*ಸಕಲೇಶಪುರದ ವಿಧಾನಸಭಾ ಕ್ಷೇತ್ರದ ಪ್ರಬಲ ರಾಜಕೀಯ ದಿಗ್ಗಜರ ಮೂಲೆಗುಂಪು ಮಾಡಿದ ರಾಜಕೀಯ ಕುತಂತ್ರಿಗಳು* ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ನೋಡುತ್ತಿದ್ದರೆ ಕುಡುಕರಿಗೆ , ಪುಂಡ ಪೋಕರಿಗಳಿಗೆ ಮುಂದಿನ ದಿನಗಳಲ್ಲಿ ಅಪಾರ ಸವಲತ್ತುಗಳು ದೊರಕುವಂತೆ ಕಾಣುತ್ತಿದೆ. ನಿಷ್ಠಾವಂತರಿಗೆ ಇಲ್ಲಿ ಬೆಲೆಯಿಲ್ಲ ಅದರಲ್ಲೂ ನಮ್ಮ ಸಕಲೇಶಪುರದ ವಿಧಾನ ಸಭಾ ಕ್ಷೇತ್ರದಲ್ಲಿ ನಾ ಕಂಡಂತೆ ಹಿರಿಯ ರಾಜಕೀಯ ದಿಗ್ಗಜರಾದ ಹುರುಡಿ ವಿಶ್ವನಾಥ್ ಮತ್ತು ಬಿ.ಆರ್.ಗುರುದೇವ್ ರವರನ್ನ ಮೂಲೆ ಗುಂಪು ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಶ್ರೀ ಬಿ.ಆರ್.ಗುರುದೇವ್ ರವರು ಮಾಜಿ ಶಾಸಕರಾಗಿ, ಮಾಜಿ ಎಂ.ಎಲ್.ಸಿ ಆಗಿ ಸಕಲೇಶಪುರದಲ್ಲಿ ಸೇವೆ ಮಾಡಿದಂತಹ ಮಹಾನ್ ವ್ಯಕ್ತಿ, ಎಷ್ಟೋ ಜನ ಕಾರ್ಯಕರ್ತರಿಗೆ ಸ್ಪೂರ್ತಿ ಯಾದ ಧೀಮಂತ ನಾಯಕ. ಹೆಸರೇ ಹೇಳುವಂತೆ ರಾಜಕೀಯ ಕ್ಷೇತ್ರದಲ್ಲಿ ನಿಜವಾದ ಗುರುದೇವ ಇವರು. ಆದರೇ ಕೆಲವು ರಾಜಕೀಯ ಕುತಂತ್ರಿಗಳ ದಾಳಕ್ಕೆ ಮೂಲೆಗುಂಪು ಆದಂತೆ ನೇರವಾಗಿ ಗೋಚರ ಆಗುತ್ತಿದೆ. ಲಿಂಗಾಯತ ಸಮುದಾಯದ ಪ್ರಬಲ ನಾಯಕರಿಗೆ ಈ ಪರಿಸ್ಥಿತಿ ಆದರೆ ಇನ್ನು ಸಾಮಾನ್ಯರ ಅವಸ್ಥೆ ಏನಾಗಿರಬಹುದು ಎಂಬುದು ಊಹಿಸತಕ್ಕದ್ದು.ಇನ್ನೊಬ್ಬ ಮಹಾನ್ ನಾಯಕ ಹುರುಡಿಯ ಧಣಿ, ತಮ್ಮ ಹೊರಾಟದ ಮುಖಾಂತರ ಜನ ಸಾಮಾನ್ಯರ ಮನೆ ಮನ ದಲ್ಲಿ ಹೆಸರಾಗಿರುವ ನಾಯಕರು ಶ್ರೀ ಹುರುಡಿ ವಿಶ್ವನಾಥ್ ರವರು ಸಾಮಾನ್ಯ ಕುಟುಂಬದಿಂದ ಬಂದು ಹೊರಾಟದ ಮುಖಾಂತರ ಹೆಸರಾಗಿ ಶಾಸಕನಾಗಿ ಜನಸಾಮಾನ್ಯರ ಸೇವೆಯಲ್ಲಿ ಜೀವನ ಕಳೆಯುತ್ತಿರುವ ಉತ್ತಮ ವ್ಯಕ್ತಿ ಹುರುಡಿ ವಿಶ್ವಣ್ಣ ರವರು. ಇವರನ್ನು ಕೂಡ ಇಂದು ಮೂಲೆಗುಂಪು ಮಾಡಲಾಗಿದೆ. ಪಕ್ಷ ಸಂಘಟನೆಗೆ ಹಗಲಿರುಳು ದುಡಿದು ಕಾಡಾನೆ ಹಾವಳಿಗೆ ತುತ್ತಾದ ಅದೆಷ್ಟೋ ರೈತರ ಕುಟುಂಬಗಳಿಗೆ ತಮ್ಮ ಹೋರಾಟದ ಮೂಲಕ ನ್ಯಾಯ ಒದಗಿಸುವ ಕೆಲಸ ಇವರಿಂದ ಆಗಿದೆ. ಇಂತಹ ವ್ಯಕ್ತಿತ್ವ ಹೊಂದಿರುವ ಇವರನ್ನು ಕೂಡ ಇಂದು ಮೂಲೆಗುಂಪು ಮಾಡಿದ್ದಾರೆ. ನಾಯಕತ್ವದ ಗುಣಗಳನ್ನು ಹೊಂದಿರುವ ಹಿರಿಯರನ್ನು ಕಡೆಗಣಿಸಿರುವ ಕೆಲವು ರಾಜಕಾರಣಿ ಗಳಿಗೆ ಇವರ ಬೆಲೆ ಏನೆಂದು ಮತ ಎಣಿಕೆಯ ದಿನ ತಿಳಿಯುವುದು. ಜನರೇ ಇದಕ್ಕೆಲ್ಲ ಸದ್ಯದಲ್ಲೇ ಉತ್ತರ ನೀಡುತ್ತಾರಾ. ಕಾದು ನೋಡೋಣ…! ಇಂತಿ, ಸಾಗರ್ ಜಾನೇಕೆರೆಸಂಸ್ಥಾಪಕ ರಾಜ್ಯಾಧ್ಯಕ್ಷರು, ಮಲೆನಾಡು ರಕ್ಷಣಾ ಸೇನೆ ಕರ್ನಾಟಕ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *