*ರಾಗಿ ಮತ್ತು ಮೆಕ್ಕೆಜೋಳ ತಳಿಗಳ ಕುರಿತು ಮಾಹಿತಿ*

ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ರಾಗಿ ಮತ್ತು ಜೋಳದ ತಳಿಗಳ* ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ಮಾಹಿತಿ ಸಂಗ್ರಹಕ್ಕೆ ಬಂದಾಗ ಗಮನಿಸಿದ ಹಾಗೆ ಗ್ರಾಮದ ರೈತರು ಕೆಲವು ಆಯ್ದ ರಾಗಿ(GPU -28) ಮತ್ತು ಮುಸುಕಿನ ಜೋಳದ(Pioneer) ತಳಿಗಳನ್ನು ಉಪಯೋಗಿಸುತ್ತಾರೆ ಎಂದು ತಿಳಿದು ಬಂದಿತ್ತು.ಹಾಗಾಗಿ ಹೊಸ ಹೊಸ ತಳಿಗಳನ್ನು ಪರಿಚಯಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿ ಗಳಾಗಿ ಆಗಮಿಸಿದ ಡಾ|| ಶಶಿಧರ ಕೆ. ಎಸ್ ಸಹಾಯಕ ಪ್ರಾಧ್ಯಾಪಕರು ಅನುವಂಶಿಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ ಇವರು ಆಗಮಿಸಿ ಈ ಕೆಳಕಂಡಂತೆ ಮಾಹಿತಿ ನೀಡಿದರು.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಬಿಡುಗಡೆ ಮಾಡಿರುವ ಕೆಲವು ರಾಗಿಯ ತಳಿಗಳೆಂದರೆ: ಧೀರ್ಘವಧಿ(120-130ದಿನಗಳು) ತಳಿಗಳಾದ ಎಮ್. ಆರ್ 1(ಮುಂಚಿತವಾಗಿ ಬಿತ್ತನೆ ಮಾಡಲು ಸೂಕ್ತವಾಗಿದೆ),

ಎಮ್. ಆರ್ 6(ಮುಂಗಾರಿನಲ್ಲಿ ಬೆಳೆಯಲು ಸೂಕ್ತವಾದ ತಳಿ),

ಎಲ್ 5, ಇಂಡಾಫ್ 8 ಮಾಧ್ಯಮ ಅವಧಿ(106-120ದಿನಗಳು) ತಳಿಗಳಾದ ಕೆ. ಎಮ್. ಆರ್ 301(ಅಗಲ ಮತ್ತು ದಪ್ಪದಾದ ತೆನೆ), GPU 28(ಬೆಂಕಿ ರೋಗ ನಿರೋಧಕ ಶಕ್ತಿ),GPU 66,ಎಚ್. ಆರ್ 911(ಎತ್ತರವಾದ ತಳಿ), ಎಮ್. ಎಲ್ 365(ಮಾಧ್ಯಮ ಗಾತ್ರದ ತೆನೆ), ಇಂಡಾಫ್ 5(ಬೇಸಿಗೆಗೆ ಸೂಕ್ತವಾಗಿದೆ).

ಅಲ್ಪಾವಧಿ(ತಡವಾದ ಮುಂಗಾರು 95-105 ದಿನಗಳು) ತಳಿಗಳಾದ ಜಿ ಪಿ. ಯು 45,ಜಿ. ಪಿ. ಯು 48,ಜಿ. ಪಿ. ಯು26,ಇಂಡಾಫ್ 9,ಕೆ. ಎಮ್. ಆರ್ 204,ಕೆ. ಎಮ್. ಆರ್ 340,ಕೆ. ಎಮ್. ಆರ್-630.

ಕೃಷಿ ಮಹಾವಿದ್ಯಾಲಯ ಹಾಸನ ಕಾಲೇಜಿನ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ(ATIC) ದಲ್ಲಿ ದೊರಕುವ ಕೆಲವು ರಾಗಿಯ ತಳಿಗಳಾದ ಎಮ್. ಆರ್-60, ಕೆ. ಎಮ್. ಆರ್-304 ಹಾಗೂ ಎಮ್. ಎಲ್-365.ಮುಸುಕಿನ ಜೋಳದ ತಳಿಗಳಾದ ಎಮ್. ಎ.ಎಚ್-14-5, ಹೇಮಾ(ಎನ್. ಎ. ಎಚ್ 1137), ನಿತ್ಯಶ್ರೀ(ಎನ್. ಎ. ಎಚ್ 2049), ಎಮ್. ಎ ಎಚ್-14-138, ಎಮ್ ಎ. ಎಚ್-19-2.ಈ ಎಲ್ಲಾ ತಳಿಗಳು ಕೇಲವು ವಿಶಿಷ್ಟ ಗುಣಗಳು ಹೊಂದಿದ್ದು, ಇದರಿಂದ ಗುಣಮಟ್ಟದ ಇಳುವರಿಯನ್ನು ಪಡೆಯಬಹುದಾಗಿದೆ.

ಗ್ರಾಮದ ರೈತರಾದ ಎಮ್. ದೇವರಾಜು, ಹೊನ್ನೇಗೌಡ, ಪುಟ್ಟಸ್ವಾಮಿ ಗೌಡ, ಶಿವನಂಜೇಗೌಡ, ಸ್ಪೂರ್ತಿ, ಮಧು ಮುಂತಾದವರು ಪಾಲ್ಗೊಂಡಿದ್ದರು.

ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ಸಂಯೋಜಕರಾದ ಡಾ|| ಶಂಕರ ಎಮ್. ಎಚ್ ರವರನ್ನು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬಹುದು (6362970923).

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *