
ಹಾಸನ: ನಗರದ ತಣ್ಣೀರುಹಳ್ಳ, ಹಾಲುವಾಗಿಲು ರಸ್ತೆ ಬಳಿ ಇರುವ ಹೊಯ್ಸಳ ಪಬ್ಲಿಕ್ ಶಾಲೆ ಕಾರ್ಯದರ್ಶಿ ಶೋಭಾ ನಾಗರಾಜ್ ನಿರ್ದೇಶನದಲ್ಲಿ ಪುಟಾಣಿ ಮಕ್ಕಳೆ ತಯಾರಿಸಿದ ವಿವಿಧ ರೀತಿಯ ವಸ್ತು ಪ್ರದರ್ಶನವು ಪೋಷಕರ ಮತ್ತು ಪ್ರೇಕ್ಷಕರ ಗಮನಸೆಳೆಯಿತು.
ಹೊಯ್ಸಳ ಶಾಲೆಯ ಮಕ್ಕಳು ತಮ್ಮ ಕೈಚಳಕದಲ್ಲಿ ಮಾಡಿಕೊಂಡು ಬಂದ ಸೋಲರ್ ನಿಂದ ಪ್ರಯೋಜನಾ, ಆರೋಗ್ಯದ ಬಗ್ಗೆ, ಪರಿಸರ ರಕ್ಷಣೆ, ಮನೆಯ ಸುತ್ತಾ ಗಿಡ ಬೆಳೆಸುವುದು, ವಿದ್ಯುತ್ ಶೇಖರಣೆ, ನೀರಿನ ಸಂರಕ್ಷಣೆ, ಉಡಾವಣೆ, ಪ್ಲಾಸ್ಟಿಕ್ ಮುಕ್ತ ಪ್ರದೇಶ, ಕಸ ವಿಲೇವಾರಿ ಸೇರಿದಂತೆ ಪ್ರತಿ ಮಕ್ಕಳು ತಮ್ಮದೆಯಾದ ಜ್ಞಾನದಲ್ಲಿ ಮಾಡಲ್ ಗಳ ಮಾಡಿಕೊಂಡು ಬಂದು ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಇಟ್ಟಿದ್ದರು.
ಉತ್ತಮ ಮಾಡಲ್ ಗೆ ಇದೆ ವೇಳೆ ಬಹುಮಾನ ನೀಡಿ ಪ್ರೋತ್ಸಹಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಚಾರವಾದಿ ಡಾ. ಸತ್ಯನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಮಕ್ಕಳು ಮಾಡಿದ ವಿಜ್ಞಾನ ವಸ್ತು ಪ್ರದರ್ಶನದ ಮಾಡಲ್ ಗಳನ್ನು ವೀಕ್ಷಣೆ ಮಾಡಿದಲ್ಲದೇ ಮಕ್ಕಳಿಂದಲೇ ತಮ್ಮ ತಮ್ಮ ಮಾಡಲ್ ಬಗ್ಗೆ ಹೆಚ್ಚಿನ ವಿಚಾರ ಪಡೆದುಕೊಂಡರು.
ನಂತರ ಉದ್ದೇಶಿಸಿ ಮಾತನಾಡಿದ ಸತ್ಯನ್ ಅವರು, ಪ್ರಸ್ತುತದಲ್ಲಿ ವಿಜ್ಞಾನ ಎಂಬುದು ಅತೀ ಎತ್ತರಕ್ಕೆ ಬೆಳೆದಿದೆ. ಪ್ರತಿ ಹಂತದಲ್ಲೂ ವಿಜ್ಞಾನ ತನ್ನದೆಯಾದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದರು.
ಶಿಕ್ಷಣದ ಜೊತೆ ಜೊತೆಯಲ್ಲಿ ಇಂತಹ ವಸ್ತು ಪದರ್ಶನವು ಅತ್ಯಂತ ಅವಶ್ಯಕವಾಗಿದೆ. ವಿಜ್ಞಾನದಲ್ಲೆ ಅನೇಕರು ಸಾಧನೆ ಮಾಡಿ ಉನ್ನತ ಮಟ್ಟದಲ್ಲಿ ಹೆಸರು ಮಾಡಿರುವುದಾಗಿ ಅಬ್ದೂಲ್ ಕಲಾಂ ಹಾಗೂ ಇತರರನ್ನು ಉದಾಹರಣೆಯಾಗಿ ತಿಳಿಸಿದರು.
ಮಕ್ಕಳಿಂದಲೇ ಇಂತಹ ವಸ್ತುಪ್ರದರ್ಶನವನ್ನು ಏರ್ಪಡಿಸುವುದು ಮುಂದಿನ ಶಿಕ್ಷಣಕ್ಕೆ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹೊಯ್ಸಳ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಎಂ.ಜೆ. ನವೀನ್ ಕುಮಾರ್, ವಿಚಾರವಾದಿ ಹೆಚ್.ಕೆ. ರಾಹುಲ್ ಇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ರಾಧಿಕಾ ಮತ್ತು ತಂಡದವರಿಂದ ಪ್ರಾರ್ಥಿಸಲಾಯಿತು.
ಅತೀಭಾ ಅವರು ಸ್ವಾಗತಿಸಿದರು.
ವಿದ್ಯಾರ್ಥಿನಿ ಸಾನಿಕಾ ವಂಧಿಸಿದರು.






