
ಹಾಸನ: ಬಿಜೆಪಿ ಕಾರ್ಯಕರ್ತರಿಂದ ಹೊಸೂರು ಗ್ರಾಮದ ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದ್ದು, ಕೂಡಲೇ ತಪ್ಪಿಕಸ್ತರನ್ನು ಬಂಧಿಸಿ ಸೂಕ್ತಕ್ರಮ ಕೈಗೊಳ್ಳುವಂತೆ ಹಿಮ್ಸ್ ಆಸ್ಪತ್ರೆಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಆಗ್ರಹಿಸಿದ್ದಾರೆ.
ತಾಲೂಕಿನ ಹೊಸೂರು ಗ್ರಾಮದ ನಿವಾಸಿ, ಜೆಡಿಎಸ್ ಕಾರ್ಯಕರ್ತ ಮನು ಎಂಬುವರೇ ಹಲ್ಲೆಗೊಳಾಗದವರು. ಇದೆ ಗ್ರಾಮದಲ್ಲಿರುವ ಬಿಜೆಪಿ ಕಾರ್ಯಕರ್ತರು ಮೂರು ಬಾರಿ ಹಲ್ಲೆ ಮಾಡಿದರೂ ಇದುವರೆಗೂ ಪ್ರಕರಣ ದಾಖಲಿಸಿ ಅವರ ಮೇಲೆ ಕ್ರಮಕೈಗೊಳ್ಳದ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶವ್ಯಕ್ತವಾಗಿದ್ದು, ಗಾಯಳು ನೋಡಲು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದ ಶಾಸಕ ಹೆಚ್.ಪಿ. ಸ್ವರೂಪ್ ಅವರು ಪೊಲೀಸ್ ನಡೆಗೆ ಸಿಡಿಮಿಡಿಗೊಂಡು ಕೂಡಲೇ ಕೇಸು ದಾಖಲಿಸಿ ಕ್ರಮಕೈಗೊಳ್ಳಬೇಕು. ಇಲ್ಲವಾದರೇ ಅಲ್ಲಿವರೆಗೂ ಜಾಗ ಬಿಟ್ಟು ಕದಡುವುದಿಲ್ಲ ಎಂದು ಮಟ್ಟು ಹಿಡಿದ ನಂತರ ಕೇಸು ದಾಖಲಿಸಲು ಡಿವೈಎಸ್ಪಿ, ಎಸ್ ಐ ಸೇರಿದಂತೆ ಪೊಲೀಸ್ ಅಧಿಕಾರಿಗಳ ದಂಡೆ ಆಸ್ಪತ್ರೆಗೆ ದಾವಿಸಿ ಶಾಂತಿ ಕಾಪಾಡಿದರು.
ಶಾಸಕ ಹೆಚ್.ಪಿ. ಸ್ವರೂಪ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ಜೆಡಿಎಸ್ ಕಾರ್ಯಕರ್ತ ಬೂವನಹಳ್ಳಿ ಕಾವಲಿನ ಹೊಸೂರು ಗ್ರಾಮದ ಮನು ದೇಹದ ಮೇಲೆ ದೊಡ್ಡ ಮಟ್ಟದಲ್ಲಿ ಗಾಯಗಳಾಗಿದ್ದು, ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದ್ದು, ಈ ಬಗ್ಗೆ ಪಕ್ಷದ ಕಾರ್ಯಕರ್ತರು ಎಲ್ಲಾ ಸೇರಿ ಎಸ್ಪಿ ಅವರಿಗೆ ಮನವಿ ಮಾಡಲಾಗಿದೆ.
ಯಾರು ತಪ್ಪಿಕಸ್ತರು ಇದ್ದಾರೆ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹವಾಗಿದೆ ಎಂದರು. ಇತನ ಮೇಲೆ ಮೂರನೇ ಬಾರಿ ಮನು ಮೇಲೆ ಹಲ್ಲೆ ಆಗಿರುವುದು ಖಂಡನೀಯ ವಿಚಾರ.
ಹಾಸನ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳು ಏನಿದೆ ಇಲ್ಲಿ ಘರ್ಷಣೆ ನಡೆದಿದ್ದರೂ ಸಬ್ ಇನ್ಸ್ ಪೆಕ್ಟರ್ ನಿರ್ಲಕ್ಷ್ಯ ಕಾಣುತ್ತಿದ್ದಾರೆ. ಮುಂದೆ ಏನಾದರೂ ದೊಡ್ಡ ಮಟ್ಟದಲ್ಲಿ ಅನಾಹುತವಾದರೇ ನೇರವಾಗಿ ರೂರಲ್ ಪೊಲೀಸ್ ಠಾಣೆಯವರೆ ಕಾರಣರಾಗುತ್ತಾರೆ. ಈ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಡಿವೈಎಸ್ಪಿ ಅವರು ಈ ಸಮಸ್ಯೆಯನ್ನು ಬಗೆಹರಿಸಿ ನ್ಯಾಯಕೊಡಿಸಬೇಕು ಎಂದು ಮನವಿ ಮಾಡುತ್ತಿದ್ದು, ಮನು ಮನೆಯಲ್ಲಿ ಪಕ್ಷದ ಹಬ್ಬ ಮಾಡುತ್ತಿರುವಾಗ ಹಲ್ಲೆ ಮಾಡಿ ಕೊಲೆ ಮಾಡುವ ಯತ್ನ ಮಾಡಿದ್ದಾರೆ.
ತಕ್ಷಣದಲ್ಲಿ ತಪ್ಪಿಕಸ್ತರನ್ನು ಬಂಧಿಸುವಂತೆ ನಮ್ಮ ಆಗ್ರಹವಾಗಿದೆ ಎಂದರು. ಮುಂದೆ ಇಂತಹ ಘಟನೆಗಳು ನಡೆಯದಿರಲಿ. ಒಳ್ಳೆ ರೀತಿಯಲ್ಲಿ ರಾಜಕಾರಣ ನಡೆಯಲಿ. ರಾಜಕೀಯ ಉದ್ದೇಶದಲ್ಲಿ ಮಾಡಿರುವ ಇವರು ಹಿಂದೆ ಡೈರಿ ನಡೆಸುತ್ತಿದ್ದು, ಇಷ್ಟು ದಿವಸ ಡೈರಿ ನಡೆಸಲಾಗುತ್ತಿದ್ದ ಲೆಕ್ಕ ಕೇಳಿದಕ್ಕೆ ಈ ಗಲಾಟಿ ಮಾಡಿದ್ದಾರೆ ಎಂದು ದೂರಿದರು.
ಹಿಂದಿನಿಂದಲೂ ಮನು ಎನ್ನುವರು ಜೆಡಿಎಸ್ ಕಾರ್ಯಕರ್ತನಾಗಿದ್ದು, ರಾಜಕೀಯ ಉದ್ದೇಶದಲ್ಲೂ ಕೂಡ ಈ ಹಲ್ಲೆ ಮಾಡಿದ್ದಾರೆ. ಇಂತಹ ರಾಜಕೀಯ ಚುನಾವಣೆ ಸಂದರ್ಭದಲ್ಲಿ ಮಾತ್ರ ಇಟ್ಟುಕೊಂಡು ಬೇರೆ ಸಮಯದಲ್ಲಿ ಅಭಿವೃದ್ಧಿಯತ್ತ ಯುವಕರು ಬರಬೇಕು. ಒಳ್ಳೆ ರೀತಿಯಲ್ಲಿ ನಡೆದುಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ.
ಗಾಯಾಳು ತಾಯಿ ಜಯಲಕ್ಷ್ಮಿ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಮಗ ಮಾರುಕಟ್ಟೆಗೆ ಹೋಗುತ್ತಿದ್ದಾಗ ಬೈಕ್ ಅಡ್ಡಗಟ್ಟಿ ನಿಲ್ಲಿಸಿ ಕುತ್ತಿಗೆಯಲ್ಲಿದ್ದ ಚೈನನ್ನು ಕಸಿದುಕೊಂಡಿದ್ದು, ಪ್ರಶ್ನೆ ಮಾಡಿದಕ್ಕೆ ಕೈಲಿದ್ದ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಅವರೆಲ್ಲಾ ಬಿಜೆಪಿ ಪಕ್ಷದವರಾಗಿದ್ದು, ಈ ಹುಡುಗರೆಲ್ಲಾ ಗಾಂಜ ಸೇದಿಸುವುದು, ಎಣ್ಣೆ ಕುಡಿಸಿ ಅವಾಚ್ಯ ಪದಗಳಿಂದ ನಮ್ಮ ಮೇಲೆ ನಿಂಧಿಸಲು ಪ್ರಚೋಧನೆ ನೀಡುತ್ತಿದ್ದಾರೆ ಎಂದು ದೂರಿದರು.
ನಮ್ಮ ಜಾತಿಯನ್ನೆ ಬಯ್ಯುತ್ತಿದ್ದಾರೆ. ಲಕ್ಷ್ಮಣ, ಹರೀಶ್, ಪ್ರೀತಂ, ಸುಮಂತ್, ಅಭಿ, ಪ್ರಜ್ವಲ್ ಇವರೆಲ್ಲಾ ಬಿಜೆಪಿ ಪಕ್ಷದವರಾಗಿದ್ದು, ಇವರಿಂದಲೇ ನನ್ನ ಮಗನ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿದರು.




