ಸಕಲೇಶಪುರ : ತಾಲ್ಲೂಕಿನ ದೇಕ್ಲಾ ಗ್ರಾಮ ವ್ಯಾಪ್ತಿಯ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಮುಖ್ಯ ರಸ್ತೆ ಕುಸಿದಿದ್ದು ವಾಹನ ಸಂಪರ್ಕ ಕಡಿತಗೊಂಡಿದೆ

ಈ ಮಾರ್ಗವಾಗಿ ದಿಣ್ಣೆಕೆರೆ, ಕುಂಬ್ರಹಳ್ಳಿ, ಕಲ್ಲರಳ್ಳಿ, ಚಿಕತೋಟ, ಬಾರೆಮಕ್ಕಿ, ಹಳೆ ಕಲ್ಲಹಳ್ಳಿ ಮೀಸಲಮನೆ ಹೆಬ್ಬಸಾಲೆ ದೇವಸ್ಥಾನದ ರಸ್ತೆ, ಸರಿದಂತೆ ಈ ಭಾಗದಲ್ಲಿ ವಾಸವಾಗಿರುವ ಸಾವಿರಾರು ರೈತರ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಆತಂಕ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಇದೇ ಮಾರ್ಗವಾಗಿ ಹರಿಯುತಿರುವ ಎತ್ತಿನಹೊಳೆಗೆ ನಿರ್ಮಿಸಿರುವ ಸೇತುವೆ 150 ಮೀಟರ್ ದೂರದಲ್ಲಿ ಸಾಲಡನ್ ತೋಟದ ಪಕ್ಕದಲ್ಲಿ ಪೈಪ್ ಲೈನ್ ಬುಧವಾರ ಸಂಜೆ ಲೀಕ್ ಆಗಿದ್ದು ರಸ್ತೆ ಬದಿ ಸಂಪೂರ್ಣವಾಗಿ ಮಣ್ಣು ಕುಸಿದು ಪುನಃ ರಸ್ತೆ ಹಾಳಾಗುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮೇಘರಾಜ್, ದೇವರಾಜ್, ಇತರೆ ಗ್ರಾಮದ ಮುಖಂಡರುಗಳು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *