
ಬೇಲೂರು: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆ,ನಗರದ, ಇಂದಿರಾ ಕ್ಯಾಂಟೀನ್ ಗೆ,ಮದ್ಯಾಹ್ನ ಊಟದ ಸಮಯಕ್ಕೆ,ಪುರಸಭೆ ಅದ್ಯಕ್ಷೆ, ತೀರ್ಥಕುಮಾರಿ ವೆಂಕಟೇಶ್ ದಿಡೀರ್ ಬೇಟಿ ನೀಡಿ ಆಹಾರ,ಹಾಗೂ ಸ್ವಚ್ಛತೆ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷೆ ಆಹಾರ ಸೇವಿಸಿ,ಮಾತನಾಡಿದ ಅವರು,ಇಂದಿರಾ ಕ್ಯಾಂಟೀನ್ ಶುಚಿತ್ವ ವಿಲ್ಲದೆ ಗಬ್ಬು ನಾರುತ್ತಿದ್ದು,ಸ್ವಚ್ಛತೆ ಇಲ್ಲದೆ ಗ್ರಾಹಕರಿಗೆ ಉಸಿರುಗಟ್ಟಿದ ವಾತವರಣ ಸೃಷ್ಠಿಯಾಗಿದೆ.
ಕ್ಯಾಂಟೀನ್ ನಲ್ಲಿ ಮಾಡುವುದು ಸಾಂಬಾರೋ..ಅಥವಾ ಕೆಸರು ಗದ್ದೆಯ ನೀರೋ.. ಎಂಬ ಅನುಮಾನ ಮೂಡುವಂತಿದೆ.
ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಗಳ ಬಗ್ಗೆ ವಿಶೇಷವಾಗಿ ಗಮನ ಹರಿಸಿದ್ದು,ಸ್ವಚ್ಛತೆ, ಹಾಗೂ ಗುಣಮಟ್ಟದ ಆಹಾರ ನೀಡುವಂತೆ ಕೋಟ್ಯಾಂತರ ರೂ ನೀಡುತ್ತಿದೆ.ಆದರೆ ಟೆಂಡರ್ ದಾರರು ಕಳಪೆ ಆಹಾರ ನೀಡುವ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ, ಎಂದು ಸಿಬ್ಬಂದಿಗಳ ಹಾಗೂ ಗುತ್ತಿಗೆ ದಾರರ ವಿರುದ್ದ ಕಿಡಿಕಾರಿದ್ದಾರೆ.
ಇಂದಿರಾ ಕ್ಯಾಂಟೀನ್ ಇರುವುದು,ಹಸಿದವರ ಹೊಟ್ಟೆ ತುಂಬಿಸುವ ಸಲುವಾಗಿಯೇ ಹೊರತು,ಗುತ್ತಿಗೆದಾರರ ಹೊಟ್ಟೆ ಹೊರೆಯುವುದಕ್ಕಲ್ಲ. ಸರ್ಕಾರ ಬಡವರಿಗಾಗಿ,ಅನ್ನ ಬಾಗ್ಯ,ಕ್ಷೀರಭಾಗ್ಯ ಗಳಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.ಆದರೆ ಗುತ್ತಿಗೆದಾರರ ಲೋಪದಿಂದ ಪುರಸಭೆ ತಲೆತಗ್ಗಿಸುವಂತಾಗಿದೆ.
ದಿನನಿತ್ಯ ವಿದ್ಯಾರ್ಥಿಗಳು, ರೈತರು,ನಿ ರ್ಗತಿಕರು,ಸೇರಿದಂತೆ ಐದುನೂರಕ್ಕು ಹೆಚ್ಚು ಗ್ರಾಹಕರು ಆಹಾರ ಸೇವನೆ ಮಾಡುವುದು ಸಹಜ ಪ್ರಕ್ರಿಯೆ.ಆದರೆ ಕ್ಯಾಂಟೀನ್ ಅವ್ಯವಸ್ಥೆ ಯಿಂದ,ಹಾಗೂ ಗುಣ ಮಟ್ಟದ ಆಹಾರವಿಲ್ಲದ ಕಾರಣ ಗ್ರಾಹಕರು ಪರಿತಪಿಸುವಂತಾಗಿದೆ.
ಮುಂದಿನ ದಿನಗಳಲ್ಲಿ ಗುತ್ತಿಗೆದಾರರು ಎಚ್ಚೆತ್ತುಕೊಂಡು ಗುಣಮಟ್ಟದ ಶುಚಿತ್ವ ಆಹಾರ ನೀಡದಿದ್ದರೆ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಇದೆ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಿ.ಸಿ ಜಗದೀಶ್.ಉಪಾದ್ಯಕ್ಷೆ ಸೌಮ್ಯ ಸುಬ್ರಹ್ಮಣ್ಯ, ಆರೋಗ್ಯ ನಿರೀಕ್ಷಕಿ ಜ್ಯೋತಿ ಇದ್ದರು.



