ಹಾಸನ: ಹಾಸನಾಂಬೆ ದೇವಾಲಯದ ಸ್ವಚ್ಛತೆಗಾಗಿ ನಿಯೋಜಿಸಿರುವ ಪೌರಕಾರ್ಮಿಕರ ನಮ್ಮ ಕೊರಳಿನಲ್ಲಿದ್ದ ಐಡಿ ಕಾರ್ಡನ್ನು ಕಿತ್ತುಕೊಂಡು ಅಗೌರವ ಪ್ರದರ್ಶಿಸಿದ್ದಾರೆ ಎಂದು ನಗರಸಭೆ ಮುಂದೆ ಪೌರಕಾರ್ಮಿಕರು ಕೆಲ ಸಮಯ ಪ್ರತಿಭಟನೆ ನಡೆಸಿದರು.

ನಗರಸಭೆ ಪೌರಕಾರ್ಮಿಕರು ಹಾಸನಾಂಬೆ ದೇವಾಲಯದ ಸ್ವಚ್ಛತೆಯಲ್ಲಿ ತೊಡಗಿದ್ದು, ಉಪವಿಭಾಗಧಿಕಾರಿ ಮಾರುತಿಗೌಡ ಅಗೌರವ ತೊರುತ್ತಿದ್ದಾರೆ.

ನಮಗೆ ವಿತರಣೆ ಮಾಡಿದ ಐಡಿ ಕಾರ್ಡನ್ನು ಕೊರಳ ಪಟ್ಟಿಯಿಂದ ಕಿತ್ತುಕೊಂಡು ದೇವಸ್ಥಾನದಿಂದ ಆಚೆ ದೂಖಲಾಗಿದೆ. ಇದರಿಂದ ನೋವಾಗಿದ್ದು, ನಾವು ಹಾಸನಾಂಬೆ ದೇವಾಲಯದ ಕೆಲಸ ಮಾಡದೇ ಬಹಿಷ್ಕಾರ ಮಾಡುತ್ತವೆ.

ದೇವಾಲಯದ ಯುಜಿಡಿ ಹಾಗೂ ನೀರಿನ ಸಂಪರ್ಕ ಖಡಿತಗೊಳಿಸುವುದಾಗಿ ಇದೆ ವೇಳೆ ತಿಳಿಸಿದರು.

ನಾವು ಒಂದು ತಿಂಗಳಿನಿಂದ ಬೆಳಿಗ್ಗೆ 4 ಗಂಟೆಗೆ ಬಂದು ಸ್ವಚ್ಚತೆ ಮಾಡಿದರು ಹಾಸನ ಎಸಿ ಗೌರವ ಕೊಡುತ್ತಿಲ್ಲ ಎಂದು ಅಸಮಧಾನವ್ಯಕ್ತಪಡಿಸಿ ಆರೋಪ ಮಾಡಿದ್ದರು.

ಕೂಡಲೇ ಉಪವಿಭಾಗಧಿಕಾರಿಗಳು ಕ್ಷಮೆ ಯಾಚನೆ ಮಾಡಬೇಕೆಂದು ಇದೆ ವೇಳೆ ಆಗ್ರಹಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *