರು ಯಾರೂ ಇಲ್ಲ. ಅಲ್ಲೇ ತುಂಬಿ ತುಳುಕುತ್ತಿದ್ದಾರೆ, ಈ ರಾಜ್ಯದ ಜನತೆ ೧೩೬ ಜನ ಶಾಸಕರಿಗೆ ಆಶೀರ್ವಾದ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಳಂಬ ವಿಚಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಕೇಂದ್ರದ ವರಿಷ್ಠರ ಬಗ್ಗೆ ಅತ್ಯಂತ ವಿಶ್ವಾಸವಿದೆ. ಅವರು ಈ ತಿಂಗಳಿನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ. ಯಾವ ಪ್ರತಿಷ್ಠೆಯೂ ಇಲ್ಲ, ಅವರಿಗೆ ಗೊತ್ತಿದೆ ಯಾವ ಸಂದರ್ಭದಲ್ಲಿ ಮಾಡಬೇಕೆಂದು.ಮುಂದಿನ ತಿಂಗಳು ನಾಲ್ಕರಿಂದ ಬೆಳಗಾಂನಲ್ಲಿ ಅಧಿವೇಶನ ನಡೆಯಲಿದ್ದು, ಅದಕ್ಕೂ ಮೊದಲು ಅಧ್ಯಕ್ಷರ ನೇಮಕ ಆಗುತ್ತದೆ ಎನ್ನುವ ವಿಶ್ವಾಸವಿದೆ. ರಾಷ್ಟ್ರೀಯ ನಾಯಕರು ಡಿಸೆಂಬರ್.೪ ಕ್ಕಿಂತ ಮುಂಚೆ ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುತ್ತಾರೆ ಎನ್ನುವ ಭರವಸೆ ಇದೆ ಎಂದರು.

ನಾವೇನೂ ಕೈಕಟ್ಟಿ ಕುಳಿತಿಲ್ಲ. ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ ಎಂಬ ಬಗ್ಗೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ವಿಚಾರಕ್ಕೆ ಉತ್ತರಿಸಿ, ಅದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಅಭಿವೃದ್ಧಿ ಎನ್ನುವುದು ಶೂನ್ಯಕ್ಕೆ ಬಂದಿದೆ. ಇಡೀ ರಾಜ್ಯದ ೨೨೪ ಕ್ಷೇತ್ರದಲ್ಲಿ ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿದೆ, ಎಲ್ಲಿ ಅಭಿವೃದ್ಧಿ ಆಗ್ತಿದೆ ತಾವೇ ತೋರಿಸಬೇಕು. ಸ್ವಾತಂತ್ರ್ಯ ಬಂದಾಗಿನಿಂದ ಯಾವ ಸರ್ಕಾರವೂ ಈ ರೀತಿ ನಡೆದುಕೊಂಡಿರಲಿಲ್ಲ. ಬೋರ್‌ವೆಲ್, ರಸ್ತೆ ಯಾವುದಕ್ಕೂ ಹಣ ಬಿಡುಗಡೆ ಮಾಡ್ತಿಲ್ಲ, ಆ ಪರಿಸ್ಥಿತಿ ಆಗಿದೆ.

ಮುಸ್ಲಿಂರ ಶಕ್ತಿ ಏನು ಎಂದು ತೋರಿಸುತ್ತೇವೆ ಎಂಬ ಸಚಿವ ಜಮೀರ್ ಅಹಮದ್ ಹೇಳಿಕೆ ವಿಚಾರಕ್ಕೆ ಉತ್ತರಿಸಿ, ಚುನಾವಣೆ ಬಂದಾಗ ನಾಡಿನ ಜನತೆ ಯಾರು ಏನು ಮಾಡಿದ್ದಾರೆ ಅನ್ನೋದನ್ನ ನೋಡ್ತಾರೆ. ಒಂದು ಸಮುದಾಯ ನೋಡಲ್ಲ, ನಮಗೆ ವಿಶ್ವಾಸವಿದೆ. ಕೆಲವು ಇಶ್ಯೂಗಳ ಮೇಲೆ ಜನ ಮತ ಹಾಕುತ್ತಾರೆ.ಮಹಾನಗರ ಪಾಲಿಕೆ, ಎಂಎಲ್‌ಎ, ಎಂಪಿ ಚುನಾವಣೆಗೆ ಒಂದೊಂದು ತರ ಮತ ಹಾಕ್ತಾರೆ. ಇಡಿ ದೇಶಕ್ಕೆ ಮೋದಿ ಬೇಕು ಎನ್ನುವುದನ್ನು ಜನ ತೋರಿಸಿಕೊಟ್ಟಿದ್ದಾರೆ. ಈ ಬಾರಿಯೂ ಜನ ಅದೇ ರೀತಿ ತೋರಿಸುತ್ತಾರೆ. ಇವತ್ತು ಹಾಸನಾಂಬೆಯಲ್ಲಿ ಕೇಳಿಕೊಂಡಿದ್ದು, ಮೋದಿಯವರಿಗೆ ಹತ್ತಾರು ವರ್ಷ ಆಯಸ್ಸು ಕೊಡಬೇಕು. ಈ ದೇಶದ ನೇತೃತ್ವ ಹಿಡಿಯಬೇಕು. ೭೫ ವರ್ಷ ಸ್ವಾತಂತ್ರ್ಯ ಬಂದ ನಂತರ ಇಡೀ ವಿಶ್ವಕ್ಕೆ ಭಾರತ ಎಂದು ಗೊತ್ತಾಗಿರುವುದು ಮೋದಿಯವರಿಂದ ಎಂದು ಇದೆ ವೇಳೆ ಕುಟುಕಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಹಾಸನಾಂಬೆ ತಾಯಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ನಮಗೆ ಮೂರು ವರ್ಷಗಳ ಕಾಲ ಸೇವೆ ಮಾಡಲು ಅವಕಾಶ ಕಲ್ಪಿಸಿತ್ತು. ಈ ವರ್ಷವೂ ಕೂಡ ಆ ತಾಯಿಯ ದರ್ಶನಕ್ಕಾಗಿ ನಾವು ಕುಟುಂಬ ಸಮೇತ ಬಂದಿದ್ದು, ಲಕ್ಷಾಂತರ ಮಂದಿ ಬಂದು ಹೋಗುವ ಪವಿತ್ರವಾದ ದೇವಸ್ಥಾನವಾಗಿದೆ. ಕೊರೋನಾ ವೇಳೆಯೂ ಕೂಡ ಲಕ್ಷಾಂತರ ಮಂದಿ ಜನ ಬಂದು ತಾಯಿ ದರ್ಶನ ಮಾಡಿ ಹೋಗಿದ್ದಾರೆ. ಸರಕಾರ ಬದಲಾವಣೆ ಆಗಿದೆ. ಆದರೇ ಭಕ್ತಾಧಿಗಳ ಸಂಖ್ಯೆ ಕಡಿಮೆ ಆಗಿಲ್ಲ. ನಾನೋಬ್ಬ ಭಕ್ತನಾಗಿ, ಶಾಸಕನಾಗಿ ಬಂದಿದ್ದೇನೆ ಎಂದರು.

ಈ ರಾಜ್ಯಕ್ಕೆ ಉತ್ತಮ ಮಳೆ ಬೆಳೆ ಆಗಿ ರೈತರ ಜೀವನ ಚನ್ನಾಗಿರಲೆಂದು ಪ್ರಾರ್ಥಿಸಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರಾದ ರಾಜಣ್ಣ ಹಾಗೂ ಇಲ್ಲಿನ ಶಾಸಕರಾದ ಹೆಚ್.ಪಿ. ಸ್ವರೂಪ್ ಪ್ರಕಾಶ್ ಅವರ ಪ್ರತಿ ವರ್ಷದಂತೆ ಈ ವರ್ಷ ಉತ್ತಮವಾಗಿ ನಡೆಯುತ್ತಿದೆ ಎಂದು ಬಣ್ಣಿಸಿದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *