
ಹಾಸನ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಮಲಮ್ಮ ರಚಿಸಿದ ಕಥಾ ಸಂಕಲನದ ಕಾಲವೆಂಬ ಕನ್ನಡಿಯಲ್ಲಿ ಹಾಗೂ ಮನೋ ಮಂಥನ ಕೃತಿಯನ್ನು ನ್ಯಾಷನಲ್ ಪದವಿ ಪೂರ್ವ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಎಂ.ಪಿ. ಪಲ್ಲವಿ ಹಾಗೂ ಸಾಹಿತಿ ಹಂಪನಹಳ್ಳಿ ತಿಮ್ಮೇಗೌಡ ಅವರು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಎಂ.ಪಿ. ಪಲ್ಲವಿ ಅವರು, ಜೀವನದ ಅನುಭವದಲ್ಲಿ ಸಾಕಷ್ಟು ಸನನಿವೇಶಗಳು ನಮ್ಮ ಕಣ್ಣ ಮುಂದೆ ಬಂದು ಹೋಗುತ್ತದೆ. ಕೆಲವನ್ನು ಮರೆತು ಹೋದರೇ ಇನ್ನು ಕೆಲವನ್ನು ನೆನಪಿಸಿಕೊಳ್ಳುತ್ತೇವೆ. ಇನ್ನು ಕೆಲವರು ಇಂತಹ ಕೃತಿಯ ಮೂಲಕ ನಮ್ಮ ಮುಂದೆ ತರುತ್ತಾರೆ. ಇನ್ನು ಕಾಲವೆಂಬ ಕನ್ನಡಿಯಲ್ಲಿ ನೈಜ ಕಥೆಗಳನ್ನು ಆಧಾರಿಸಿದೆ. ಎಷ್ಟೆ ಸಂಸಾರದಲ್ಲಿ ತಪ್ಪು ಒಪ್ಪುಗಳು ನಡೆಯುತ್ತಿರುತ್ತದೆ. ತಪ್ಪನ್ನು ಮಾಡಿದವರು ಪಶ್ಚತಾಪ ಪಡುವುದು ಬಹಳ ಮುಖ್ಯವಾದುದ್ದು. ಅದನ್ನ ಪುಸ್ತಕದಲ್ಲಿ ಹೇಳಿರುವಂತೆ ಕೆಟ್ಟ ಚಾಳಿಗೆ ಇಳಿದ ಮೇಲೆ ಅದರಿಂದ ಹೇಗೆ ಹೊರ ಬರಬೇಕು ಎಂದು ಪರಿತಪಿಸುತ್ತಿರುವ ವ್ಯಕ್ತಿಯು ಯೋಚಿಸುವಂತೆ ಕೆಟ್ಟ ಚಾಳಿಯಿಂದ ಸುಖಪಟ್ಟವನು ನಾನೆ. ಅದರಿಂದ ಹೊರ ಬರಬರಬೇಕು ಎಂದು ಹೇಳುತ್ತಿರುವವನು ನಾನೆ ಎನ್ನುವ ಅನುಭವವು ಕೆಟ್ಟ ಛಾಳಿಯಲ್ಲಿ ಬಿದ್ದ ಪ್ರತಿಯೊಬ್ಬನು ಪಶ್ಚತಾಪದಲ್ಲಿ ಪಡೆದ ಅನುಭವ ಪಡೆದರೇ ಯಾವ ಸಂಸಾರದಲ್ಲೂ ಕೂಡ ಮುಂದಾಗುವ ಕಷ್ಟಗಳು ಕಡಿಮೆ ಆಗುತ್ತದೆ ಎಂದರು.
ಪ್ರತಿಯೊಬ್ಬರಲ್ಲೂ ಒಳ್ಳೆಯ ಮನೋಭಾವ ಬೆಳೆಸಿಕೊಂಡರೇ ಮಾತ್ರ ಅವರು ಮುಂದೆ ಹೋಗಲು ಸಾಧ್ಯ ಎಂದು ಹೇಳಿದರು.
ವಿವೇಕಾನಂದರು ಹೇಳುವಂತೆ ನಮಗೆ ನಾವೆ ದೈರ್ಯ ತಂದುಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಮತ್ತು ಮುಂದೆ ನುಗ್ಗಬೇಕು ಎನ್ನುವ ಸಕರಾತ್ಮಕ ಬೆಳವಣಿಗೆಯನ್ನು ಈ ಕಥೆಯಲ್ಲಿ ಅರ್ಥಪೂರ್ಣವಾಗಿ ತಿಳಿಸಿರುವುದು ಸಾಕಷ್ಟು ಇಷ್ಟವಾಯಿತು ಎಂದು ಕಿವಿಮಾತು ಹೇಳಿದರು.
ಬದುಕು ಜಟಕ ಬಂಡಿ ಎನ್ನುವಂತೆ ಅನಿರೀಕ್ಷಿತ ಘಟನೆಗಳು ಬರುತ್ತಲೆ ಇರುತ್ತದೆ. ಜೀವನ ಹೇಗೆ ಬರುತ್ತದೆ ಆಗೆ ಸ್ವೀಕರಿಸಿದರೇ ಮಾತ್ರ ಉಲ್ಲಾಸ ಎಂದು ಪರಿಗಣಿಸಿದಾಗ ಮಾತ್ರ ಜೀವನ ಆನಂದದಾಯಕವಾಗಿರುತ್ತದೆ ಎಂದು ಸಲಹೆ ನೀಡಿದರು.
ಒಂದೊಂದು ಕಥೆಗಳಲ್ಲೂ ನೈಜವಾದ ಘಟನೆಗಳು ಬರುತ್ತಾ ಹೋಗುತ್ತದೆ. ಪ್ರಸ್ತುತದಲ್ಲಿ ಆಡಂಬರದ ಮದುವೆಗಳು ಬರುತ್ತಿದೆ ಆದರೇ ಶಾಸ್ತ್ರೋತ್ತವಾದ ಮದುವೆ ಕಡಿಮೆ ಆಗಿ ಪೋಟೊಗೊಸ್ಕರ ಮದುವೆಯ ಶಾಸ್ತ್ರ ನಡೆಯುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು. ಒಂದು ದೇಶ ಚನ್ನಾಗಿರಬೇಕೆಂದರೇ ಕುಟುಂಬ ಚನ್ನಾಗಿರುತ್ತದೆ. ಇನ್ನು ಪೋಷಕರು ಚನ್ನಾಗಿದ್ದರೇ ಮಕ್ಕಳು ಚನ್ನಾಗಿರುತ್ತಾರೆ ಎಂದು ಹೇಳಿದರು.
ನಮ್ಮ ಜವಾಬ್ಧಾರಿ ಅರಿಯಬೇಕು. ಕುಟುಂಬ ಮತ್ತು ಸಮಾಜ ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕು. ಹೆಣ್ಷು ಮಕ್ಕಳಲ್ಲಿ ಈಗ ಯಾವುದು ಆಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಸ್ವಾರ್ಥ ಬಂದಾಗ ಎಲ್ಲಾ ತಡೆ ಆಗುತ್ತದೆ. ಸ್ವಾರ್ಥ ಬಿಟ್ಟುಹೋದ ಕೆಲಸ ಮಾಡಬೇಕು. ನಾವೇಲ್ಲಾ ವಿದ್ಯಾವಂತರಾಗಿದ್ದರೂ ಪರಿಸರ ಉಳಿಸುವ ಕೆಲಸ ಯಾರು ಮಾಡುತ್ತಿರಲಿಲ್ಲ ಎಂದು ಆತಂಕವ್ಯಕ್ತಪಡಿಸಿದಲ್ಲದೇ ನಮ್ಮ ಮನೆ, ನಮ್ಮ ಕೇರಿ, ನಮ್ಮ ಊರು ನಮ್ಮ ಸಮಾಜ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಜವಾಬ್ಧಾರಿ ಅರಿಯಬೇಕು. ಕುಟುಂಬ ಮತ್ತು ಸಮಾಜ ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕು. ಹೆಣ್ಷು ಮಕ್ಕಳಲ್ಲಿ ಈಗ ಯಾವುದು ಆಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಸ್ವಾರ್ಥ ಬಂದಾಗ ಎಲ್ಲಾ ತಡೆ ಆಗುತ್ತದೆ. ಸ್ವಾರ್ಥ ಬಿಟ್ಟುಹೋದ ಕೆಲಸ ಮಾಡಬೇಕು. ನಾವೇಲ್ಲಾ ವಿದ್ಯಾವಂತರಾಗಿದ್ದರೂ ಪರಿಸರ ಉಳಿಸುವ ಕೆಲಸ ಯಾರು ಮಾಡುತ್ತಿಲ್ಲ. ಎಲ್ಲಾವನ್ನು ಅರಿತುಕೊಂಡು ಮುನ್ನೆಡೆಯಬೇಕು ಎಂದು ಕಮಲಮ್ಮ ಅವರ ಕಾಲವೆಂಬ ಕನ್ನಡಿಯಲ್ಲಿ ಕಥಾ ಸಂಕಲನದ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಥಾ ಸಂಕಲನದ ಕಾಲವೆಂಬ ಕನ್ನಡಿಯಲ್ಲಿ ಕೃತಿ ಕುರಿತು ಸಾಹಿತಿ ಹಂಪನಹಳ್ಳಿ ತಿಮ್ಮೇಗೌಡ ಅವರು ಸವಿಸ್ತಾರವಾಗಿ ಭಾಗಗಳನ್ನು ವಿವರಿಸಿದರು. ಇನ್ನು ಮನೋಮಂಥನ ಕೃತಿ ಕುರಿತು ಸಾಹಿತಿ ಗಿರಿರಾಜ್ ಹೊನ್ನಶೆಟ್ಟಿಹಳ್ಳಿ ವಿವರಿಸಿದರು.
ಇದೆ ವೇಳೆ ಎರಡು ಕೃತಿಕಾರರಾದ ಕಮಲಮ್ಮ, ಮುಖ್ಯ ಅಥಿತಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಸಾಹಿತಿ ಎನ್.ಎಲ್. ಚನ್ನೇಗೌಡ, ವಿಶ್ರಾಂತ ಪ್ರಾಧ್ಯಾಪಕ ಡಾ. ಕೃಷ್ಣೇಗೌಡ, ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಡಾ. ಜಿ. ಚಂದ್ರಶೇಖರ್, ಎವಿಕೆ ಕಾಲೇಜು ಉಪನ್ಯಾಸಕ ಪ್ರಕಾಶ್, ಉಪನ್ಯಾಸಕ ಮಹದೇವ್, ರತ್ನಮ್ಮ, ಸಹದೇವ್ ಇತರರು ಉಪಸ್ಥಿತರಿದ್ದರು.




