
ಹಾಸನ: ಇಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಂತರ ಸಮಾಜದ ಅಭಿವೃದ್ದಿಗೆ ಸಹಕಾರಿಯಾಗಬೇಕು ಎಂದು ಹಾಸನ ಎಂಟಿಇಎಸ್ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ಸಲಹೆ ನೀಡಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಹಾರನಹಳ್ಳಿ ರಾಮಸ್ವಾಮಿ ಸಭಾಂಗಣದಲ್ಲಿ ಕಾಲೇಜಿನ ೧೩ನೇ ವರ್ಷದ ಇಂಜಿನಿಯರಿಂಗ್ ಪದವಿ ಪಡೆದ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷವು ಸಾವಿರಾರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ.
ಇವರ ವೃತ್ತಿ ಜೀವನ ಉತ್ತಮವಾಗಿ ರೂಪುಗೊಳ್ಳಲು ತಮ್ಮ ವೃತ್ತಿ ಜೀವನದಲ್ಲಿ ಸನ್ಮಾರ್ಗ, ಉತ್ತಮ ಸೇವೆ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದಾಗ ಸಮಾಜದ ಅಭಿವೃದ್ದಿಗೆ ಸಹಕಾರಿಯಾಗುವುದು ಎಂದರು. ನಮ್ಮ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉತ್ತಮ್ಮ ಶಿಕ್ಷಣ ನೀಡುವಲ್ಲಿ ನಾವು ಸಾಕಷ್ಹು ಪ್ರಯತ್ನ ನೀಡಿದ್ದೆವೆ, ಹಾಗೂ ವಿದ್ಯಾರ್ಥಿಗಳಿಗೆ ಹಲವು ರೀತಿಯ ಅನುಕೂಲಗಳನ್ನು ಒದಗಿಸಲಾಗಿದೆ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಎಲ್ಲಾ ರೀತಿಯ ಸೌಲಭ್ಯಗಳ ಪ್ರಯೋಜನ ಪಡೆಯಬೇಕೆಂದರು. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಮಾನವೀಯ ಮೌಲ್ಯಗಳ ಅರಿವಿನ ಬಗ್ಗೆ ತಿಳಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಯಾಮ್‌ಸಂಗ್ ರಿಸರ್ಚ್‌ನ ನಿರ್ದೇಶಕರಾದ ವಿರೇಂದ್ರ ಶೆಟ್ಟಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ನಂತರ ಮಾತನಾಡಿದ ಅವರು, ಇಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಸ್ವಶಕ್ತಿ ಮೇಲೆ ಏನಾದರೂ ಅಭಿವೃದ್ದಿ ಕೆಲಸ ಹಾಗೂ ಕಂಪನಿಯ ಸ್ಥಾಪನೆ ನಿರ್ವಹಣೆ ಮಾಡುವ ಮೂಲಕ ಇತರರಿಗೆ ಉದ್ಯೋಗ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಇದೆ ವೇಳೆ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ೨೦೨೨-೨೩ನೇ ಸಾಲಿನ ಇಂಜಿನಿಯರಿಂಗ್ ಪದವಿ ಪಡೆದ ೯೧೪ ವಿದ್ಯಾರ್ಥಿಗಳಿಗೆ ಹಾಗೂ ಎಂಟೆಕ್ ಪದವಿ ಪಡೆದ ೧೫ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಇದರಲ್ಲಿ ೯ ಜನ ವಿದ್ಯಾರ್ಥಿಗಳು ಗೋಲ್ಡ್ ಮೆಡಲ್ ಪಡೆದಿದ್ದಾರೆ. ಹಾಗೂ ೯ ವಿಭಾಗದಿಂದ ೯ ವಿದ್ಯಾರ್ಥಿಗಳು ಟಾಪರ್ ಪಡೆದಿದ್ದಾರೆ. ಎಂಟೆಕ್‌ನಲ್ಲಿ ಒಬ್ಬ ವಿದ್ಯಾರ್ಥಿ ಗೋಲ್ಡ್ ಮೆಡಲ್ ಪಡೆದಿದ್ದಾರೆ. ಹಾಗೂ ಸ್ಪೋರ್ಟ್ಸ್ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ಒಬ್ಬ ವಿದ್ಯಾರ್ಥಿಗೆ ನೀಡಲಾಯಿತು.
ಹಾಗೂ ಕಾಲೇಜಿನಲ್ಲಿ ಅತ್ಯುತ್ತಮ ವಿದ್ಯಾರ್ಥಿ ಎಂದು ಒಬ್ಬ ವಿದ್ಯಾರ್ಥಿ ಒಬ್ಬ ವಿದ್ಯಾರ್ಥಿನಿಗೆ ಎಂಟಿಇಎಸ್ ಬೆಸ್ಟ್ ಔಟ್ ಗೋಯಿಂಗ್ ಸ್ಟೊಡೆಂಟ್ ಪ್ರಶಸ್ತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಉಪಾಧ್ಯಾಕ್ಷರಾದ ಸಿ.ಎಂ. ತಿಮ್ಮಪ್ಪ ಗೌಡ ಪುಟ್ಟರಾಜು, ಎಂಟಿಇಎಸ್ ಉಪಾಧ್ಯಾಕ್ಷರಾದ ಜಿ.ಎ. ಮುದ್ದೇಗೌಡ, ಬಿ.ಆರ್. ಗುರುದೇವ್ ಹಾಗೂ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡರು, ಖಜಾಂಚಿ ಶ್ರೀಧರ್, ಸಹ ಕಾರ್ಯದರ್ಶಿ ಡಿ.ಸಿ. ಅರವಿಂದ್, ನಿರ್ದೇಶಕರುಗಳಾದ ಮ್ಯಾನೇಜರ್ ಶಿವರಾಂ ಕೃಷ್ಣಯ್ಯ, ಕೆ.ಎಂ. ಶಿವಣ್ಣ, ಹೆಚ್.ಎ. ವೆಂಕಟರಾಮು, ಜಿ.ಟಿ. ಕುಮಾರ್, ಕೆ. ಎನ್. ಗುರಪ್ಪ, ಹೆಚ್.ಡಿ. ಪಾಶ್ವನಾಥ, ಬಿ.ವಿ. ಶ್ರೀನಿವಾಸ್, ಹೆಚ್.ಕೆ. ಗುರುಮೂರ್ತಿ, ಡಿ.ಬಿ. ಹೇಮಂತ್ ಕುಮಾರ್, ಜಿ.ಆರ್. ಶ್ರೀನಿವಾಸ್ ಸಿ.ಆರ್. ಜಗದೀಶ್, ಬಿ.ಎನ್. ಸುರೇಶ್, ಬೂವನಹಳ್ಳಿ ಶ್ರೀನಿವಾಸ್, ಚಂದ್ರಶೇಖರ್ ಐಯ್ಯರ್, ಜಿ.ಕೆ. ಶಂಕರ್, ಮತ್ತು ವೈ.ವಿ. ವೆಂಕಟಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ: ಎಸ್ ಪ್ರದೀಪ್ ರವರು ನೆರೆವೇರಿಸಿದರು.
ವೇದಿಕೆಯಲ್ಲಿ ಕಾಲೇಜಿನ ಬಿಓಜಿ ಮೆಂಬರ್ಸ್ ಡಾ: ವೈ ಅರುಣ್ ಕುಮಾರ್, ಕೆ ಮುರಳಿ ಕಾಲೇಜಿನ ಡೀನ್‌ರವರು ವಿಭಾಗದ ಮುಖ್ಯಸ್ಥರು ಕಾಲೇಜಿನ ಸಹಾಯಕ ಆಡಳಿತಾಧಿಕಾರಿ ಪಾರ್ವತಮ್ಮ ಉಪಸ್ಥಿತರಿದ್ದರು.
ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜಿನ ಪ್ರಾಧ್ಯಾಪಕರು ನೌಕರರು ಭಾಗವಹಿಸಿದ್ದರು.






