ಹಾಸನ : ಹಾಸನದಲ್ಲಿ ‌ಸಿಎಂ ಸಿದ್ದರಾಮಯ್ಯ ಹೇಳಿಕೆ

ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ

ಹಿಂಗಾರು ಉತ್ತಮವಾಗಿ ಆಗಲಿ‌ ಎಂದು ಹಾಸನಾಂಬೆಗೂ ಪ್ರಾರ್ಥನೆ ಮಾಡುತ್ತೇನೆ

ಕಿಯೋನಿಕ್ಸ್ ಅಧಿಕಾರಿ ಸಂಗಪ್ಪ ಲಂಚ ಕೇಳಿದ ಆರೋಪ ನಾನು ಈ ಬಗ್ಗೆ ವಿಚಾರಣೆ ಮಾಡುತ್ತೇನೆ ಅದು ಸತ್ಯವಾಗಿದ್ದರೆ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇನೆ

ಕೇವಲ ಶಾಸಕರನ್ನ ಸೆಳೆಯೋ‌ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ‌ಹೇಳಿಕೆ ವಿಚಾರ : ಕುಮಾರಸ್ವಾಮಿ ‌ಯಾವತ್ತು ಸತ್ಯ ಹೇಳಿದ್ದಾರೆ, ಎಲ್ಲ ಬರಿ ಸುಳ್ಳೆ ಹೇಳೋದು ಅದು ಬಿಟ್ರೆ ಅವರಿಗೆ ಬೇರೆ ಕೆಲಸ ಇಲ್ಲ ಬರದ ವಿಚಾರದಲ್ಲಿ‌ ನಾವು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿಲ್ಲ ದುಡ್ಡು ಕೇಳುತ್ತಿದ್ದೇವೆ, ಕೇಳಬೇಕೆ ಬೇಡ್ವಾಒಕ್ಕೂಟ ವ್ಯವಸ್ಥೆ ಯಲ್ಲಿ ರಾಜ್ಯ ಕೇಂದ್ರ ಸಮನ್ವಯದಿಂದ ಕೆಲಸ ಮಾಡಬೇಕು

ಕರ್ನಾಟಕದಲ್ಲಿ ಬರ ಬಂದ್ರೆ ಕೇಂದ್ರದ ಜವಾಬ್ದಾರಿಯು ಇರುತ್ತೆ ಕೇಂದ್ರಕ್ಕೆ ತೆರಿಗೆ ಮೂಲಕ ಹಣ ಕೊಡೋದು ರಾಜ್ಯಗಳು ನಮಗೆ ಸಂಕಷ್ಟ ಎದುರಾದಾಗ ನೆರವಾಗಬೇಕಾಗಿದ್ದು ಕೇಂದ್ರದ ಜವಾಬ್ದಾರಿ33,700 ಕೋಟಿ ಬೆಳೆ ನಷ್ಟವಾಗಿದ್ದು, 17ಸಾವಿರ‌ಕೋಟಿ ಕೇಳಿದ್ದೇವೆ ರೈತರು ಸಂಕಷ್ಟದಲ್ಲಿದ್ದಾರೆ ಬೇಗ ಹಣ ಕೊಡಿ ಎಂದು ಕೇಳುತ್ತಿದ್ದೇವೆ ಅಷ್ಟೆ ಎಂದ ಸಿಎಂ ಸಿದ್ದರಾಮಯ್ಯ

ಮೋದಿ ವಿರುದ್ಧ ದುರಹಂಕಾರದಿಂದ ಮಾತನಾಡುತ್ತಿದ್ದಾರೆ ಎಂಬ ವಿಚಾರ ಹಾಸನದಲ್ಲಿ ‌ಸಿಎಂ ಸಿದ್ದರಾಮಯ್ಯ ಹೇಳಿಕೆ

ಮೋದಿಯವರು ನನ್ನ ಬಗ್ಗೆ ಮಾತನಾಡಬಹುದಾ ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ವಿಚಾರ ಮಾತಾಡೋದು ಏನಿರುತ್ತೆ ಚುನಾವಣಾ ಪ್ರಚಾರ ಮಾಡಬೇಕು ಅಷ್ಟೇ ಮೊದಿಯವರಿಗೆ ನಮ್ಮ ಬಗ್ಗೆ ಭಯ‌ ಇರಬೇಕು ಎಂದ ಸಿ ಎಂ ಸಿದ್ದು ಕಾಂಗ್ರೆಸ್ ಶೇಮ್ ಲೆಸ್ ಪಾರ್ಟಿ ಎಂಬ ವಿಚಾರ ಯತ್ನಾಳ್ ಹಿಮ್ ಸೆಲ್ಫ್ ಈಸ್ ಎ ಶೇಮ್ ಲೆಸ್ ಎಂದು ಲೇವಡಿ ಅವರಿಗೆ ನೋಟಿಸ್ ಕೊಟ್ಟವರ್ಯಾರು ಯತ್ನಾಳ್ ಏನು ಬಹಳಾ‌ ಸದ್ಗುಣ ಇರೋ ವ್ಯಕ್ತೀನಾ ಬಿಜೆಪಿಯವರೇ ನಡವಳಿಕೆ ಸರಿ ಇಲ್ಲ ಎಂದು ನೋಟಿಸ್ ಕೊಟ್ಟಿಲ್ವಾ

ಮೌಢ್ಯ ವಿರೋಧಿ ಕಾನೂನು ಬಗ್ಗೆ ಸಿಎಂ ಪ್ರತಿಕ್ರಿಯೆ

ಹಾಸನಾಂಬೆ ದರ್ಶನವನ್ನ ಹಿಂದಿನಿಂದಲೂ ಆಚರಣೆ ಮಾಡಿದ್ದಾರೆನಾನು ಮೌಢ್ಯಗಳನ್ನ ಆಚರಿಸುವುದು ರೂಢಿಯಿಲ್ಲ ದೇವರ ಬಗ್ಗೆ ನನಗೆ ನಂಬಿಕೆ ಇದೆ ಬಹುತೇಕ ಜನರೂ ಕೂಡ ದೇವರನ್ನ ನಂಬುತ್ತಾರೆ99.9999% ಜನ ದೇವರನ್ನ ನಂಬುತ್ತಾರೆ.

ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರೋ ವಿಚಾರ

ನಾವು ಯಾರನ್ನೂ ಕರೆದುಕೊಂಡು ಬರೋದಿಲ್ಲ ಪಕ್ಷದ ಸಿದ್ಧಾಂತ, ನಾಯಜತ್ವ ಒಪ್ಪಿ ಬಂದ್ರೆ ಬೇಡ ಎನ್ನೊಲ್ಲ ರಾಜ್ಯದಲ್ಲಿ ವಿದ್ಯುತ್ ಸ್ಥಿತಿ ಉತ್ತಮವಾಗುತ್ತಿದೆ 7 ಗಂಟೆ ತ್ರೀ ಫೇಸ್ ಕರೆಂಟ್ ನೀಡಲು ನೆನ್ನೆ ತೀರ್ಮಾನಿಸಲಾಗಿದೆ ಲೋಕಸಭಾ ಚುನಾವಣೆಗೆ ಎಲ್ಲರನ್ನೂ ಒಟ್ಟುಗೂಡಿ ಚರ್ಚಿಸಿ‌ ಅಭ್ಯರ್ಥಿ ಹಾಕುತ್ತೇವೆ ಎಂದ ಸಿಎಂ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *