ಹಾಸನ: ಮನಸ್ಸಿಗೆ ಸಂಗೀತ ಹೇಗೆ ಉಲ್ಲಾಸ ಕೊಡುತ್ತದೆ ಅದರಂತೆ ಚಿತ್ರಕಲೆಯು ಮನಸ್ಸಿಗೆ ಸಂತೋಷವನ್ನುಂಟು ಮಾಡುತ್ತದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪತ್ರಕರ್ತರ ಸಂಘ, ಚಿತ್ಕಲಾ ಫೌಂಡೇಶನ್, ಹೊಯ್ಸಳ ಚಿತ್ರಕಲಾ ಪರಿಷತ್, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ನಿರ್ಮಲ ಚಿತ್ರಕಲಾ ಶಾಲೆ, ಶಾಂತಲ ಚಿತ್ರಕಲಾ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಪಿ.ಆರ್. ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವದ ಅಂಗವಾಗಿ ಚಿತ್ರಕಲಾ ಪ್ರದರ್ಶನ, ಸ್ಪರ್ದೆ, ಪ್ರಾತ್ಯಕ್ಷಿಕೆ ಮತ್ತು ವಿಚಾರ ಸಂಕೀರ್ಣವನ್ನು ಪ್ರತಿಮೆಗೆ ಹಾಗೂ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು

ನಂತರ ಮಾತನಾಡಿದ ಅವರು, ಚಿತ್ರಕಲೆ ಎಂದರೇ ಪ್ರಪಂಚದಲ್ಲಿ ತನ್ನದೆಯಾದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಚಿತ್ರ ಎಂಬುದು ಬಡವನ ಕಾಲವನ್ನು ಮತ್ತು ಶ್ರೀಮಂತ ಕಾಲ, ಮಹಾರಾಜನನ್ನು ಕೂಡ ಚಿತ್ರ ಬಿಡಿಸಿ ಬಿಂಭಿಸುತ್ತದೆ. ಚಿತ್ರಕಲೆ ಎಂಬುದು ಸಾಮಾನ್ಯವಾದ ಕಲೆಯಲ್ಲ. ಜೀವನದ ಆಗುಹೋಗುಗಳನ್ನು, ಆಚಾರ ವಿಚಾರಗಳನ್ನು ಒಂದು ಗೆರೆಯ ಮೂಲಕ ತೋರಿಸುವ ಕಲೆ ಇದ್ದರೇ ಅದು ಚಿತ್ರಕಲೆ ಮಾತ್ರ ಎಂದರು. ಒಂದು ಕಥೆಯನ್ನು ಪುಸ್ತಕಗಳಲ್ಲಿ ಓದಬೇಕು. ಅದೆ ಚಿತ್ರಕಲೆ ಮೂಲಕ ಕೇವಲ ಒಂದು ಚಿತ್ರದಲ್ಲಿಯೇ ಕಥೆಯನ್ನು ತೋರಿಸುತ್ತದೆ. ಮನಸ್ಸಿಗೆ ಸಂಗೀತ ಹೇಗೆ ಉಲ್ಲಾಸ ಕೊಡುತ್ತದೆ ಅದರಂತೆ ಚಿತ್ರಕಲೆಯು ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ ಎಂದು ಕಿವಿಮಾತು ಹೇಳಿದರು.

ಇರುವ ಚಿತ್ರಕಲೆಯು ಎಂದಿಗೂ ನಶೀಸಿ ಹೋಗಬಾರದು. ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಚಿತ್ರಕಲೆ ಬಗ್ಗೆ ಆಸಕ್ತಿ ಮೂಡಿಸುವಂತಾಗಬೇಕು ಎಂದು ಸಲಹೆ ನೀಡಿದರು. ಚಿತ್ರಕಲೆ ಮೂಲಕ ಜಿಲ್ಲೆ, ರಾಜ್ಯ, ದೇಶವಲ್ಲ ವಿಶ್ವದಲ್ಲೆ ಹೆಸರು ಮಾಡಿದ್ದಾರೆ.

ಪಿ.ಆರ್.ತಿಪ್ಪೇಸ್ವಾಮಿ ಅವರು ಕರ್ನಾಟಕ ಕಂಡ ಅಪ್ರತಿಮ ಕಲಾವಿದರು. ನಾಡಿನ ಸಮಕಾಲೀನ ಚಿತ್ರಕಲಾ ಜಗತ್ತಿನ ಮೇರು ಶಿಖರಗಳಲ್ಲೊಬ್ಬರಾಗಿದ್ದವರು. ಕರ್ನಾಟಕ ಚಿತ್ರಕಲೆಯ ಸರ್ವತೋಮುಖ ಬೆಳವಣಿಗೆಗಾಗಿ ಬದುಕಿನುದ್ದಕ್ಕೂ ದಣಿವರಿಯದ ದುಡಿದು, ನಮ್ಮಿಂದ ಮರೆಯಾದ ಹಿರಿಯಚೇತನ, ಹುಟ್ಟು ಕಲಾವಿದರಾದ ಅವರು ಸಾಂಸ್ಕೃತಿಕ ರಾಜಧಾನಿಯಾದ ಮೈಸೂರನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ಚಿತ್ರಕಲೆ, ಸಾಹಿತ್ಯ, ಜಾನಪದ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಲ್ಲಿಸಿದ ಸೇವೆ ಅನನ್ಯವಾದುದ್ದು, ಅಂದು ಮಾಡಿ ಹೋದಂತಹ ಈ ಕಲೆ ಮಕ್ಕಳಿಗೆ ಸ್ಪೂರ್ತಿದಾಯಕವಾಗಲಿ ಎಂದು ಹೇಳಿದರು.

ಆಕಾಶವಾಣಿಯ ವಿಜಯ್ ಅಂಗಡಿ ಮಾತನಾಡಿ, ಚಿತ್ರಗಳು ಕೈಯಿಂದ ಸೃಷ್ಠಿಯಾದರೂ ಮುಖ್ಯವಾಗಿ ನಿಸರ್ಗದಿಂದ ಮೂಡುತ್ತವೆ. ಚಿತ್ರಕಲೆಯನ್ನು ಮೈಗೂಡಿಸಿಕೊಂಡು ಅದೆಷ್ಟೊ ಕಲಾವಿದರುಗಳು ಬೆಳೆದಿದ್ದಾರೆ. ಚಿತ್ರಕಲೆ ಎಂಬುದು ಶಿಕ್ಷಣದ ಒಂದು ಭಾಗವಾಗಿದ್ದರೂ ಓದುವಿಗೆ ಪೂರಕವಾಗಿ ಚಿತ್ರಕಲೆಯನ್ನು ತೆಗೆದುಕೊಂಡರೇ ಅವರ ವ್ಯಕ್ತಿತ್ವವನ್ನು ಚನ್ನಾಗಿ ರೂಪಿಸುತ್ತದೆ ಕಿವಿಮಾತು ಹೇಳಿದರು. ಕಲೆಯನ್ನು ಯಾರು ಉತ್ತಮವಾಗಿ ಅಭಿವ್ಯಕ್ತಿಗೊಳಿಸುತ್ತಾರೆ ಅವರಿಗೆ ಸೂಕ್ತ ಅವಕಾಶ ದೊರಕಲಿದೆ. ಒಂದು ಕಲೆಯನ್ನು ಛಲದಲ್ಲಿ ಬಿಡದೆ ಅಭ್ಯಾಸ ಮಾಡುತ್ತಾ ಹೋದರೇ ಆತನು ಜ್ಞಾನಿಯಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಚಿತ್ರಕಲಾ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಮಕ್ಕಳಿಗೆ ಏರ್ಪಡಿಸಿದ್ದು, ನೂರಾರು ಮಕ್ಕಳು ಉತ್ಸಹದಿಂದ ಪಾಲ್ಗೊಂಡಿದ್ದರು. ಇದೆ ವೇಳೆ ಚಿತ್ರಕಲೆಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಇದೆ ವೇಳೆ ಪಿ.ಆರ್.ಟಿ. ಟ್ರಸ್ಟ್ ಅಧ್ಯಕ್ಷರಾದ ರಾಜಶೇಖರ್ ಕದಂಬ, ಕೆ.ಎಂ.ಎಫ್‌ನ ಗೋವಿಂದರಾಜು, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ವಿ. ರವಿ, ಹಿರಿಯ ಕಲಾವಿದೆ ವಿ. ಮಂಜುಳ, ಶಾಂತಳ ಚಿತ್ರಕಲಾ ಶಾಲೆಯ ಪ್ರಾಚಾರ್ಯರಾದ ಎಲ್.ಜಿ.ಲತಾ, ಯುವ ಕಲಾವಿದರಾದ ಕೆ.ಎನ್. ಶಂಕರಪ್ಪ, ವೈ.ಹೆಚ್.ಜಯರಾಮ್, ಕೆ.ಜಿ. ಶಿವಶಂಕರ್, ಎನ್. ನಾಗೇಶ್, ಸ್ವಾಮಿ, ಹಿರಿಯ ವಕೀಲ ನವಿಲೆ ಅಣ್ಣಪ್ಪ, ಹಿರಿಯ ಕಲಾವಿದ ಬಿ.ಎಸ್. ದೇಸಾಯಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಪಿಆರ್‌ಟಿ ಟ್ರಸ್ಟ್‌ನ ಹೆಚ್.ಎಂ. ಪರಮೇಶ್ವರಯ್ಯ, ಮಹಾದೇವಶೆಟ್ಟಿ, ಸೌಜನ್ಯ, ಮಾನಸ, ಶಿವಕುಮಾರ್ ಇತರರು ಪಾಲ್ಗೊಂಡಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *