ಅರೇಹಳ್ಳಿ: ಮಕ್ಕಳಲ್ಲಿರುವ ಕರಕುಶಲತೆ, ವೈಜ್ಞಾನಿಕ ಮನೋಭಾವನೆ, ಅದನ್ನು ವಿವರಿಸುವ ಕೌಶಲ್ಯವನ್ನು ಹೊರಹಾಕಲು ಆಡಳಿತ ಮಂಡಳಿಯ ಸಹಕಾರದೊಂದಿಗೆ ಮಕ್ಕಳ ದಿನಾಚರಣೆಯ ಅಂಗವಾಗಿ ನಮ್ಮ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶವನ್ನು ಆಯೋಜನೆ ಮಾಡಲಾಗಿದೆ ಎಂದು ಕನ್ನಡ ಭಾಷಾ ಶಿಕ್ಷಕಿ ಆಶಾ ಹೇಳಿದರು.

ಬೇಲೂರು ತಾಲೂಕಿನ ಅರೇಹಳ್ಳಿಯ ಹಿರಾ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಕುರಿತು ಮಾತನಾಡಿದ ಅವರು, ಚಿಕ್ಕ ಮಕ್ಕಳಿಗೆ ಮಣ್ಣಿನ ಮಾದರಿ ತಯಾರಿಕೆ, ಕಸದಿಂದ ರಸ, ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆ,ನೈತಿಕ ಮೌಲ್ಯ, ನೈಸರ್ಗಿಕ ವಿಕೋಪಗಳು, ಮಾನವನ ಅಂಗವ್ಯೂಹ ಸೇರಿದಂತೆ ವಿವಿಧ ವಿಭಾಗಗಳಿಂದ ಹಲವಾರು ವಿದ್ಯಾರ್ಥಿಗಳು ವೈವಿಧ್ಯಮಯ ಮಾದರಿಗಳನ್ನು ತಯಾರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪಠ್ಯದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಅವರಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸಾಧ್ಯವಾಗುತ್ತದೆ. ಪೋಷಕರು ಹಾಗೂ ಶಿಕ್ಷಕರ ನೆರವಿನಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಹೇಳಿದರು.

ಈ ವೇಳೆ ಶಾಲಾ ವ್ಯವಸ್ಥಾಪಕ ಜುಬೇರ್ ಅಹ್ಮದ್, ಅಧ್ಯಕ್ಷ ಹಿಜಾರ್ ಅಸರ್ ಉಮ್ರಿ, ಕಾರ್ಯದರ್ಶಿ ಮುಜೀಬ್ ಉರ್ ರೆಹಮಾನ್, ಜಂಟಿ ಕಾರ್ಯದರ್ಶಿ ತಬ್ರೇಜ್ ಹುಸೇನ್, ಮುಖ್ಯ ಶಿಕ್ಷಕಿ ತಬಸ್ಸುಮ್ ಬಾನು,ಶಿಕ್ಷಕಿಯರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *