ಸುಳ್ಳು ಮಾಹಿತಿ ನೀಡದಿರಿ, ಗುಣಮಟ್ಟದ ಆಹಾರ ನೀಡಿಬೀದಿ ಬದಿ ವ್ಯಾಪಾರಸ್ತರಿಗೆ ಬಿ.ಕೆ. ರವಿಕಾಂತ್ ಸಲಹೆ ಹಾಸನ: ನೋಂದಾವಣಿ ವೇಳೆ ಬೀದಿ ಬದಿ ವ್ಯಾಪಾರಸ್ತರು ಸುಳ್ಳು ಮಾಹಿತಿ ಕೊಡಬಾರದು. ಗುಣಮಟ್ಟದ ಆಹಾರ ನೀಡಬೇಕು. ಯಾರಾದರೂ ಕಾನೂನು ಉಲ್ಲಂಘನೆ ಮಾಡಿದರೇ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ರವಿಕಾಂತ್ ಸಲಹೆ ನೀಡಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಿಲ್ಲಾಡಳಿತ, ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ನಗರ ಜೀವನೋಪಾಯಗಳ ಅಭಿಯಾನ (ಸೇ ನಲ್ಮ್) ಕಾರ್ಯಕ್ರಮದಡಿ ಸ್ವನಿಧಿ ಸಮೃದ್ಧಿ ಯೋಜನೆಯಡಿ ಆಹಾರ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರದ ಗುಣಮಟ್ಟ ಮತ್ತು ಸಂರಕ್ಷಣೆ, ಶುಚಿತ್ವದ, ನೈರ್ಮಲ್ಯದ ಬಗ್ಗೆ ನುರಿತ ತಜ್ಞರಿಂದ ಮಾಹಿತಿ ತಿಳಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರ್ಜಿಯಲ್ಲಿ ಸರಿಯಾದ ಮಾಹಿತಿ ನೀಡಿ ನೋಂದಾವಣಿ ಮಾಡಿಸಿಕೊಳ್ಳುವ ಜವಬ್ಧಾರಿ ಬೀದಿ ಬದಿ ವ್ಯಾಪಾರಸ್ತರ ಮೇಲೆ ಇರುತ್ತದೆ ಎಂದು ಕಾನೂನು ಹೇಳಿದೆ. ಅರ್ಜಿದಾರರು ತಪ್ಪು ಮಾಹಿತಿ ನೀಡಿರುವ ಬಗ್ಗೆ ತಿಳಿದರೇ ಅಂತಹ ನೋಂದಾವಣಿಯನ್ನು ಕೂಡಲೇ ರದ್ದುಗೊಳಿಸುವ ಅಧಿಕಾರಿ ಸಂಬಂಧಪಟ್ಟ ಇಲಾಖೆಗೆ ಇರುತ್ತದೆ. ಜೊತೆಗೆ ಅಂತವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸುತ್ತಾರೆ ನಂತರ ನ್ಯಾಯಾಲಯದಲ್ಲಿ ಅದನ್ನ ಎದುರಿಸಬೇಕು. ಸುಳ್ಳು ಮಾಹಿತಿ, ದ್ರೋಹ ಬಗೆಯುವುದು ಬೇಡ. ಇಂತಹ ಕೃತ್ಯ ಮಾಡಿದರೇ ಅದು ಕಾನೂನಿಗೆ ವಿರುದ್ಧವಾಗುತ್ತದೆ ಎಂದು ಎಚ್ಚರಿಸಿದರು.

ವೃತ್ತಿಗೆ ಆಧಾರವಾಗಿ ಸಂಬಂಧಪಟ್ಟ ದಾಖಲೆ ನೀಡಲಾಗಿರುತ್ತದೆ ಅದನ್ನೆಲ್ಲಾ ಪರಿಶೀಲಿಸಬೇಕು. ಅವರಿಗೆ ತೃಪ್ತಿ ಆದರೇ ಏಳು ದಿನಗಳ ಒಳಗೆ ನೊಂದಾವಣೆ ಆಗಿರವವರಿಗೆ ಪ್ರಮಾಣಪತ್ರ ನೀಡಬೇಕು ಎಂದು ಕಿವಿಮಾತು ಹೇಳಿದರು. ಬೀದಿಬದಿ ವ್ಯಾಪಾರಸ್ತರ ಬಗ್ಗೆ ವೆಬ್ಸೈಟ್ ನಲ್ಲಿ ಪ್ರಚಾರ ಮಾಡಲಾಗುತ್ತದೆ. ಏನಾದರೂ ತಕರಾರು ಇದ್ದರೇ ಮನವಿ ಸಲ್ಲಿಸಬೇಕು. ನಂತರ ೩೦ ದಿನಗಳ ಒಳಗೆ ತೀರ್ಮಾನಕೈಗೊಳ್ಳುತ್ತಾರೆ. ಶರತ್ ಉಲ್ಲಂಘನೆ ಮಾಡಿ ಯಾರು ವ್ಯಾಪಾರ ಮಾಡುವಾಗಿಲ್ಲ ಎಂದು ಸಲಹೆ ನೀಡಿದರು.

ಸಂಚಾರಿ ವ್ಯಾಪಾರಸ್ತರಾದರೇ ಎಲ್ಲು ನಿಲ್ಲಿಸಿ ಟ್ರಾಫೀಕ್ ಗೆ ತೊಂದರೆ ಮಾಡುವಾಗಿಲ್ಲ ಎಂದರು. ಜಿಲ್ಲೆಯ ನಗರ ಪ್ರದೇಶಗಳ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಜನರ ಸ್ಥಿತಿಗಳನ್ನು ಅವಲೋಕನ ಮಾಡುವುದು, ಡೇ ನಲ್ಮ್ ಯೋಜನೆಯ ಅಡಿಯಲ್ಲಿ ಸಾಧನೆಯಾಗಿರುವ ಜಿಲ್ಲೆಯ ಪ್ರಗತಿ, ಯೋಜನೆಯ ಪರಿಣಾಮಕಾರಿ ಅನಷ್ಠಾನಕ್ಕೆ ಎದುರಾಗುತ್ತಿರುವ ಸವಾಲುಗಳು ಹಾಗೂ ಪರಿಹಾರೋಪಯಗಳ ಬಗ್ಗೆ ಚರ್ಚೆ ಮಾಡಲಾಯಿತು.

ಪಿ.ಎಂ.ಸ್ವ ನಿಧೀ ಯೋಜನೆಯಡಿ ಬೀದಿಬದಿ ವ್ಯಾಪಾರಸ್ತರಿಗೆ ಡಿಜಿಟಲ್ ವಹಿವಾಟಿನ ಬಗ್ಗೆ ತಿಳಿಸುವುದು ಮಾಡಲಾಯಿತು. ಇದೆ ವೇಳೆ ಬೀದಿ ಬದಿ ವ್ಯಾಪಾರಸ್ತರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೆ ಪರಿಹಾರೋಪಯ ನೀಡಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಸತೀಶ್ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂರಕ್ಷಣಾಧಿಕಾರಿ ಬಸವೇಗೌಡ, ಡೇ-ನಲ್ಮ್ ಜಿಲ್ಲಾ ಕೌಶಲ್ಯಾಭಿವೃದ್ಧಿ ವ್ಯವಸ್ಥಾಪಕರಾದ ಕೋಮಲ ರಾಜಶೇಖರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ವ್ಯವಸ್ತಾಪಕರಾದ ರವೀಂದ್ರ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *