ಉತ್ತಮ ಜೀವನಕ್ಕೆ ಕಾನೂನಿನ ಅರಿವು ಅಗತ್ಯಟಿ.ಎನ್. ಇನವಳ್ಳಿ

ಹಾಸನ: ಕುಟುಂಬದಲ್ಲಿ ಆರ್ಥಿಕವಾಗಿ ಸದೃಢರಾಗಬೇಕಾದರೇ ಪ್ರಸ್ತುತದಲ್ಲಿ ಗಂಡು ಹೆಣ್ಣು ಇಬ್ಬರೂ ದುಡಿಯಬೇಕು. ಈವೇಳೆ ಮಹಿಳೆಗೆ ದೌರ್ಜನ್ಯ ತಡೆಗಟ್ಟಲು ಮತ್ತು ಉತ್ತಮ ಜೀವನ ನಡೆಸಲು ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಎನ್. ಇನವಳ್ಳಿ ಅಭಿಪ್ರಾಯಪಟ್ಟರು.

ನಗರದ ಹೊರವಲಯ ಕೈಗಾರಿಕ ಪ್ರದೇಶದಲ್ಲಿರುವ ಗೋಕುಲದಾಸ್ ಎಕ್ಸ್ ಪೋರ್ಟ್ ಯೂನಿಟ್ ಒಂದರ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯನಿರತ ಸ್ಥಳಗಳಲ್ಲಿ ಮಹಿಳೆಯರಿಗೆ ಆಗುವ ಲೈಂಗಿಕ ದೌರ್ಜನ್ಯ ತಡೆಯುವ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಸಮಾಜದಲ್ಲಿ ಗಂಡ ಮತ್ತು ಹೆಣ್ಣು ಒಂದೆ ತರಹ. ಅದರಲ್ಲಿ ಹೆಣ್ಣು ಎಂದರೇ ಅಮುಲ್ಯವಾದುದ್ದು. ಜನರೇಷನ್ ಮುಂದೆ ಹೋಗಬೇಕಾದರೇ ಹೆಣ್ಣಿನ ಪಾತ್ರ ಎಲ್ಲ ರೀತಿಯಲ್ಲೂ ಇರುತ್ತದೆ. ಆರ್ಥಿಕವಾಗಿ ಒಂದು ಕುಟುಂಬ ಸಬಲೀ ಆಗಬೇಕಾದರೇ ಗಂಡು ಹೆಣ್ಣು ಇಬ್ಬರೂ ದುಡಿಯಬೇಕು. ಕೆಲಸ ಮಾಡುವ ಕಡೆ ಹೆಣ್ಣು ಮಕ್ಕಳಿಗೆ ರಕ್ಷಣೆ ಅಗತ್ಯ. ಈ ನಿಟ್ಟಿನಲ್ಲಿ ಕಾನೂನುಗಳ ಅರಿವು ಇದ್ದರೇ ರಕ್ಷಣೆ ಮಾಡಿಕೊಳ್ಳಬಹುದಾಗಿದೆ ಎಂದರು.

ವಕೀಲರಾದ ಗಿರಿಜಾಂಬಿಕ ಮಾತನಾಡಿ, ಮಹಿಳೆಯರು ಯಾವುದೇ ಕಾರ್ಖಾನೆ ಇಲ್ಲವೇ .ಕೈಗಾರಿಕೆಗಳಲ್ಲಿ ಮಹಿಳಾ ಸುರಕ್ಷತಾ ನಿಯಮಗಳನ್ನು ಅನುಸರಿಸುವುದು ಖಡ್ಡಾಯವಾಗಿದೆ. ತಮ್ಮ ಕರ್ತವ್ಯದ ಅವಧಿಯಲ್ಲಿ ಯಾರಿಂದಲಾದರೂ ತಮ್ಮ ಮೇಲೆ ಲೈಂಗಿಕ ಅಥವಾ ಯಾವುದೇ ರೀತಿಯ ದೌರ್ಜನ್ಯ ನಡೆದರೆ ಯಾವುದೇ ಭಯ ಇಲ್ಲದೆ ಸಹಾಯವಾಣಿಗೆ ದೂರು ನೀಡಬಹುದು. ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ದಂತಹ ಸಮಸ್ಯೆಗಳು ಕಂಡು ಬಂದರೆ ಯಾವುದೇ ಭಯವಿಲ್ಲದೇ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಸಲಹೆ ನೀಡಿದರು.

ಕಾರ್ಯನಿರತ ಸ್ಥಳದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ಘಟನೆ ನಡೆದ ೯೦ ದಿನಗಳ ಒಳಗಾಗಿ ದೂರು ನೀಡುವ ಬಗ್ಗೆ ಕಾನೂನಿನಲ್ಲಿ ಮಾಹಿತಿ ಲಭ್ಯವಿದೆ. ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ದೂರು ಕೊಡುವಾಗ ಮಹಿಳೆಯರಿಗೆ ಯಾರು ತೊಂದರೆ ಮಾಡುವಂತಿಲ್ಲ ಎಂದು ಕಾರ್ಮಿಕರ ಕಾನೂನುಗಳ ಬಗ್ಗೆ ಇದೆ ವೇಳೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಗೋಕುಲದಾಸ್ ಎಕ್ಸ್ ಪೋರ್ಟ್ ಯೂನಿಟ್-೧ರ ಡೆಪ್ಯೂಟಿ ಮ್ಯಾನೇಜರ್ ದರ್ಶನ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ಅನುರುತ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *