
ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಇಂದು ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಟಿಂಬರ್ ಅಸ್ಮತ್ ಅವರ ಅವರ ಮನೆಗೆ ತೆರಳಿ ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮುಸ್ಲಿಂ ಮುಖಂಡ ಅಸ್ಮತ್ ಯಾರಿಗೂ ಕೇಡು ಬಯಸದ ಸೌಮ್ಯ ಸ್ವಭಾವದ ಎಲ್ಲಾ ಜನಾಂಗದವರನ್ನು ಪ್ರೀತಿ ಮತ್ತು ವಿಶ್ವಾಸದಿಂದ ಕಾಣುವ ಎಚ್ ಕೆ ಕುಮಾರಸ್ವಾಮಿ ಅವರಿಗೆ ನಮ್ಮ ಮುಸ್ಲಿಂ ಸಮುದಾಯದ ಎಲ್ಲ ಮುಖಂಡರು ಕಾರ್ಯಕರ್ತರು ಹಾಗೂ ಮತದಾರ ಬಂಧುಗಳು ಅವರಿಗೆ ಮತ ಹಾಕುವ ಮೂಲಕ ನಾಲ್ಕನೇ ಬಾರಿಗೆ ಗೆಲ್ಲಿಸಬೇಕು ಎಂದು ಟಿವಿ 46 ಮಲೆನಾಡು ಚಾನೆಲ್ ನೊಂದಿಗೆ ತಮ್ಮ ಅಭಿಪ್ರಾಯವನ್ನು ಇಂದು ಹಂಚಿಕೊಂಡರು.ಈ ಸಂದರ್ಭದಲ್ಲಿ ಮತಯಾಚನೆ ಮಾಡಲು ಅವರ ಮನೆಗೆ ಬಂದ ಶಾಸಕ ಎಚ್ ಕೆ ಕುಮಾರಸ್ವಾಮಿ ಅವರಿಗೆ ಏಲಕ್ಕಿ ಹಾರ ಹಾಕುವ ಮೂಲಕ ಅವರನ್ನು ಪ್ರೀತಿಯಿಂದ ಮುಸ್ಲಿಂ ಹಿರಿಯ ಮುಖಂಡ ಟಿಂಬರ್ ಅಸ್ಮತ್ ಕುಟುಂಬ ಸ್ವಾಗತಿಸಿದರು.
*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*
