ಹಾಸನ: ನಗರದ ಅರಳೀಕಟ್ಟೆ ವೃತ್ತ ಬಳಿ ಇರುವ ಹಾಸನ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಕೋ-ಆಪರೇಟಿವ್ ಸೊಸೈಟಿಯಿಂದ ಮೊದಲ ಬಾರಿಗೆ ೨೦೨೪ರ ನೂತನ ವರ್ಷದ ಕ್ಯಾಲೆಂಡರನ್ನು ಸೊಸೈಟಿ ಅಧ್ಯಕ್ಷರಾದ ಡಿ. ರಮೇಶ್ ಮತ್ತು ಸಂಘದ ಜಿಲ್ಲಾಧ್ಯಕ್ಷರಾದ ಅಣ್ಣಪ್ಪ ಅವರು ಬಿಡುಗಡೆಗೊಳಿಸಿದರು.

ಸೊಸೈಟಿ ಅಧ್ಯಕ್ಷರಾದ ಡಿ. ರಮೇಶ್ ಮಾತನಾಡಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಕೋ-ಆಪರೇಟಿವ್ ಸೊಸೈಟಿ ಸ್ಥಾಪನೆಯಾಗಿ ೬ ತಿಂಗಳು ಕಳೆದಿದ್ದು, ನಮ್ಮ ಬ್ಯಾಂಕ್ ಹಂತ ಹಂತವಾಗಿ ಸಾಕಷ್ಟು ಮುಂದುವರೆಯುತ್ತಾ ಬಂದಿದ್ದು, ೧೦೫೦ ಜನ ಸದಸ್ಯರು ಷೇರುದಾರರಾಗಿದ್ದು, ಈಗಾಗಲೇ ೨೦ ಲಕ್ಷ ಸಾಲವನ್ನು ನೀಡಲಾಗಿದೆ.

ಪ್ರತಿ ತಿಂಗಳು ೬೦ ಸಾವಿರ ಆರ್.ಡಿ. ಸಂಗ್ರಹವಾಗುತ್ತಿದೆ. ಹೊಸ ಷೇರುದಾರರು ಸೇರ್ಪಡೆಯಾಗುತ್ತಿದ್ದಾರೆ. ೨೬ ಲಕ್ಷವನ್ನು ೨೬ ಜನರಿಗೆ ಸಾಲವಾಗಿ ಕೊಡಲಾಗಿದೆ ಎಂದರು.

ನಮ್ಮ ಸೊಸೈಟಿ ಆರಂಭವಾದ ಆರು ತಿಂಗಳಲ್ಲಿ ೫೭ ಲಕ್ಷ ಚಾಲ್ತಿಯಲ್ಲಿ ವ್ಯವಹಾರ ನಡೆದಿದೆ. ಮೊದಲ ವರ್ಷದಲ್ಲೆ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದ್ದು, ಇನ್ನು ಮುಂದೆ ಪ್ರತಿವರ್ಷವೂ ಕೂಡ ಇಂತಹ ಕಾರ್ಯಕ್ರಮವನ್ನು ಆಯೋಜಿಸಿ ಪ್ರತಿ ಶಿಕ್ಷಕರ ಮಿತ್ರರಿಗೆ ಹಾಗೂ ಪ್ರತಿ ಸದಸ್ಯರಿಗೆ ಕ್ಯಾಲೆಂಡರ್ ತಲುಪಿಸುವ ಕೆಲಸ ಮಾಡಲಾಗುವುದು.

ಶಿಕ್ಷಕರಿಗೆ ಮತ್ತು ಶಿಕ್ಷಕರೇತರಿಗೆ ಮಾಡಿರುವ ಸೊಸೈಟಿಯಾಗಿದ್ದು, ಎಲ್ಲಾ ಶಿಕ್ಷಕರಿಗೆ ಇದರ ಲಾಭ ಸಿಗಬೇಕು ಎನ್ನುವ ದೃಷ್ಠಿಯಲ್ಲಿ ಸೊಸೈಟಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಣ್ಣಪ್ಪ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರದೆ ಸೊಸೈಟಿ ಮಾಡಲಾಗಿದ್ದು, ಪ್ರತಿ ವಿಷಯ ತಿಳಿಯಲು ಶಿಕ್ಷಕರಿಗೆ ಕ್ಯಾಲೆಂಡರ್ ಸಹಕಾರಿಯಾಗಲಿದೆ. ಉತ್ತಮ ಕೆಲಸದ ಮೂಲಕ ಎಲ್ಲಾರ ಸಹಕಾರದಲ್ಲಿ ಈ ಸೊಸೈಟಿ ಯಶಸ್ಸನ್ನು ಕಾಣಲಿ. ಶಿಕ್ಷಕರಿಗೆ ಇಂತಹ ಸೊಸೈಟಿಯು ಅತ್ಯವಶ್ಯಕವಾಗಿದ್ದು, ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆದು ಹೆಚ್ಚಿನ ಸಾಲವನ್ನು ಕೊಡುವ ಶಕ್ತಿ ಸಿಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಬಿ.ಎಲ್. ಹಿರಿಯಣ್ಣ, ಗೌರವ ಕಾರ್ಯದರ್ಶಿ ವೈ.ಎಸ್. ತಮ್ಮಣ್ಣಶೆಟ್ಟಿ, ನಿರ್ದೇಶಕರಾದ ಹೆಚ್.ಆರ್. ಪೂರ್ಣೇಶ್, ಬಿ.ವಿ. ರೇವಣ್ಣ, ಗೌಡ ಲೋಹಿತ್ ಜವರಪ್ಪ, ಧರ್ಮಪ್ಪ ನಾಯಕ, ಬಿ.ಹೆಚ್. ರಾಜು, ಹೆಚ್.ಡಿ. ದಿನೇಶ್, ಎಂ.ಆರ್. ಶ್ರೀನಿವಾಸ್, ಡಿ.ಕೆ. ರಾಘವೇಂದ್ರ, ಬಿ.ಎನ್. ಸತೀಶ್ ಕುಮಾರ್, ಎನ್.ಎಸ್. ಸತೀಶ್, ಎಂ.ಹೆಚ್. ಮೀನಾಕ್ಷಿ, ಎಸ್.ಎನ್. ಶುಭಮಂಗಳ, ಕೆ.ಎನ್. ಕಾಂತರಾಜು, ಕೆ.ಸಿ. ರೇಣುಕಾಪ್ರಸಾದ್, ಎಸ್. ಮಹಾಲಕ್ಷ್ಮಿ, ಆರ್.ಸಿ. ಕೇಶವಮೂರ್ತಿ, ಯು.ಎನ್. ಅಶೋಕ್, ಅಂತೋಣಿಸ್ವಾಮಿ ಹಾಗೂ ಕಾರ್ಯದರ್ಶಿ ಎಸ್.ಜೆ. ದಿವ್ಯ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *