
ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ತೆಂಗಿನ ಬೆಳೆಯ ವಿಚಾರ ಸಂಕಿರಣ* ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕುಡುಕುಂದಿ ಗ್ರಾಮದಲ್ಲಿ ತೆಂಗು ಪ್ರಮುಖ ಬೆಳೆಯಾಗಿದ್ದು ಇದರ ಕುರಿತಾದ ಮಾಹಿತಿಯನ್ನು ರೈತರಿಗೆ ತಿಳಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಮುಖಾಂತರ ರೈತರಿಗೆ ತೆಂಗು ಬೆಳೆಯಲು ಅವಶ್ಯವಿರುವ ಮಾಹಿತಿಗಳಾದ ಭೂಮಿ ಸಿದ್ಧತೆ, ತಾಯಿ ಬೀಜಗಳ ಆಯ್ಕೆ, ಸಸಿ ಮಾಡುವ ವಿಧಾನ, ಗೊಬ್ಬರ ಹಂಚಿಕೆ ಪ್ರಮಾಣ ಮತ್ತು ವಿಧಾನ, ನೀರಾವರಿ ಇನ್ನು ಮುಂತಾದ ಸಮಗ್ರ ಬೇಸಾಯ ಕ್ರಮಗಳು, ಪೋಷಕಾಂಷಗಳ ನಿರ್ವಹಣೆ ಹಾಗೂ ರೋಗಗಳಾದ ಕಾಂಡ ರಸ ಸೋರುವಿಕೆ, ಅಣಬೆ ರೋಗ, ಸುಳಿಕೊಳೆ ರೋಗ, ಎಲೆ ಚುಕ್ಕೆ ಹಾಗೂ ಪ್ರಮುಖ ಕೀಟ ಬಾಧೆಗಳಾದ ರೈನೋಸರಸ್ ದುಂಬಿ, ಕೆಂಪು ಮೂತಿ ಹುಳು, ಬಿಳಿ ಹುಳ ಮುಂತಾದ ರೋಗದ ಲಕ್ಷಣಗಳು ಹಾಗೂ ನಿರ್ವಹಣಾ ಕ್ರಮಗಳು, ಕೊಯ್ಲು ಮತ್ತು ಇಳುವರು, ತೆಂಗಿನ ಬೇಸಾಯದ ವೆಚ್ಚ ಮತ್ತು ಆದಾಯ, ಕನಿಷ್ಠ ಬೆಂಬಲ ಬೆಲೆ , ತೆಂಗು ಸಂಸ್ಕರಣೇ ಮತ್ತು ಕೊಬ್ಬರಿ ತಯಾರಿಸುವ ವಿಧಾನ, ಮೌಲ್ಯವರ್ಧಿತ ತೆಂಗು ಉತ್ಪನ್ನಗಳು ಸೇರಿದಂತೆ ತೆಂಗು ಬೆಳೆಯ ಕುರಿತು ಸಮಗ್ರ ಮಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ||ಎ. ನಟರಾಜ, ಡಾ|| ಮಂಜುನಾಥ ಹೆಚ್, ಡಾ|| ಅನಿತಾ ಎಮ್. ಎಸ್, ಡಾ||ಹರ್ಷಿತ. ಎ.ಪಿ, ಡಾ||ಗಗನ ಎಮ್. ಡಿ ಹಾಗೂ ಗ್ರಾಮದ ರೈತರಾದ ಚಂದ್ರೇಗೌಡ, ಕುಮಾರ ಸ್ವಾಮಿ, ಶಾರದಮ್ಮ, ಗಂಗಾಧರ್, ನಂಜೇಗೌಡ, ರವಿ, ರಮೇಶ್, ಬೋರೇಗೌಡ, ಜಯಮ್ಮ ಮುಂತಾದವರು ಪಾಲ್ಗೊಂಡಿದ್ದರು.
