
ಅರಸೀಕೆರೆ:ತಾಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ತಂಗಿರುವ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಕೊಳವೆ ಬಾವಿ ಜಲಮರುಪೂರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಅಂತರ್ಜಲ ಇಂಗಿ ಹೋದರೆ ಎಷ್ಟೋ ಕಡೆ ಬಾವಿ ಕೊರೆಸಿದರು ಎಷ್ಟೇ ಆಳ ಕೊರೆಸಿದರು ನೀರು ಸಿಗುವುದಿಲ್ಲ ಹಾಗಾಗಿ ಜಲ ಮರುಪೂರಣ ಮಾಡೋದು ಅತಿ ಮುಖ್ಯವೆಂದು ತಿಳಿಸಿದರು.
ಜಲಮರುಪೂರಣವನ್ನು ಮಾಡುವ ವಿಧಾನ ಹಾಗೂ ಲಾಭಗಳ ಬಗ್ಗೆ ಸಂಪೂರ್ಣ ವಿಸ್ತರಣೆ ನೀಡಿದ್ದರು.ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಶಿವಬಸಪ್ಪ ಕಂದಕೂರ್ ರವರು ( ಕೃಷಿ ಇಂಜಿನಿಯರ್ ವಿಭಾಗ) ಆಗಮಿಸಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು.
