
ಸಕಲೇಶಪುರ : ಕುರಭತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಕ್ರವಾರ ಸಂತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಾಲಾ ಮಕ್ಕಳಿಗೆ ಕುಡಿಯಲು ಹಾಗೂ ಅಡುಗೆ ಮಾಡಲು ಬಳಸುತ್ತಿದ್ದ ಬಾವಿಗೆ ಅಳವಡಿಸಿದ್ದ ಒಂದು ಹೆಚ್ ಪಿ ಮೋಟರನ್ನು ನೆನ್ನೆ ರಾತ್ರಿ ಕಳ್ಳರು ಬಾವಿಯ ಜಾರಿಗೆ ಅಳವಡಿಸಿದ್ದ ಬೀಗವನ್ನು ಮುರಿದು, ಪಂಪನ್ನು ಕಳವು ಮಾಡಿದ್ದಾರೆ.
ಇದು ಈ ಶಾಲೆಯಲ್ಲಿ ಎರಡನೇ ಸಲ ಕಳ್ಳತನವಾಗುತ್ತಿರುವುದು. ಇದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿ ಕಳ್ಳರನ್ನು ಹಿಡಿಯುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಶಿಕ್ಷಕಿ ಮೀನಾಕ್ಷಿ ಹೇಳಿದರು.



