
ಸಕಲೇಶಪುರ :- ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘವು ವಾರ್ಷಿಕ ಮಹಾಸಭೆಯನ್ನು ನಡೆಸುವ ನಿಟ್ಟಿನಲ್ಲಿ ಪೂರ್ವಭಾವಿ ಸಿದ್ಧತೆಗಳಿಗಾಗಿ ಚರ್ಚಿಸಲು ಕೆ ಎನ್ ಸುಬ್ರಹ್ಮಣ್ಯ ಅವರ ಅಧ್ಯಕ್ಷತೆಯಲ್ಲಿ ಹೆಚ್. ಡಿ. ಪಿ. ಎ ಸಭಾಂಗಣದಲ್ಲಿ ಮಂಗಳವಾರದಂದು ವಿಶೇಷ ಸಭೆಯನ್ನು ನೆಡೆಸಲಾಯಿತು.
ಸಭೆಯಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘವು ವಾರ್ಷಿಕ ಮಹಾಸಭೆಯನ್ನು ಜನವರಿ 6ನೇ ತಾರೀಕು ನೆಡೆಸಲು ತೀರ್ಮಾನಿಸಲಾಯಿತು.
ಖ್ಯಾತ ಹೃದ್ರೋಗ ತಜ್ಞಾರಾದ ಡಾ. ಸಿ.ಎನ್.ಮಂಜುನಾಥ್ ಅವರನ್ನು ಮುಖ್ಯ ಅತಿಥಿಯಾಗಿ ಕರೆಯುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ಲಾಂಟರ್ ಸಂಘದ ಅಧ್ಯಕ್ಷರದ ಕೆ.ಏನ್ ಸುಬ್ರಮಣ್ಯ. ಉಪಾಧ್ಯಕ್ಷರಾದ ಎ.ಎಸ್ ಪರಮೇಶ್, ಕಾರ್ಯದರ್ಶಿ ಎಂ ಬಿ ರಾಜೀವ್, ಖಜಾಂಚಿ ಎಂ.ಎಸ್ ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಮೀರ್ ಆಲಿ ರಜ್ವೀನ್ , ಸಂಘಟನಾ ಕಾರ್ಯದರ್ಶಿ ಕೆ.ಪಿ ಕೃಷ್ಣೆಗೌಡಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದರು .
