ಹಾಸನ: ಅದಿ ದೇವತೆ ಹಾಸನಾಂಬೆ ದೇವಿ ದರ್ಶನ ಪ್ರಾರಂಭವಾಗಿ ಎರಡನೆ ದಿನಕ್ಕೆ ಕಾಲಿಟ್ಟಿದ್ದು, ಇದೆ ಮೊದಲ ಬಾರಿಗೆ ಆಕಾಶದಿಂದ ಹಾಸನ ನೋಡಲು ಹೆಲೆಕಾಪ್ಟರ್ ಹಾರಟ ಮತ್ತು ಪ್ಯಾರ ಸೈಲಿಂಗ್ ಹಾಗೂ ಪ್ಯಾರ ಗ್ಲೈಡಿಂಗ್ ಆರಂಭಿಸಲಾಗಿದ್ದು, ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಹಸಿರು ಬಾವುಟ ಪ್ರದರ್ಶಿಸಿ ತಾವೆ ಕುಳಿತುಕೊಳ್ಳುವ ಮೂಲಕ ಚಾಲನೆ ಕೊಟ್ಟರು.

ಪ್ರಥಮ ಬಾರಿ ಆಕಾಶದಿಂದ ಹಾಸನ ನೋಡಲು ಹೆಲೆಕಾಪ್ಟರ್ ಹಾರಟ ಆರಂಬಿಸಿರುವುದಕ್ಕೆ ಸಾರ್ವಜನಿಕರಿಂದ ಪ್ರಶಂಸೆಯ ಮಾತುಗಳು ಕೇಳಿ ಬಂದಿದೆ. ನಗರದ ಸರಕಾರಿ ಕಲಾ ಕಾಲೇಜು ಆವರಣದಿಂದ ಹಾರಟ ಪ್ರಾರಂಭವಾಗಿ 7 ನಿಮಿಷದಲ್ಲಿ ವಾಪಸ್ ಬರಲಿದ್ದು, 43೦೦ ಧರ ಒಬ್ಬರಿಗೆ ನಿಗಧಿ ಮಾಡಲಾಗಿದ್ದು, ಹಾಸನಾಂಬೆ ದೇವಸ್ಥಾನ ಸೇರಿದಂತೆ ಉತ್ತಮ ಪರಿಸರದ ವೀಕ್ಷಣೆ ಇದರಲ್ಲಿ ಮಾಡಬಹುದಾಗಿದೆ.

ಇನ್ನು ಸಂಜೆ ಬೂವನಹಳ್ಳಿ ವಿಮಾನ ನಿಲ್ದಾಣದಲ್ಲಿ ಪ್ಯಾರ ಸೈಲಿಂಗ್ ಹಾಗೂ ಪ್ಯಾರ ಗ್ಲೈಡಿಂಗ್ ಗೆ ಚಾಲನೆ ಕೊಟ್ಟು ಡಿಸಿ ಅವರೆ ಹಾರಾಟ ನಡೆಸಿ ಗಮನಸೆಳೆದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *