*ಅಂಗಾಂಶ ಕೃಷಿ ಆಲೂಗಡ್ಡೆ ಕುಡಿ ಕಾಂಡ ತಂತ್ರಜ್ಞಾನ (ARC)*

ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಟೆಕ್ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ ಅಂಗಾಂಶ ಕೃಷಿ *ಆಲೂಗಡ್ಡೆ ಕುಡಿ ಕಾಂಡ ತಂತ್ರಜ್ಞಾನ (ARC potato)* ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ತಂತ್ರಜ್ಞಾನದಲ್ಲಿ ರೋಗ ರಹಿತ ಆಲೂಗಡ್ಡೆ ಸಸಿಗಳನ್ನು ಪ್ರಯೋಗಾಲಯದಲ್ಲಿ ಅಂಗಾಂಶ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ. ಅಂಗಾಂಶ ತಂತ್ರಜ್ಞಾನದಿಂದ ಬಂದ ಗಿಡಗಳ ತುದಿಯನ್ನು ಕೋಕೋ ಪಿಟ್‌ಗಳಲ್ಲಿ ತಾಯಿ ಸಸ್ಯಗಳಾಗಿ ಬಳಸಲಾಗುತ್ತದೆ. ಈ ರೀತಿ ಆರು ವಾರಗಳಲ್ಲಿ, ಒಂದು ತಾಯಿಯ ಸಸ್ಯವನ್ನು 8 ಪಟ್ಟು ಸಸ್ಯಾಭಿವೃದ್ಧಿ ಮಾಡಬಹುದು.

ಕುಡಿ ಕಾಂಡ ಸಸ್ಯಗಳು ಕೋಕೋ ಪಿಟ್‌ಗಳಲ್ಲಿ ಬೇರು ಬಿಟ್ಟ ನಂತರ ಕೃಷಿ ಭೂಮಿಗೆ ನಾಟಿ ಮಾಡಲಾಗುವುದು.ಇದರಿಂದ ಗುಣಮಟ್ಟದ ಇಳುವರಿಯನ್ನು ಪಡೆಯಬಹುದಾಗಿದೆ. ಇದರಿಂದ ರೈತರಿಗೆ ಆಗುವ ಅನುಕೂಲಗಳು ಏನೆಂದರೇ ಸಸ್ಯಗಳ ಪ್ರಸರಣ ಸರಳ, ಅಗ್ಗದ ಮತ್ತು ಅನುಕೂಲಕರ ವಿಧಾನವಾಗಿದೆ.

ಹೆಚ್ಚಿನ ತಾಂತ್ರಿಕ ಪರಿಣಿತಿಯ ಅಗತ್ಯವಿಲ್ಲ.ಕತ್ತರಿಸಿದ ಸಸ್ಯಗಳ ಮೂಲಕ ಉತ್ಪತ್ತಿಯಾಗುವ ಸಸ್ಯಗಳು ಹೆಚ್ಚು ಆನುವಂಶಿಕ ಬದಲಾವಣೆಗಳಿಲ್ಲದೆ ಏಕರೂಪವಾಗಿರುತ್ತವೆ.ಕೆಲವು ಸಸ್ಯಗಳಿಂದ ಹೆಚ್ಚಿನ ಸಂಖ್ಯೆಯ ಸಸ್ಯಗಳನ್ನು ತಯಾರಿಸಬಹುದು.ಹೆಚ್ಚಿನ ಸ್ಥಳಾವಕಾಶದ ಅಗತ್ಯವಿಲ್ಲ.

ಗಮನಿಸ ಬೇಕಾದ ವಿಷಯವೆಂದರೆ ಬೇರು ಕುಡಿ ಕಾಂಡ ಸಸಿಗಳ ಅವಶ್ಯಕತೆ ಎಕರೆಗೆ 30,000 ದಿಂದ 33,000 ಸಸಿಗಳು. ಈ ತಂತ್ರಜ್ಞಾನದ ಸಸಿಗಳು ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲಿನಲ್ಲಿ ಇರುವ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ದೊರೆಯುತ್ತದೆ.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ|| ಆಕಾಶ್ ಡಿ ಸಹಾಯಕ ಪ್ರಾದ್ಯಾಪಕರು ಜೈವಿಕ ತಂತ್ರಜ್ಞಾನ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ ಹಾಗೂ ಗ್ರಾಮದ ರೈತರಾದ ನಾಗೇಂದ್ರ ,ಮಂಜೇಗೌಡ, ದ್ಯಾವಮ್ಮ,ನಾಗರಾಜ ,ನಿತ್ಯಾ ,ಕಮಲಮ್ಮ ಮುಂತಾದವರು ಪಾಲ್ಗೊಂಡಿದ್ದರು. ನಂತರ ಮಾತನಾಡಿದ *ಡಾ|| ಆಕಾಶ್ ಡಿ* ರವರು ಅಂಗಾಂಶ ಕೃಷಿ ಆಲೂಗೆಡ್ಡೆ ಕುಡಿ ಕಾಂಡ ತಂತ್ರಜ್ಞಾನ (ARC potato) ವೈಶಿಷ್ಟತೆಯನ್ನು ಹಾಗೂ ಪ್ರಾಮುಖ್ಯತೆಯನ್ನೂ ತಿಳಿಸಿಕೊಟ್ಟರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *