
ಹಾಸನ: ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತ ಇಲಾಖೆ ಬೆಂಗಳೂರು,ಉಪನಿರ್ದೇಶಕರ ಕಛೇರಿ ಹಾಗೂ ಶಿಕ್ಷಣ ಇಲಾಖೆ ಶಿವಮೊಗ್ಗ ಇದರ ವತಿಯಿಂದ ಮಂಗಳವಾರ ಶಿವಮೊಗ್ಗ ನೆಹರು ಒಳಕ್ರೀಡಾಂಗಣದಲ್ಲಿ ನಡೆದ ಕರಾಟೆ ( ಬಾಕ್ಸಿಂಗ್ ) ಪಂದ್ಯಾವಳಿಯಲ್ಲಿ ಹಾಸನದ ಯುನೈಟೆಡ್ ಅಕಾಡೆಮಿ ಶಾಲೆಯ ತರಗತಿ ವಿದ್ಯಾರ್ಥಿ ವೈಚಾರಿಕ ಪತ್ರಿಕೆ ಸಂಪಾದಕ ವೆಂಕಟೇಶ್ ಬ್ಯಾಕರವಳ್ಳಿ ಪುತ್ರ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
25 ಕೆ.ಜಿ ವಿಭಾಗದಲ್ಲಿ ಸತತ ಒಂಭತ್ತು ಸುತ್ತುಗಳಲ್ಲಿ ಜಯಶೀಲರಾಗಿ ದ್ವೀತಿಯ ಸ್ಥಾನ ಲಭಿಸಿದ್ದು ಬೆಳ್ಳಿಯ ಪದಕ ಪಡೆದಿದ್ದಾರೆ..
ಇವರಿಗೆ ಮಹರಾಜ ಪಾರ್ಕಿನ ಅಮೆಚೂರ್ ಬಾಡಿಬಿಲ್ಡರ್ ಸಂಸ್ಥೆಯಲ್ಲಿ ಹಿರಿಯ ತರಬೇತುದಾರ ಮಹಾದೇವ್ ಅವರು ತರಬೇತಿ ನೀಡುತ್ತಿದ್ದಾರೆ.
ಆರ್ಯನ್ ಗೆಲುವಿಗೆ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ತರಬೇತುದಾರರು ಸೇರಿದಂತೆ ಕ್ರೀಡಾ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷವಾಗಿ ತರಬೇತುದಾರ ಆರೀಫ್ ಅವರು ಅಭಿನಂದನೆ ತಿಳಿಸಿದ್ದಾರೆ.
ಆರೀಫ್ ಅವರ ಪ್ರೋತ್ಸಾಹ ಹಾಗೂ ಸಹಕಾರಕ್ಕೆ ಆರ್ಯನ್ ಪೋಷಕರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.


