
ಸಕಲೇಶಪುರ :- ಪಶ್ಚಿಮ ಘಟ್ಟ ಪ್ರದೇಶದಲ್ಲಿ ವನ್ಯಜೀವಿಗಳ ಅವನತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು , ಅವುಗಳ ರಕ್ಷಣೆಗೆ ಅರಣ್ಯ ಇಲಾಖೆಯ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡರು ಕೂಡ ಅನೇಕ ವನ್ಯಜೀವಿಗಳು ಅವನತಿಯತ್ತ ಇದ್ದು ಅಪರೂಪದ ವನ್ಯಜೀವಿಗಳ ಸಾಲಿನಲ್ಲಿ ಬಂದು ನಿಲ್ಲುವಂತಹ ಪರಿಸ್ಥಿತಿ ಒದಗಿರುವುದು ಅತ್ಯಂತ ಶೋಚನೀಯ ಪರಿಸ್ಥಿತಿ.
ಇಂತಹ ಅವನತಿಯ ಅಂಚಿನಲ್ಲಿರುವ ವಿಶೇಷವಾದ ಹಾಗೂ ಅಪರೂಪವಾದ ವರ್ನಲ್ ಹ್ಯಾಂಗಿಂಗ್ ಪ್ಯಾರೆಕ್ಟ್ ನ್ನು ಡಾ. ಸುಪರ್ಣ ಗಂಗೂಲಿ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಬನ್ನೇರುಘಟ್ಟ, ಬನ್ನೇರುಘಟ್ಟ ಕೇಂದ್ರ ಬೆಂಗಳೂರು ಇವರ ಹಾಗೂ ಅರಣ್ಯ ಅಧಿಕಾರಿಗಳು ಮತ್ತು ಶಾಸಕರಾದ ಸಿಮೆಂಟ್ ಮಂಜು ಹಾಗೂ ಸಕಲೇಶಪುರದ ಪ್ರಥಮ ಹೋಂ ಸ್ಟೇ, ಸ್ವಸ್ತಾ ಹೋಂ ಸ್ಟೇ ಮಾಲೀಕರಾದ ಲಕ್ಷ್ಮಿ ಸೋಮನಾಥ್ ರವರು ತೋಟದಲ್ಲಿ ಮತ್ತೆ ತಾಯಿ ಮಡಿಲನ್ನು ಸೇರುವಂತಾಗಿದೆ.
ಅಪರೂಪಕ್ಕೆ ಸಿಗುವ ಈ ಪ್ರಭೇದದ ಗಿಳಿಯನ್ನು ಅನಧಿಕೃತವಾಗಿ ಬೆಂಗಳೂರಿನಲ್ಲಿ ಮೂರು ತಿಂಗಳು ಸಾಕಿದ್ದನ್ನು ತಿಳಿದ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಬನ್ನೇರುಘಟ್ಟ ಬೆಂಗಳೂರು ಇದರ ಮೂಲ ವಾಸಸ್ಥಾನ ಪಶ್ಚಿಮ ಘಟ್ಟ ಎಂದು ತಿಳಿದು ಅದನ್ನು ಸಕಲೇಶಪುರದ ಮಲೆನಾಡು ಭಾಗದಲ್ಲಿ ಬಿಡಲಾಯಿತು.
ಈ ಸಂದರ್ಭದಲ್ಲಿ ಸಕಲೇಶಪುರ ಶಾಸಕರಾದ ಸಿಮೆಂಟ್ ಮಂಜು, ಸಮಾಜ ಸೇವಕರು ಬ್ಯಾಕರವಳ್ಳಿ ಜಯಣ್ಣ , ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಇತರರು ಇದ್ದರು.




