ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಿಸಿರುವ ಚಿಕ್ಕನಗರ ಉಪ ವಿದ್ಯುತ್ ಕೇಂದ್ರದಿಂದ ಕಾಡುಮನೆಯಲ್ಲಿ ನೂತನವಾಗಿ ನಿರ್ಮಿಸಿರುವ ಉಪ ವಿದ್ಯುತ್ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ 20.05 ಕಿ.ಮೀ ಅಂತರದ 66 ಕೆವಿ ಮಾರ್ಗದ నిರ್ಮಾಣ ಕಾಮಗಾರಿಯು ಪೂರ್ಣಗೊಂಡಿದ್ದು, ಸದರಿ ವಿದ್ಯುತ್ ಮಾರ್ಗದಲ್ಲಿ ದಿನಾಂಕ 18.11.2023 ರಿಂದ 66 ಕೆವಿ ವಿದ್ಯುತ್ ನ್ನು ಹರಿಸಲಾಗುವುದು. ಸದರಿ ವಿದ್ಯುತ್ ಮಾರ್ಗವು ಚಿಕ್ಕನಗರ, ಹೆಬ್ಬಸಾಲೆ, ವಾಟೆಗಂಡಿ, ಗಾಣದಹೊಳೆ, ಹಾರ್ಲೆಕುಡಿಗೆ, ಕುಂಬರಡಿ, ನಡಹಳ್ಳಿ, ಗುರ್ಜೆನಹಳ್ಳಿ, ಮಲ್ಲಗದ್ದೆ ಮತ್ತು ಕಾಡುಮನೆ ಗ್ರಾಮಗಳ ವ್ಯಾಪ್ತಿಯಲ್ಲಿ ಹಾದುಹೋಗುತ್ತದೆ.ಆದ್ದರಿಂದ ಸಾರ್ವಜನಿಕರು ಈ ಮಾರ್ಗದ ವಿದ್ಯುತ್ ಗೋಪುರವನ್ನು ಹತ್ತುವುದಾಗಲಿ, ಅವುಗಳಿಗೆ ದನ-ಕರುಗಳನ್ನು ಕಟ್ಟುವುದಾಗಲಿ, ಹಸಿರು ಬಳ್ಳಿ ಅಥವಾ ಲೋಹದ ತಂತಿಗಳನ್ನು ಎಸೆಯುವುದಾಗಲಿ ಮಾಡಬಾರದು. ಇದರಿಂದ ಸಾರ್ವಜನಿಕರ ಆಸ್ತಿ-ಪಾಸ್ತಿ ಮತ್ತು ಪ್ರಾಣಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಮೇಲೆ ತಿಳಿಸಿರುವ ಯಾವುದೇ ತರಹದ ದುಷ್ಕೃತ್ಯಗಳಿಗೆ ಒಳಗೊಂಡ ಅಪಘಾತ ಅಥವಾ ಹಾನಿ ಸಂಭವಿಸಿದರೆ ಅವರೇ ಜವಾಬ್ದಾರರಾಗಿರುತ್ತಾರೆ ಎಂದು ಈ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುತ್ತಿದ್ದೇವೆ. ಸಾರ್ವಜನಿಕರ ಬೇಜವಾಬ್ದಾರಿಯಿಂದ ಆಗುವ ಅನಾಹುತಗಳಿಗೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತವು ಜವಾಬ್ದಾರಿಯಾಗಿರುವುದಿಲ್ಲ.ಆತ್ಮೀಯಕಾರ್ಯಪಾಲಕ ಇಂಜಿನೀಯರ್. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಎತ್ತಿನಹೊಳೆ ಯೋಜನಾ ವಿಭಾಗ ನಂ.।

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *