
ಹಾಸನ : ಈ ವರ್ಷದ ಶ್ರೀ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಬಹಳ ಅಚ್ಚುಕಟ್ಟಾಗಿ ನಡೆದಿದ್ದು, ಯಶಸ್ವಿಯಾಗಿ ನಡೆಸಲು ಕಾರಣಕರ್ತರಾದ ಎಲ್ಲಾರಿಗೂ ಹೃದಯ ತುಂಬಿದ ಕೃತಜ್ಞತೆಯನ್ನು ಸಲ್ಲಿಸುವುದಾಗಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮದವರು ಹಾಸನಂಬೆ ದೇವಿಯ ಪವಾಡ, ಮಹತ್ವದ ಸಂಗತಿಯನ್ನು ಜಿಲ್ಲೆ ಮತ್ತು ರಾಜ್ಯ ಹಾಗೂ ಇಡೀ ದೇಶಕ್ಕೆ ತಿಳಿಸುವುದನ್ನು ಮಾಡಿದಕ್ಕೆ ಸುಮಾರು ೧೪ ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದಾರೆ.
ಯಾವ ವರ್ಷವೂ ಕೂಡ ಆಗದಂತಹ ಹಣ ಸಂಗ್ರಹ ಈ ವರ್ಷ ಇತಿಹಾಸ ಸೃಷ್ಠಿಸಿದೆ. ಟಿಕೆಟ್ ವ್ಯಾಪಾರ, ಲಾಡು ವ್ಯಾಪಾರ ಹಾಗೂ ಭಕ್ತರಿಂದ ಬಂದ ಕಾಣಿಕೆ ಸೇರಿ ಒಟ್ಟು ೮ ಕೋಟಿ ೩೬ ಲಕ್ಷಕ್ಕೂ ಹೆಚ್ಚಿನ ಹಣ ಸಂಗ್ರಹವಾಗಿದೆ.
ಇದನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಈ ವರ್ಷ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದ್ದು, ಅತಿ ಹೆಚ್ಚು ಭಕ್ತರು ಆಗಮಿಸಿ ತಾಯಿಯ ದರ್ಶನವನ್ನು ಪಡೆದಿದ್ದಾರೆ.
ಸಣ್ಣಪುಟ್ಟ ಲೋಪ ದೋಷಗಳು ಇದು, ಅವುಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ಎಲ್ಲರ ಸಲಹೆ ಸಹಕಾರವನ್ನು ಪಡೆಯಲಾಗುವುದು ಎಂದು ಹೇಳಿದರು
ಈ ಬಾರಿ ಅದ್ಭುತವಾಗಿ ನಗರದಾದ್ಯಂತ ದೀಪಾಲಂಕಾರ ದೇವಸ್ಥಾನದ ಅಲಂಕಾರ ಹಾಗೂ ಭಕ್ತರಿಗೆ ಅನುಕೂಲವಾಗುವ ಉದ್ದೇಶದಿಂದ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.
ಆಡಳಿತಾಧಿಕಾರಿ ಎಸಿ ಮಾರುತಿ ಅವರು ಶ್ರಮಿಸಿದ್ದಾರೆ. ಯಾವತ್ತು ಕೂಡ ಜಿಲ್ಲಾಡಳಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ನಗರಸಭೆ, ಮಾಧ್ಯಮದವರು ಹಾಗೂ ಸಂಘ ಸಂಸ್ಥೆಗೆ ಸಾರ್ವಜನಿಕರ ಸಹಕಾರದಿಂದ ಈ ಜಾತ್ರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಲಾಗಿದೆ.
ನಾನು ಮೊದಲ ಬಾರಿ ಶಾಸಕನಾಗಿ ಈ ಬಾರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶೋಭಾ ಕರದ್ಮಾಂಜೆ ಸೇರಿದಂತೆ ಹಲವು ಸಚಿವರು ಶಾಸಕರು ಗಣ್ಯರು ಮತ್ತು ನ್ಯಾಯಾಧೀಶರು ಆಗಮಿಸಿ ತಾಯಿಯ ದರ್ಶನ ಪಡೆದಿದ್ದಾರೆ ಎಂದು ಹೇಳಿದರು.
ಹಾಸನಾಂಬೆ ಬಾಗಿಲು ತೆರೆದ ವೇಳೆ ಹಾಸನ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿದಂತೆ ಆಡಳಿತದ ಎಲ್ಲಾರು ಹಗಲಿರಳು ಎನ್ನದೆ ಶ್ರಮಿಸಿ ಈ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲು ಪ್ರಮುಖ ಕಾರಣಕರ್ತರಾಗಿದ್ದು, ಅವರಿಗೆ ತುಂಬು ಹೃದಯದ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ಸಲ್ಲಿಸಲಾಗುವುದು.
ನಮ್ಮ ಗಮನಕ್ಕೆ ಬಾರದೆ ಚಿಕ್ಕಪುಟ್ಟ ಲೋಪ ದೋಷಗಳಿದ್ದರೂ ಮುಂದಿನ ದಿನಗಳಲ್ಲಿ ಎಲ್ಲಾವನ್ನು ಸರಿದೂಗಿಸಿಕೊಂಡು ಯಶಸ್ವಿಯಾಗಿ ಹೋಗುವ ಕೆಲಸ ಮಾಡಲಾಗುವುದು. ಜೊತೆಗೆ ನಗರಸಭೆಯ ಪೌರಕಾರ್ಮಿಕರು ೧೫ ದಿನಗಳ ಕಾಲ ನಗರವನ್ನು ಮತ್ತು ಹಾಸನಾಂಬ ಆವರಣವನ್ನು ಸ್ವಚ್ಛವಾಗಿರಲು ಶ್ರಮಿಸಿದ್ದಾರೆ ಎಂದು ಇದೆ ವೇಳೆ ಅವರ ಕಾರ್ಯವನ್ನು ಕೂಡ ಇದೇ ಸಂದರ್ಭದಲ್ಲಿ ಸ್ಮರಿಸಲಾಗುವುದು.
ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯಿದ್ದು, ಭಕ್ತರಿಗೆ ಯಾವ ಸಮಸ್ಯೆ ಆಗದಂತೆ ನಿಗಾವಹಿಸಲಾಗುವುದು ಎಂದರು.
ದೇವಾಲಯದ ಖರ್ಚುವೆಚ್ಚದ ಲೆಕ್ಕವನ್ನು ಕೊಡಲಾಗುವುದು. ಇನ್ನು ದರ್ಶನದ ಮೊದಲ ದಿನದಲ್ಲಿ ಹೋಮ ಮತ್ತು ಕಳಸ ಪ್ರತಿಷ್ಠಾಪನೆ ಮಾಡುವ ವೇಳೆ ಶಾಸಕರಿಗೆ ಕರೆದಿಲ್ಲ ಎಂದು ಪ್ರಶ್ನೆ ಮಾಡಲಾಗಿತ್ತು. ಶಾಸಕನಾಗಿ ಈ ದೇವಾಲಯದ ಅಧ್ಯಕ್ಷತೆಯನ್ನು ನಾನೆವಹಿಸಿರುತ್ತೇನೆ.
ಚಿಕ್ಕಪುಟ್ಟ ವ್ಯತ್ಯಾಸ ಆಗಬಾರದು ಆದರೇ ಆಗಿದೆ. ಜಿಲ್ಲಾಧಿಕಾರಿಗಳು ಕೂಡ ಸ್ಪಂದಿಸಿದ್ದು, ತಪ್ಪಿನ ಬಗ್ಗೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾವನ್ನು ಸರಿದೂಗಿಸಿಕೊಂಡು ಹೋಗುವ ಬಗ್ಗೆ ಹೇಳಲಾಗಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
