
ಸಕಲೇಶಪುರ : ತಾಲ್ಲೂಕಿನ ಬೆಳಗೋಡು ಗ್ರಾಮ ವ್ಯಾಪ್ತಿಯ ಹೆಬ್ಬನಹಳ್ಳಿ ಸಿಡಗಳಲೆ ಗೊಳಗಂಡೆ ಮೂಗಲಿ, ಕಟ್ಟೆಪುರ, ಸುತ್ತಮುತ್ತ ಸುಮಾರು 35ಕ್ಕೂ ಹೆಚ್ಚುಕಾಡಾನೆ ಗಳು ಸಂಚರಿಸುತ್ತಿದ್ದು ರೈತರು ಬೆಳೆದಿದ್ದ ಬತ್ತ, ಕಾಫಿ, ಅಡಿಕೆ, ಹಾನಿ ಮಾಡುತ್ತಿದ್ದು, ಈ ಭಾಗದ ರೈತರು ಸಾಕಷ್ಟು ಆತಂಕ ಎದುರಿಸುತ್ತಿದ್ದಾರೆ.
ಅಲ್ಲದೆ ಶಾಲೆ ಮಕ್ಕಳು, ಕೂಲಿ ಕಾರ್ಮಿಕರು, ತುಂಬಾ ಭಯಬಿತರಾಗಿ ತಿರುಗಾಡುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಬೆಳಗೋಡು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಕೆ ಎಲ್ ಮಂಜಪ್ಪ ಗೌಡರು ಹಾಗೂ ಸಂಘದ ವತಿಯಿಂದ ದಿನಾಂಕ 10/ 11 /2023 ಜಿಲ್ಲಾ ಫಾರೆಸ್ಟ್ ಅಧಿಕಾರಿಗಳನ್ನು ಭೇಟಿ ಮಾಡಿ ಆನೆ ಹಾವಳಿಯಿಂದ ಬೆಳೆ ನಷ್ಟ ಉಂಟಾಗಿರುವ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಸೂಕ್ತ ಪರಿಹಾರವನ್ನು ಒದಗಿಸಿಕೊಡುವುದಾಗಿ ಮನವಿ ಮಾಡಲಾಯಿತು
ಈ ಸಂದರ್ಭದಲ್ಲಿ ಬಿ ಎನ್ ಬಸವಣ್ಣ ಮಾಜಿ ಅಧ್ಯಕ್ಷರು, ಎಚ್ ಡಿ ಪಿ ಎ ಉಪಾಧ್ಯಕ್ಷರಾದ ಪರಮೇಶ್, ಎಚ್ ಬಿ ದೇವರಾಜ್, ನಿರ್ದೇಶಕರಾದ ಎಸ್ ಎನ್ ಜಗದೀಶ್, ಶಿವನಂಜಪ್ಪ, ಬಿಬಿ ಲೋಕೇಶ್ ಉಪಚಿತರಿದ್ದರು.
