ಹಾಸನ: ಪ್ರತಿ ವರ್ಷದಂತೆ ಈವರ್ಷವೂ ಕೂಡ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ ವೀಲ್ ಛೇರ್ ನಲ್ಲಿ ದೇವಾಲಯಕ್ಕೆ ಬಂದು ಹಾಸನಾಂಬೆ ದರ್ಶನ ಪಡೆದು ಪುನಿತರಾದರು. ಮುಂದಿನ ವರ್ಷದ ಹಾಸನಾಂಬೆ ದೇವಿ ದರ್ಶನ ಮಾಡಲು ಆ ದೇದಿ ನನಗೆ ಶಕ್ತಿ ಕೊಡುವ ನಂಬಿಕೆ ಇದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಪತ್ನಿ ಚೆನ್ನಮ್ಮ ಅವರು ಕಾರಿನಲ್ಲಿ ಮೊದಲು ಬಂದು ನಂತರ ಅಧಿಕಾರಿಗಳ ಸಹಕಾರದಲ್ಲಿ ವೀಲ್ ಛೇರ್ ಮೂಲಕ ಹಾಸನಾಂಬೆ ದೇವಾಲಯಕ್ಕೆ ಪ್ರವೇಶ ಮಾಡಿದರು.

ದೇವಿ ಗುಡಿಗೆ ಬಂದು ಕೆಲ ಸಮಯ ಛೇರಿನಲ್ಲಿ ಕುಳಿತುಕೊಂಡರು. ವಿಶೇಷ ಪೂಝೆ ಸಲ್ಲಿಸಿದ ನಂತರ ದರ್ಭಾರ್ ಗಣಪತಿಗೆ ಪೂಜೆ ಸಲ್ಲಿಸಿದ ಮೇಲೆ ಶ್ರೀ ಸಿದ್ದೇಶ್ವರ ದೇಗುಲಕ್ಕೆ ವೀಲ್ ಛೇರ್ ಮೂಲಕ ಬಂದು ಚೇರಿನಲ್ಲಿ ಇಬ್ಬರೂ ಎಡ ಬಲ ಭಾಗದಲ್ಲಿ ಕುಳಿತು ಪೂಜೆ ಸಲ್ಲಿಸಿದರು. ಇದಾದ ಮೇಲೆ ಜಿಲ್ಲಾಡಳಿತದಿಂದ ಸನ್ಮಾನಿಸಿ ಗೌರವಿಸಿ ತಾಂಬೂಲ ನೀಡಿದರು.

ಇದೆ ವೇಳೆ ದೇವೇಗೌಡರ ಮಗಳು ಅನುಸೂಯ ಮಂಜುನಾಥ್ ಸೇರಿ ಕುಟುಂಬದವರು ಜೊತೆಯಲ್ಲಿದ್ದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಾತನಾಡಿ, ನಾವುಗಳು ಪ್ರತಿವರ್ಷ ಹಾಸನಾಂಬೆ ದೇವಿ ದರ್ಶನವನ್ನು ಕುಟುಂಬ ಸಮೇತ ಬಂದು ದರ್ಶನ ಪಡೆಯುತಿದ್ದು, ಗರ್ಭಗುಡಿಯೊಳಗೆ ಹಚ್ಚಿದ ದೀಪ ವರ್ಷವಾದರೂ ಹಾರುವುದಿಲ್ಲ. ಶಾಸಕ ಹೆಚ್.ಪಿ. ಸ್ವರೂಪ್ ಅವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಎಡಿಸಿ ಶಾಂತಲ, ಉಪವಿಭಾಗಾಧಿಕಾರಿ ಮಾರುತಿ, ತಹಸೀಲ್ದಾರ್ ಶ್ವೇತಾ ನೇತೃತ್ವದ ತಂಡ ಉತ್ತಮ ಕಾರ್ಯನಿರ್ವಹಣೆ ಮಾಡುವ ಮೂಲಕ ಹಾಸನಾಂಬೆ ದರ್ಶನಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಬಣ್ಣಿಸಿದರು.

ಕಳೆದ ಬಾರಿಗಿಂತ ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆಕರ್ಷಕ ದೀಪಲಂಕಾರ, ಮೂಲಬೂತ ಸೌಕರ್ಯ ಎಲ್ಲಾವು ಉತ್ತಮವಾಗಿದೆ ಎಂದರು. ಶ್ರದ್ದೆಯಿಂದ ಕೆಲಸಮಾಡುತ್ತಿರುವ ಎಂದು ಅಧಿಕಾರಿ, ಸಿಬ್ಬಂದಿ ವರ್ಗದವರಿಗೂ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಹಕಾರದಲ್ಲಿ ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಾರೆ. ಇಷ್ಟು ಉತ್ತಮ ಕಾರ್ಯನಿರ್ವ ಹಿಸುತ್ತಿರುವ ಆಡಳಿತ ಮಂಡಳಿಯವರಿಗೆ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಮಾದ್ಯಮದ ಕೊಡುಗೆ ಅಪಾರ, ಉತ್ತಮಪ್ರಚಾರ ಮಾಡುವ ಮೂಲಕ ದರ್ಶನೋತ್ಸವ ಯಶಸ್ಸಿಗೆ ಸಹಕಾರ ನೀಡುತ್ತಿರುವ ಮಾಧ್ಯಮ ಮಿತ್ರರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಜಾತ್ರಾ ಮಹೋತ್ಸವ ಯಶಸ್ವಿಯಾಗಲಿ. ಸಿದ್ದೇಶ್ವರ ಸ್ವಾಮಿಯ ಅನುಗ್ರಹ, ಈಶ್ವರನ ಆರಾಧಕರಿಗೆ ಶುಭವಾಗಲಿ ಎಂದು ಪ್ರಾರ್ಥನೆ ಮಾಡಿದರು.

ನಾನು ಆರೋಗ್ಯವಾಗಿ ಮುಂದಿನ ವರ್ಷದ ಹಾಸನಾಂಬ ದರ್ಶಕ್ಕೆ ಬರುವಂತೆ ದೇವಿ ಆಶೀರ್ವಾದಿಸಬೇಕೆಂದು ಪ್ರಾರ್ಥಿಸುತ್ತೇನೆ. ತಾಯಿಹಾಸನಾಂಬೆ ಮತ್ತು ಸಿದ್ದೇಶ್ವರ ಸ್ವಾಮಿ ಅನುಗ್ರಹದಲ್ಲಿ ಮುಂದಿನ ಬಾರಿ ದೇವಾಲಯದ ಮೆಟ್ಟಿಲು ಹತ್ತಿ ಬರಲು ಶಕ್ತಿ ಕರುಣಿಸುತ್ತದೆ ಎನ್ನುವ ನಂಬಿಕೆ ಇದೆ. ಅಂತೆಯೇ ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದ ಜನತೆಗೆ ಒಳಿತಾಗಬೇಕು ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತರು ಸಮೃದ್ಧರಾಗಿ ಬದುಕಬೇಕು ಮತ್ತುಆರೋಗ್ಯ ಕೊಡಬೇಕು ಎಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.

ಇದೆ ವೇಳೆ ಮಾಜಿ ಪ್ರಧಾನಿ ದಂಪತಿ ಕರೆದೊಯ್ಯಲು ಡಿಸಿ ಸತ್ಯಭಾಮಾ, ಎಡಿಸಿ ಶಾಂತಲಾ, ಎಸಿ ಮಾರುತಿ, ಎಸ್ಪಿ ಮಹಮ್ಮದ್ ಸುಜೀತಾ, ತಹಸೀಲ್ದಾರ್ ಶ್ವೇತಾ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *