ಚನ್ನರಾಯಪಟ್ಟಣ : ಟೈಮ್ಸ್ ಪದವಿ ಪೂರ್ವ ಕಾಲೇಜು ವತಿಯಿಂದ ಸಂಸ್ಥೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸಾಂಪ್ರದಾಯಿಕ ದಿನ ಹಾಗೂ ಆಹಾರಮೇಳವನ್ನು ಆಯೋಜನೆ ಮಾಡಲಾಯಿತು,

ಈ ಕಾರ್ಯಕ್ರಮವನ್ನು ಶ್ರೀಮತಿ ಕೋಮಲ ಶಿವಸ್ವಾಮಿಯವರು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ವ್ಯವಹಾರಿಕ ಕ್ಷೇತ್ರಗಳ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳುವುದು ಪ್ರಮುಖವಾದ ವಿಚಾರವಾಗಿದೆ, ಪ್ರತಿ ಒಬ್ಬ ವಿದ್ಯಾರ್ಥಿಗಳು 10 ಬಾರಿ ಓದುವುದಕ್ಕಿಂತ ಒಂದು ಬಾರಿ ಓದಿ ಒಂದು ಬಾರಿ ಬರೆಯುವುದರಿಂದ ಹೆಚ್ಚಿನ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು ಎಂದರು.

ಎಲ್ಲಾ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಜೊತೆಗೆ ಸಂಸ್ಕಾರವನ್ನು ಕಲಿಯಲೇಬೇಕು, ತಮ್ಮ ತಂದೆ ತಾಯಿಗಳ ಕಷ್ಟ ಸುಖಗಳನ್ನು ಅರಿತುಕೊಂಡು ಉತ್ತಮವಾದ ಶಿಕ್ಷಣವನ್ನು ಪಡೆದು ತಂದೆ ತಾಯಿಗಳಿಗೆ ಹೆಸರು ಬರುವಂತೆ ನಡೆದುಕೊಳ್ಳಬೇಕು, ಗುರುಗಳ ಸಲಹೆ ಸಹಕಾರ ಪಡೆದು ಅತಿಹೆಚ್ಚಿನ ಅಂಕಗಳನ್ನು ಪಡೆದು ತಾವು ವಿದ್ಯಾಭ್ಯಾಸ ಮಾಡಿದ ಸಂಸ್ಥೆಗೆ ಹಾಗೂ ಜನ್ಮ ನೀಡಿದ ಪೋಷಕರಿಗೆ ಮತ್ತು ತಮ್ಮ ತಾಲೂಕಿಗೆ ಕೀರ್ತಿ ತರುವ ಹಾಗೆ ಉನ್ನತ ಶಿಕ್ಷಣವನ್ನು ಅರ್ಥಪೂರ್ಣವಾಗಿ ಪೂರ್ಣಗೊಳಿಸಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಟೈಮ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಬಿ ಸುರೇಂದ್ರ ಕುಮಾರ್, ಟೈಮ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ ಕೆ ಗಂಗಾಧರ್, ಪುರಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಪುರಸಭಾ ಸದಸ್ಯರಾದ ಸಿ ಎನ್ ಶಶಿಧರ್, ಸಂಸ್ಥೆಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *