ಸಕಲೇಶಪುರ: ವಿಧಾನಸಭಾ ಕ್ಷೇತ್ರದ ಸರ್ವ ಸಮಸ್ಯೆಗಳ ಪರಿಹಾರ ಬಯಸುವವರು ಈ ಬಾರಿ ಬದಲಾವಣೆಗಾಗಿ ಮತ ಚಲಾಯಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುರಳಿ ಮೋಹನ್ ಗೆಲ್ಲಿಸಿ ಎಂದು ಸಂಸದ ಡಿಕೆ ಸುರೇಶ್ ಹೆತ್ತೂರಿನಲ್ಲಿ ಮನವಿ ಮಾಡಿದರು. ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅವರು, ಸಕಲೇಶಪುರ ತಾಲೂಕು ಸಮೃದ್ಧಿಯ ತಾಣವಾಗಿದ್ದರು ಅನೇಕ ಸಮಸ್ಯೆಗಳಿಂದ ತಾಂಡವಡುತ್ತಿದೆ. ಇದಕ್ಕೆ ಇಲ್ಲಿಯ ಶಾಸಕರು ಎಚ್ ಕೆ ಕುಮಾರಸ್ವಾಮಿ ನೇರ ಹೊಣೆ ಎಂದು ಹೇಳಿದರು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ, ಸ್ಥಳೀಯ ಶಾಸಕರು ಸಹ ಕಾಂಗ್ರೆಸ್ ನವರೇ ಆದರೆ ಇಲ್ಲಿಯ ಅಭಿವೃದ್ಧಿಗೆ ಒತ್ತು ನೀಡಿದಂತೆ ಆಗುತ್ತದೆ ಈ ಬಾರಿ ಕಾಂಗ್ರೆಸ್ಸನ್ನ ಬೆಂಬಲಿಸಿ ಎಂದು ಹೇಳಿದರು. ಸ್ಥಳೀಯ ಶಾಸಕ ಕುಮಾರಸ್ವಾಮಿ ನನ್ನಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿ ಅವರೇ ಒಪ್ಪಿಕೊಂಡಿದ್ದಾರೆ ಇಂತಹ ವ್ಯಕ್ತಿಯನ್ನು ತಿರಸ್ಕರಿಸುವುದು ಇಲ್ಲಿಯ ಮತದಾರರ ಅಭಿಪ್ರಾಯವೂ ಸಹ ಆಗಿದೆ ಎಂದರು. ಸಕಲೇಶಪುರ ನೈಸರ್ಗಿಕವಾಗಿ ಸಂಪತ್ ಭರಿತವಾದ ತಾಲೂಕ ಆಗಿದೆ ಇಲ್ಲಿಯ ಪ್ರವಾಸೋದ್ಯಮ ಜಗತ್ತನ್ನೇ ಆಕರ್ಷಿಸುತ್ತದೆ. ಕಾಂಗ್ರೆಸ್ ಗೆ ಅಧಿಕಾರ ಕೊಟ್ಟರೆ ಅದ್ಭುತವಾದ ನೆಲೆಯಾಗಿ ಮಾಡುತ್ತೇವೆ ಈ ಭರವಸೆಯನ್ನು ನೀಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಮುರಳಿ ಮೋಹನ್, ತಾಲೂಕು ಅಧ್ಯಕ್ಷ ಭೈರಮುಡಿ ಚಂದ್ರು ವೀರಶೈವ ಮುಖಂಡ ವಿದ್ಯಾಶಂಕರ್, ಕೆಪಿಸಿಸಿ ಸದಸ್ಯ ಏಡೆಹಳ್ಳಿ ಮಂಜುನಾಥ್, ಕೊಳ್ಳಹಳ್ಳಿ ಸಲೀಂ, ಹಾನುಬಾಳ್ ಭಾಸ್ಕರ್ , ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಫಾರೂಕ್ ಮುಂತಾದವರು ಇದ್ದರು.ದಲಿತ ಮುಖಂಡ ಹೆತ್ತೂರು ಅಣ್ಣಯ್ಯ ಮಾತನಾಡಿ, ರಾಜ್ಯಾದ್ಯಂತ ದಲಿತ ಸಂಘಟನೆಗಳು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಮುಂದಾಗಿವೆ. ಬಿಜೆಪಿ ದುರಾಳದಿಂದ ಬೇಸತ್ತಿರುವ ರಾಜ್ಯದ ಜನರನ್ನ ಮುಕ್ತಿ ಕಾಣಿಸಬೇಕು ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಡಲೇಬೇಕು ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ. ಸಕಲೇಶಪುರದಲ್ಲೂ ಸಹ ಬದಲಾವಣೆ ಬಯಿಸಿ, ಎಲ್ಲರೂ ಸಹ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಲು ಮುಂದಾಗಿದ್ದಾರೆ ಎಂದು ಹೇಳಿದರು.ಹೆತ್ತೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಾರಿ ಬೆಂಬಲ ಸೂಚಿಸಿದ ಜನರು, ಸಾವಿರಾರು ಜನರು ಭಾಗವಹಿಸಿದ್ದರು. ಬಹಳ ವರ್ಷಗಳ ನಂತರ ಈ ಮಟ್ಟದ ಜನರ ಸಂವಹನ ಕಂಡು ಬಂತು ರೋಡ್ ಶೋನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸಂಸದ ಡಿಕೆ ಸುರೇಶ ರವರಿಗೆ ಜನ ಜೈಕಾರ ಹಾಕಿದರು.

*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *