ಹಾಸನ : ಕಳಸ ಪ್ರತಿಷ್ಠಾಪನೆ, ಹೋಮ, ಹೆಲಿಟೂರಿಸಂ, ಪ್ಯಾರಾಗ್ಲೈಡಿಂಗ್ ಸೇರಿದಂತೆ ಎಲ್ಲವನ್ನೂ ಜಿಲ್ಲಾಧಿಕಾರಿ ಅವರೇ ಏಕಪಕ್ಷೀಯವಾಗಿ ಚಾಲನೆ ನೀಡುತ್ತಿದ್ದಾರೆ. ನಾವೇನು ದನಕಾಯೋಕ್ಕೆ ಇದ್ದೀವಾ! ಇದೆನು ಡಿಸಿ ಕುಟುಂಬದ ಜಾತ್ರೆಯೇ? ಎಂದು ಡಿಸಿ ನಡೆಗೆ ಶಾಸಕ ಹೆಚ್.ಪಿ. ಸ್ವರೂಪ್ ಹಾಗೂ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದಲ್ಲದೇ ಜಿಲ್ಲಾಧಿಕಾರಿ, ಎಸಿ ಹಾಗೂ ಶಾಸಕರ ನಡುವೆ ಕೆಲ ಸಮಯ ವಾಗ್ವಾದ ನಡೆಯಿತು.

ಇದೆ ವೇಳೆ ಶಾಸಕರ ಬೆಂಬಲಿಗರು ಅಸಮಧಾನ ವ್ಯಕ್ತಪಡಿಸಿ ಪ್ರತಿಭಟನೆ ಕೂಡ ಮಾಡಿದ ಪ್ರಸಂಗ ನಡೆಯಿತು.

ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆಗೆದು ಮೂರನೆ ದಿನಕ್ಕೆ ಕಾಲಿಟ್ಟಿದ್ದು, ಮೊದಲ ದಿವಸವೇ ಎಡವಟ್ಟು ಎಂಬಂತೆ ಆಕ್ರೋಶ ಪ್ರತಿಭಟನೆಗಳು ಸಂಭವಿಸಿತು. ಇನ್ನು ಎರಡನೇ ದಿನದಂದು ಸಲ್ಪ ಶಾಂತಿಯುತವಾಗಿ ಇರುವಂತೆ ಕಂಡಿದ್ದು, ಮೂರನೇ ದಿನದಂದು ಹಾಸನ ಕ್ಷೇತ್ರದ ಶಾಸಕರ ಮತ್ತು ಜನರುಗಳ ಕೆಂಗಣ್ಣಿಗೆ ಜಿಲ್ಲಾಡಳಿತ ಗುರಿಯಾಗಿದೆ.

ಇದಕ್ಕೆಲ್ಲ ಹೆಚ್ಚಿನ ಕಟ್ಟುನಿಟ್ಟಿನ ಕ್ರಮವೇ ಜಿಲ್ಲಾಡಳಿತಕ್ಕೆ ಮುಳ್ಳಾಗಿತೆ ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.

ಪ್ರಥಮ ದಿನದಲ್ಲಿ ಕಳಸ ಪ್ರತಿಷ್ಠಾಪನೆ, ಹೋಮಗಳು, ಪ್ರವಾಸದ ಬಸ್ ಸಂಚಾರಕ್ಕೆ ಚಾಲನೆ ನಡೆದಿದ್ದು, ಇನ್ನು ಎರಡನೇ ದಿವಸದಂದು ಹೆಲಿಟೂರಿಸಂ, ಪ್ಯಾರಾಗ್ಲೈಡಿಂಗ್ ಸೇರಿದಂತೆ ಎಲ್ಲವನ್ನೂ ಜಿಲ್ಲಾಧಿಕಾರಿ ಅವರೇ ಚಾಲನೆ ನೀಡಲಾಗಿದೆ ಎಂಬುದು ಶಾಸಕರ ಆರೋಪವಾಗಿದೆ.

ಶನಿವಾರದಂದು ಶಾಸಕ ಸ್ವರೂಪ್ ಮತ್ತು ಅಭಿಮಾನಿಗಳು ದೇವಾಲಯದ ಮುಖ್ಯಧ್ವಾರದ ಮುಂದೆ ನಿಂತು ಡಿಸಿ ಮತ್ತು ಎಸಿ ಅವರಿಗೆ ಪ್ರಶ್ನೆ ಮಾಡಿ ಜಿಲ್ಲಾಧಿಕಾರಿಯನ್ನ ತರಾಟೆಗೆ ತೆಗೆದುಕೊಂಡರು.

ನನ್ನ ಕಳಶ ಪ್ರತಿಷ್ಠಾಪನೆಗೆ ಯಾಕೆ ಕರೆದಿಲ್ಲ. ನಾವೇನು ದನಕಾಯೋದಕ್ಕೆ ಇದ್ದೀವಾ ಮಾತುಗಳು ಕೇಳಿ ಬಂದು ಜಿಲ್ಲಾಧಿಕಾರಿ ಸತ್ಯಭಾಮ ನಡೆಗೆ ದೇವಾಲಯದಲ್ಲಿ ಜಿಲ್ಲಾಧಿಕಾರಿ ಅವರಿಂದ ಏಕಪಕ್ಷೀಯ ಆಡಳಿತವನ್ನು ದೇವಾಲಯದ ಹೊರಭಾಗದಲ್ಲಿ ನಿಂತು ಆಕ್ರೋಶ ವ್ಯಕ್ತವಾಯಿತು.

ಶಾಸಕರನ್ನ ಯಾವುದಕ್ಕೂ ಪರಿಗಣಿಸುತ್ತಿಲ್ಲ. ಈ ಭಾರಿ ಹಾಸನಾಂಬ ಉತ್ಸವ ಆಗಿಲ್ಲ, ಸತ್ಯಭಾಮ ಉತ್ಸವ ಆಗಿದೆ. ನಗರಸಭೆ ಸದಸ್ಯರು, ಬಿಜೆಪಿ ಸದಸ್ಯರು, ಜೆಡಿಎಸ್ ಮುಖಂಡರಿಂದ ವಿರೋಧದ ಮಾತುಗಳು ಕೇಳಿ ಬಂದಿತು.

ನೆನ್ನೆ ಮಾಜಿ ಪ್ರಧಾನಿ ದೇವೇಗೌಡ್ರಿಗೆ ಅಭಿನಂದನೆ ಸಲ್ಲಿಸೋದನ್ನೂ ಬಿಟ್ಟು ಹೆಲಿ ಟೂರಿಸಂಗೆ ಚಾಲನೆ ಕೊಡೋದಕ್ಕೆ ಹೋಗಿದ್ರು. ನಾನು ಎರಡು ಲಕ್ಷ ಜನರಿಂದ ಆರಿಸಿ ಬಂದಿದ್ದೇನೆ ಎಂದು ಸ್ವರೂಪ್ ಸಿಡಿಮಿಡಿಗೊಂಡರು.

ದೇಗುಲದ ಕಳಸ ಪ್ರತಿಷ್ಠಾಪನೆಯಲ್ಲಿ ಪತಿ ಜೊತೆ ಪೂಜೆಯಲ್ಲಿ ಭಾಗಿಯಾಗಿದ್ದ ಡಿಸಿ ಸತ್ಯಭಾಮ ವಿಚಾರವಾಗಿ ಮಾತನಾಡಿ, ತಮ್ಮ ಕುಟುಂಬದ ಕಾರ್ಯಕ್ರಮದಂತೆ ದಂಪತಿ ಜೊತೆ ಪೂಜೆ ಆಗಿದೆ. ಡಿಸಿ ಸತ್ಯಭಾಮ ಮತ್ತು ಪತಿ ಪೂಜೆಯಲ್ಲಿ ಭಾಗಿಯಾಗಿರೊ ವೀಡಿಯೋ ವೈರಲ್ ಆಗಿದ್ದು, ಶಾಸಕರನ್ನ ಸೌಜನ್ಯಕ್ಕಾದರೂ ಕರೆದಿಲ್ಲ ಎಂದು ಶಾಸಕ ಸ್ವರೂಪ್ ಬೆಂಬಲಿಗರ ಆಕ್ರೋಶದ ಮಾತು ಕೇಳಿ ಬಂದಿತು.

ಇನ್ನು ಹಾಸನ ಜಿಲ್ಲೆಯಲ್ಲಿ ಬರಗಾಲವಿದ್ದು, ಹೆಲೆಕಾಪ್ಟರ್ ಗೆ ಒಬ್ಬರಿಗೆ ೪೩೦೦ ರೂ ಧರ ನಿಗಧಿ ಮಾಡಿದ್ದು, ಆ ಧರವನ್ನು ಜಿಲ್ಲಾಡಳಿತವೇ ಭರಿಸಲಿ, ಆ ಈ ಹಣ ಕಡಿಮೆಯೆ ಎಂದು ಹೇಳುವ ಜಿಲ್ಲಾಧಿಕಾರಿಯನ್ನು ನಾನು ಎಂದು ನೋಡಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

ಹಿಂದಿನಿಂದಲೂ ಹಾಸನಾಂಬೆ ದೇವಾಲಯದಲ್ಲಿ ಪ್ರತಿಭಟನೆಯಾದ ಇತಿಹಾಸವಿಲ್ಲ. ಆದರೇ ನಮ್ಮ ಆತ್ಮಗೌರವಕ್ಕೆ ದಕ್ಕೆ ಆದ ವೇಳೆ ನಾವು ಕೂಡ ಪ್ರತಿಭಟಿಸಬೇಕಾಗುತ್ತದೆ. ದೇವಸ್ಥಾನದ ಪ್ರೋಟೊ ಕಾಲ್ ಪ್ರಕಾರ ಶಾಸಕರ ಅಧ್ಯಕ್ಷತೆ ಇರುತ್ತದೆ. ನಮ್ಮ ಗಮನಕ್ಕೆ ಬಾರದಂತೆ ಕಳಸ ಪ್ರತಿಷ್ಠಾಪನೆ, ಹೋಮಗಳನ್ನು ಡಿಸಿ ಮತ್ತು ಅವರ ಪತಿ ಸೇರಿ ನಿರ್ವಹಿಸಿದ್ದು, ನನ್ನ ಆಹ್ವಾನ ಕೂಡ ಮಾಡಿರುವುದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಜಿಲ್ಲಾಧಿಕಾರಿಗಳು ದುರಂಕಾರದ ಮಾತುಗಳನ್ನು ಆಡಿದ್ದಾರೆ.

ನಗರಸಭೆ ಪೌರಕಾರ್ಮಿಕರು ಕಸ ತೆಗೆದು ಸ್ವಚ್ಛ ಮಾಡುವ ಎಲ್ಲಾ ಕೆಲಸ ಮಾಡುತ್ತಾರೆ. ಆದರೇ ಎಲ್ಲಾರನ್ನು ಕಡೆಗಣಿಸಿದ್ದಾರೆ ಎಂದು ದೂರಿದರು. ಈ ವಿಚಾರದಲ್ಲಿ ಜಿಲ್ಲಾಡಳಿತವು ಸಂಪೂರ್ಣ ವಿಫಲವಾಗಿದೆ. ಹಾಸನಾಂಬೆ ಇತಿಹಾಸದಲ್ಲಿ ಯಾವ ಹೋಮ ಮಾಡಿರುವುದಿಲ್ಲ. ಯಾವ ಸ್ವಾಮೀಜಿಗಳನ್ನು ಕರೆಯದೇ ಅವರ ಮನಸ್ಸೋ ಇಚ್ಛೆ ಹೋಮ ಇತರೆ ಕಾರ್ಯ ಮಾಡುತ್ತಿದ್ದಾರೆ. ಇದೆಲ್ಲಾ ನಮ್ಮ ಆತ್ಮ ಗೌರವಕ್ಕೆ ದಕ್ಕೆ ಆಗಿರುವುದರಿಂದ ಜಿಲ್ಲಾಧಿಕಾರಿ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಹೇಳಿದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *