ಚನ್ನರಾಯಪಟ್ಟಣ : ತಾಲ್ಲೂಕಿನ ಹಡೇನಹಳ್ಳಿ ಹಾಲಿನ ಡೈರಿ ವಿಷಯ ವ್ಯಾಜ್ಯ ತಾರಕಕ್ಕೆ ಏರಿದು 970 ಲೀಟರ್ ಹಾಲನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಹಡೆನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಜಯಂತಿ ಬದಲಾವಣೆಯ ವಿಷಯವಾಗಿ ಆಡಳಿತ ಮಂಡಳಿಯಲ್ಲಿ ಗೊಂದಲ ಪ್ರಾರಂಭವಾಗಿದೆ.

ಈ ವೇಳೆ ಮೇಲ್ವಿಚಾರಕ್ಕೆ ಮಂಜುಳಾ ಹಾಲು ತೆಗೆದುಕೊಳ್ಳುವುದಿಲ್ಲ ಎಂದು ನೋಟಿಸ್ ನೀಡಿದ್ದಾರೆ ಇದರಿಂದ ಬೇಸತ್ತ 189 ಮಂದಿ ಶೇರುದಾರರು 39 ಸಾವಿರ ಬೆಲೆ ಬಾಳುವ ಹಾಲನ್ನು ರಸ್ತೆಗೆ ಚೆಲ್ಲುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಹಡೆನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ ಆಶಾ ನಿರ್ದೇಶಕರಾದ ತೇಜ ಅನುಸೂಯ ರೇಣುಕಮ್ಮ ಸುಧಾ ಚಂದ್ರಿಕಾ ಅನಿತಾ ಶಕುಂತಲಾ ಲತಾ ಪದ್ಮಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡು ಶಾಸಕ ಬಾಲಕೃಷ್ಣರಿಗೆ ಧಿಕ್ಕಾರ ಕೂಗಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *