ಅರೇಹಳ್ಳಿ : ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಕಡೇಗರ್ಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಲಯನ್ಸ್ ಸದಸ್ಯ ಲೋಕೇಶ್ ಹಾಗೂ ಇತರ ಲಯನ್ಸ್ ಸದಸ್ಯರು ಡ್ರಮ್ ಸೆಟ್ ಕೊಡುಗೆ ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದರು.

ಶಾಲಾ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸುವ ಉದ್ದೇಶದಿಂದ ನೀಡಲಾದ ಈ ಕೊಡುಗೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾಯಿತು.ಸೇವಾ ಮನೋಭಾವದಿಂದ ಶಾಲೆಗೆ ಅಗತ್ಯವಾದ ಡ್ರಮ್ ಸೆಟ್ ಒದಗಿಸಿಕೊಟ್ಟ ಲಯನ್ಸ್ ಸದಸ್ಯ ಲೋಕೇಶ್ ಹಾಗೂ ಸಹಕರಿಸಿದ ಎಲ್ಲರಿಗೂ ಶಾಲೆಯ ಶಿಕ್ಷಕರು ಕೃತಜ್ಞತೆ ಸಲ್ಲಿಸಿದರು.

ಸಮಾಜದ ಗಣ್ಯರು ಹಾಗೂ ಸಂಘ-ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇಂತಹ ಸಹಕಾರ ನೀಡುತ್ತಿರುವುದು ಶ್ಲಾಘನೀಯವಾಗಿದ್ದು, ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.

ಈ ವೇಳೆ ಲಯನ್ಸ್ ಅಧ್ಯಕ್ಷ ಲ.ಸತೀಶ್ ಪೂಜಾರಿ ,ಕಾರ್ಯದರ್ಶಿ ಲ. ಸೌಜನ್ಯ, ಖಜಾಂಚಿ ಲ. ಗುರು ಪ್ರಸಾದ್, ಲ.ಲೋಕೇಶ್,ಲ. ಬೃಂದನ್ ,ಲ.ಚಾಮರಾಜ್, ಲ.ಸಂತೋಷ್ , ಲ.ಸಂತೋಷ್ ಕೆ.ಎಸ್,ಲ. ಕಾಂತರಾಜು ಹಾಗೂ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *